Thursday, December 18, 2025
Thursday, December 18, 2025

Rotaract Club Shivamogga ಶಿವಮೊಗ್ಗ ಉತ್ತರ ರೋಟರ್ಯಾಕ್ಟ್ ಕ್ಲಬ್ ನಿಂದ ಅಪೂರ್ವ ಸೇವಾ ಚಟುಚಟಿಕೆ

Date:

Rotaract Club Shivamogga ಶಿವಮೊಗ್ಗ ನಗರದ ಶ್ರೀರಾಮಪುರದಲ್ಲಿರುವ ಹಕ್ಕಿಪಿಕ್ಕಿ ಕ್ಯಾಂಪ್‌ನಲ್ಲಿರುವ ನಿವಾಸಿಗಳಿಗೆ ರೋಟರ‍್ಯಾಕ್ಟ್ ಕ್ಲಬ್ ಶಿವಮೊಗ್ಗ ಉತ್ತರ ಸಂಸ್ಥೆ ವತಿಯಿಂದ ಉಪಯೋಗಿಸಲು ಅಗತ್ಯವಿರುವ ವಸ್ತುಗಳನ್ನು ವಿತರಿಸಲಾಯಿತು.

ರೋಟರ‍್ಯಾಕ್ಟ್ ಕ್ಲಬ್ ಶಿವಮೊಗ್ಗ ಉತ್ತರ ಎಲೈಟ್ ಸಂಸ್ಥೆಯ ಹಾಗೂ ರೋಟರಿ ಶಿವಮೊಗ್ಗ ಉತ್ತರ ಕ್ಲಬ್ ಸದಸ್ಯರ ಮನೆಗಳಲ್ಲಿ ಉಪಯೋಗಿಸದೇ ಇರುವ ಹಾಗೂ ಮರುಬಳಕೆಗೆ ಮಾಡುವಂತಹ ವಸ್ತುಗಳಾದ ಬಟ್ಟೆ, ಪಾತ್ರೆ, ಪ್ಲಾಸ್ಟಿಕ್ ವಸ್ತುಗಳು, ಆಟಿಕೆಗಳು ಸೇರಿದಂತೆ ವಿವಿಧ ವಸ್ತುಗಳನ್ನು ಸಂಗ್ರಹಿಸಿ ಹಕ್ಕಿಪಿಕ್ಕಿ ಕ್ಯಾಂಪ್‌ನಲ್ಲಿರುವ ನಿವಾಸಿಗಳಿಗೆ ವಿತರಿಸಲಾಯಿತು.

Rotaract Club Shivamogga ರೋಟರ‍್ಯಾಕ್ಟ್ ಸದಸ್ಯರು ಹಾಗೂ ರೋಟರಿ ಸಂಸ್ಥೆಗಳ ಸದಸ್ಯರ ಮನೆ ಮನೆಗಳಿಗೆ ತೆರಳಿದ ಸದಸ್ಯರು, ದಿನಪತ್ರಿಕೆ, ವಾರಪತ್ರಿಕೆ, ಪುಸ್ತಕಗಳು, ರಟ್ಟಿನ ಡಬ್ಬ ಹಾಗೂ ಪ್ಲಾಸ್ಟಿಕ್‌ಗಳನ್ನು ಸಂಗ್ರಹಿಸಿ ಮಾರಾಟ ಮಾಡಿದ ನಂತರದಲ್ಲಿ ರೋಟರ‍್ಯಾಕ್ಟ್ ಕ್ಲಬ್ ಶಿವಮೊಗ್ಗ ಉತ್ತರ ಸಂಸ್ಥೆ ಸದಸ್ಯರು ಅಗತ್ಯ ಮನೆ ಬಳಕೆ ವಸ್ತುಗಳನ್ನು ತೆಗೆದುಕೊಂಡು ಹಂಚಿ ಸೇವಾ ಕಾರ್ಯ ನಡೆಸಿದರು.

ರೋಟರ‍್ಯಾಕ್ಟ್ ಕ್ಲಬ್ ಶಿವಮೊಗ್ಗ ಉತ್ತರ ಸಂಸ್ಥೆಯ ಸದಸ್ಯರು ನಿರಂತರವಾಗಿ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ರೋಟರ‍್ಯಾಕ್ಟ್ ಅಧ್ಯಕ್ಷ ಆದಿತ್ಯ, ಕಾರ್ಯದರ್ಶಿ ಧನ್ವಿ ರಾವ್, ಖಜಾಂಚಿ ಯಶವಂತ್ ಮತ್ತು ಸದಸ್ಯರಾದ ತೃಪ್ತಿ ಭಟ್, ಪೂರ್ವಿಕ, ಚಂದನ್, ಅನನ್ಯ, ಮೃತ್ಯುಂಜಯ ಮತ್ತು ಸುಂದರ್ ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.

ಯುವ ರೋಟರ‍್ಯಾಕ್ಟ್ ಸದಸ್ಯರ ಜೊತೆ ಕೈಜೋಡಿಸಲು ಆಸಕ್ತಿ ಇರುವವರು ಸಂಪರ್ಕಿಸಬೇಕಾದ ಮೊಬೈಲ್‌ಸಂಖ್ಯೆ 9606328353 ಮತ್ತು 7760498719 ಆಗಿರುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Interact Club ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ – ರಮೇಶ್

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್ ಸಹಕಾರಿ ಎಂದು ಕ್ಷೇತ್ರ...

Veereshwar Punyashram Samskruth School ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾಯಕ ನಿಜಗುಣಿ ಮಂಗಿ ಅವರ ಹಿಂದೂಸ್ತಾನಿ ಗಾಯನ

Veereshwar Punyashram Samskruth School ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ...

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...