Saturday, December 6, 2025
Saturday, December 6, 2025

Klive news Special Article ಬದುಕಿನ ಹಲವು ಪಾಠ ಕಲಿಸುವ ಹಾಸ್ಟೆಲ್ ಜೀವನ

Date:

ಉನ್ನತ ಶಿಕ್ಷಣ, ಸ್ವಾವಲಂಬಿ ಬದುಕನ್ನ ತಮ್ಮದಾಗಿಸುವ ನಿಟ್ಟಿನಲ್ಲಿ ಬಹುತೇಕ ವಿದ್ಯಾರ್ಥಿಗಳು ತಮ್ಮ ಊರನ್ನು, ತಂದೆ ತಾಯಿ ಕುಟುಂಬದವರನ್ನು ತೊರೆದು ವಿದ್ಯಾಭ್ಯಾಸಕ್ಕೆಂದು ಸೇರುವ ಸ್ಥಳವೇ ಹಾಸ್ಟೆಲ್ ಗಳು..

ಹಾಸ್ಟೆಲ್ ಎಂಬ ಪದವನ್ನ ಕೇಳಿದರೆ ಕೆಲವರಿಗೆ ಭಯ ಶುರುವಾಗುತ್ತದೆ.. ಎಲ್ಲಾ ಹಾಸ್ಟೆಲ್ ಗಳೂ ಜೈಲುಗಳಲ್ಲ… ಪ್ರತಿ ಹಾಸ್ಟೆಲ್ ಗಳೂ ಹಲವಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿವೆ..
ಅದರಲ್ಲೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ರೂಪಿತವಾಗಿರುವ ಸರ್ಕಾರಿ ಹಾಸ್ಟೆಲ್ ಗಳು ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಬದುಕಿನ ಮರೆಯಲಾಗದ ಬಂಧು.

Klive news Special Article ಮೊದಲೆಲ್ಲಾ ಮನೆಯಲ್ಲಿ ಹೇಳಿದ ಮಾತು ಕೇಳದ ಹಠಮಾರಿ ಮಕ್ಕಳನ್ನು ಹಾಸ್ಟೆಲ್ ಗೆ ಸೇರಿಸುವ ಪದ್ದತಿ ಇತ್ತು.. ಈಗ ಕಾಲ ಬದಲಾಗಿದೆ.. ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಪರಿಣಿತಿಯನ್ನು ಪಡೆಯಲಿ ಎನ್ನುವುದು ಪಾಲಕರ ಆಶಯ. ಆದ್ದರಿಂದ ಹಾಸ್ಟೆಲ್ ಗೆ ಸೇರುವವರ ಸಂಖ್ಯೆ ಹೆಚ್ಚುತ್ತಲೇ ಇದೆ…

ಹಾಗಾಗಿಯೇ ಶಾಲಾ / ಕಾಲೇಜು ಶಿಕ್ಷಣದೊಂದಿಗೆ ಜೀವನ ಶಿಕ್ಷಣವನ್ನೂ ನೀಡುವಲ್ಲಿ ವಿದ್ಯಾರ್ಥಿನಿಲಯಗಳು ಮುಂಚೂಣಿಯಲ್ಲಿ ನಿಲ್ಲುತ್ತವೆ.

ಹಾಸ್ಟೆಲ್ ಗಳಲ್ಲಿ ಇದ್ದು ವಿದ್ಯಾಭ್ಯಾಸ ಮಾಡುವುದು ಸುಲಭದ ಮಾತಲ್ಲ. ತನ್ನ ಕುಟುಂಬದವರಿಂದ ಪ್ರೀತಿ ಪಾತ್ರರಿಂದ ದೂರವಿರುವ ನೋವು ಒಂದು ಕಡೆಯಾದರೆ, ಬೇಕಿರುವುದನ್ನು ತಿನ್ನುವುದು , ಮನಬಂದಾಗ ಊರಿಗೆ ಹೋಗಲು ಆಗದಿರುವ ಸಂಕಟ ಇನ್ನೊಂದು ಕಡೆ..

ಕೆಲವೊಂದು ಹಾಸ್ಟೆಲ್ ಗಳಲ್ಲಿ ನಿರ್ದಿಷ್ಟ ಸಮಯದಲ್ಲಿ ಮಾತ್ರವೇ ಮೊಬೈಲ್ ಬಳಸಬೇಕು ಎಂಬ ನಿಯಮವಿರುತ್ತದೆ. ಹಿತ ಮಿತವಾಗಿ ಕುಟುಂಬದ ಸದಸ್ಯರೊಂದಿಗೂ ಕೂಡ ನಿರ್ದಿಷ್ಟ ಸಮಯದಲ್ಲಿ ಮಾತ್ರ ಮೊಬೈಲ್ ನಲ್ಲಿ ಮಾತನಾಡುವ ಪದ್ಧತಿಗೆ ಒಗ್ಗಿಕೊಳ್ಳುವ ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ದೂರವಿದ್ದು, ಕಲಿಕೆಯತ್ತ ಹೆಚ್ಚು ಗಮನ ಹರಿಸಲು ಹಾಸ್ಟೆಲ್ ವಾತಾವರಣವು ಸಹಕಾರಿಯಾಗಿರುತ್ತವೆ.

ಕಲಿಕೆ, ಶಿಕ್ಷಣವೆಂದರೆ ಕೇವಲ ಓದು, ಬರಹವಷ್ಟೇ ಅಲ್ಲ. ತಮ್ಮ ದೈನಂದಿನ ಕೆಲಸಗಳನ್ನು ತಾವೇ ಮಾಡಿಕೊಳ್ಳುವ ಜೀವನ ಶಿಕ್ಷಣವೂ ಎಲ್ಲರಿಗೂ ಬೇಕಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ನಿಲಯಗಳಲ್ಲಿ ಸಹಬಾಳ್ವೆ, ಹೊಂದಾಣಿಕೆ, ಶಿಸ್ತುಪಾಲನೆ, ಶುಚಿತ್ವದಂತಹ ಜೀವನ ಶಿಕ್ಷಣವನ್ನು ವಿದ್ಯಾರ್ಥಿ ನಿಲಯದ ಬದುಕು ರೂಢಿಗತ ಮಾಡುತ್ತದೆ. ಇದರೊಂದಿಗೆ ಹಾಸ್ಟೆಲ್ ಗಳಲ್ಲಿ ಜಾತಿ, ಧರ್ಮ, ಪ್ರಾಂತ್ಯ, ಮೇಲು ಕೀಳು ಎಂಬ ಭಾವವಿರುವುದಿಲ್ಲ.
ವಿವಿಧ ಕಡೆಗಳಿಂದ ಬಂದ ವಿದ್ಯಾರ್ಥಿಗಳು ಒಂದೇ ಕುಟುಂಬವೆಂಬಂತೆ ಇರುತ್ತಾರೆ.

ತರಗತಿ ಕೊಠಡಿಯಲ್ಲಿ ಕೇಳಿದ ಪಾಠದ ಅಂಶಗಳನ್ನು ಹಾಸ್ಟೆಲ್ ಸ್ನೇಹಿತರೊಡನೆ ರ್ಚಚಿಸಿದಾಗ ಕಲಿತ ವಿಷಯ ಹೆಚ್ಚು ಪರಿಪಕ್ವಗೊಳ್ಳುತ್ತದೆ.

ಯಾವುದೇ ಯೋಜನಾಕಾರ್ಯಗಳನ್ನು ಸಿದ್ಧಪಡಿಸುವಾಗ, ಪ್ರಾಯೋಗಿಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವಾಗ ಮನದಲ್ಲಿ ಮೂಡಬಹುದಾದ ಕುತೂಹಲ,ಗೊಂದಲಗಳಿಗೆ ಸೂಕ್ತ ಉತ್ತರಗಳನ್ನು ಕ್ರಿಯಾಶೀಲ ಚಿಂತನೆಗಳ ಮೂಲಕ ಪಡೆದುಕೊಳ್ಳಲು ಹಾಸ್ಟೆಲ್ ನ ಗುಂಪು ಕಲಿಕೆ ಸಹಾಯಕವೆನಿಸುತ್ತದೆ.

ಅದಲ್ಲದೇ ಆರೋಗ್ಯ ಸಮಸ್ಯೆ ಗಳು ಎದುರಾದಾಗ , ಮನಸ್ಸಿಗೆ ನೋವುಂಟಾದಾಗ, ಯಾವುದೋ ಸ್ಪರ್ಧೆಯಲ್ಲಿ ಸೋತಾಗ ಪ್ರತಿ ಹಂತದಲ್ಲೂ ಮಾರ್ಗದರ್ಶನ ನೀಡಲು, ಹುರಿದುಂಬಿಸಲು ಹಾಸ್ಟೆಲ್ ವಾರ್ಡನ್ , ಸಹಪಾಠಿಗಳು ಸದಾ ಜೊತೆಯಾಗುತ್ತಾರೆ..

ವಿದ್ಯಾರ್ಥಿಗಳು ಶಿಸ್ತುಬದ್ಧ ಜೀವನ ಹಾಗೂ ಸಮಯ ಪ್ರಜ್ಞೆ, ತಾಳ್ಮೆ ಯನ್ನು ಚೆನ್ನಾಗಿ ಅರಿತುಕೊಳ್ಳುವುದು ಹಾಸ್ಟೆಲ್ ಗಳಲ್ಲಿಯೇ. ಮನೆಯಲ್ಲಿ ಅಡಿಗೆ ಮಾಡುವಾಗ ಸ್ವಲ್ಪ ವ್ಯತ್ಯಾಸವಾದರೂ ಸಹಿಸಿಕೊಳ್ಳದವರಿಗೆ ಹಾಸ್ಟೆಲ್ ಆಹಾರ ಪದ್ದತಿ, ಅನ್ನದ ಮಹತ್ವವನ್ನು ತಿಳಿಸುತ್ತದೆ.. ತಮ್ಮ ಹತ್ತಿರ ಇರುವುದರಲ್ಲೇ ಸಂತೋಷ ಪಡುವ ಗುಣ ಬೆಳೆಸಿಕೊಳ್ಳಲು ಹಾಸ್ಟೆಲ್ ಜೀವನ , ಸಹಕಾರಿ.

ಸರ್ಕಾರಿ ಹಾಸ್ಟೆಲ್ ಗಳು ದೂರದೂರಿನ ವಿದ್ಯಾರ್ಥಿಗಳ ಓದಿಗೆ ಅನುಕೂಲಕ್ಕಾಗಿ ಸ್ಥಾಪನೆಗೊಂಡ ವಸತಿ ನಿಲಯಗಳು ಅದೆಷ್ಟು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿವೆಯೋ ಏನೋ..?

ಆದರೆ ಕೆಲವು ಹಾಸ್ಟೆಲ್ ಗಳ ಅವ್ಯವಸ್ಥೆಯನ್ನು ನೋಡಿದರೆ ಅಲ್ಲಿ ವಾಸಿವಿರುವವರು ವಿದ್ಯಾರ್ಥಿಗಳೋ ಅನಾಗರಿಕರು ಎಂಬ ಅನುಮಾನ ಮೂಡುತ್ತದೆ.

ಸರ್ಕಾರಿ ಹಾಸ್ಟೆಲ್ ಗಳು ನಮ್ಮ ಸಾರ್ವಜನಿಕ ಆಸ್ತಿ. ವಿದ್ಯಾರ್ಥಿಗಳು ನೀರು ಆಹಾರ ವಿದ್ಯುತ್ತನ್ನು ಎಗ್ಗಿಲ್ಲದೇ ಬಳಸುವುದನ್ನ ಕಡಿಮೆ ಮಾಡಬೇಕು. ಊಟದ ತಟ್ಟೆಯಲ್ಲಿರುವ ಅನ್ನ ಹೊಟ್ಟೆಗೆ ಸೇರುವುದಕ್ಕಿಂತ ಹೆಚ್ಚು ಕಸದ ಬುಟ್ಟಿಯನ್ನು ಸೇರುತ್ತದೆ. ಕೆಲವರಂತೂ ಬೇಕಂತಲೇ ಹಾಕಿಸಿಕೊಂಡು ಚೆಲ್ಲುತ್ತಾರೋ ಏನೋ… ದಿನವೂ ಊಟ ಮಾಡುವವರಿಗೆ ಊಟದ ಪ್ರಮಾಣ ಗೊತ್ತಿರಬೇಕು.

ನಲ್ಲಿಯಲ್ಲಿ ನೀರು ಸುರಿಯುತ್ತಲೇ ಇದ್ದರೂ , ಕೊಠಡಿಯಲ್ಲಿ ಫ್ಯಾನ್ ತಿರುಗುತ್ತಲೇ ಇದ್ದರೂ, ದೀಪ ಉರಿಯುತ್ತಲೇ ಇದ್ದರೂ, ಅದರ ಪರಿವೇ ಇಲ್ಲದ ಹಾಗೆ ಇರುವ ವಿದ್ಯಾರ್ಥಿಗಳು ತಮ್ಮ ಬೇಜವಾಬ್ದಾರಿತನವನ್ನು ತೋರುವುದನ್ನ ನಿಲ್ಲಿಸಬೇಕು.

ಉಚಿತವಾಗಿ ಏನೇ ದೊರೆತರೂ ಅದಕ್ಕೆ ಬೆಲೆ ಕಡಿಮೆ ಎಂಬ ಮಾತಿದೆ.

ಸರ್ಕಾರಿ ಹಾಸ್ಟೆಲ್ ಗಳಲ್ಲಿ ತಮಗೆ ಸಿಕ್ಕ ಸೌಲಭ್ಯಗಳೂ ಮುಂದೆ ಬರುವ ವಿದ್ಯಾರ್ಥಿಗಳಿಗೂ ತಲುಪಿಸುವ ಕರ್ತವ್ಯ ಹಾಸ್ಟೆಲ್ ವಿದ್ಯಾರ್ಥಿಗಳದ್ದೇ ಆಗಿದೆ..

ಹಾಸ್ಟೆಲ್ ಗಳು ಹಲವಾರು ವಿದ್ಯಾರ್ಥಿಗಳಿಗೆ ಸುಂದರ ನೆನಪುಗಳ ತಾಣವೂ ಹೌದು. ಹಾಗಾಗಿ ಅವುಗಳನ್ನು ಉತ್ತಮ ರೀತಿಯಲ್ಲಿ ರಕ್ಷಿಸುವುದು , ಕಾಪಾಡಿಕೊಳ್ಳುವುದು, ಮುಂದಿನ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡುವುದು ಹಾಸ್ಟೆಲ್ ವಿದ್ಯಾರ್ಥಿಗಳ ಧ್ಯೇಯವಾಗಲಿ…

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...