9 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಭಾರತೀಯ ವೈದ್ಯಕೀಯ ಸಂಘ , ಶಿವಮೊಗ್ಗ ಶಾಖೆಯಲ್ಲಿ ಆಚರಿಸಲಾಯಿತು .
ವೈದ್ಯ ಸಮೂಹಕ್ಕೆ ಯೋಗ ದಿನದ ಪಠ್ಯದ ಪ್ರಕಾರ ಅಷ್ಟಾಂಗ ಯೋಗ ಪಟುಗಳು , ಅಮೃತ ಯೋಗ ಕೇಂದ್ರದ ಶ್ರೀ . ಆದಿತ್ಯ ಹಾಗು ಕುಮಾರಿ ಅನನ್ಯ ಅವರು ಯೋಗ ಕಾರ್ಯಕ್ರಮ ನಡೆಸಿದರು .
Indian Medical Association ಯೋಗವು 6,000 ವರ್ಷಕ್ಕೂ ಹಳೆಯದಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದ್ದು ವಿಶ್ವಾದ್ಯಂತ ಹೆಚ್ಚಿನ ಜನರು ತಮ್ಮ ಮಾನಸಿಕ ಒತ್ತಡ ಮತ್ತು ದೈಹಿಕ ಸೌಂದರ್ಯಕ್ಕಾಗಿ ಯೋಗದ ಮೊರೆ ಹೋಗುತ್ತಿದ್ದಾರೆ . ಯೋಗದ ಪ್ರಾಮುಖ್ಯತೆ ಅರಿತ ಜನ ತಮ್ಮ ಉತ್ತಮ ಆರೋಗ್ಯಕ್ಕಾಗಿ ಯೋಗ ಅಭ್ಯಸಿಸಲು ಮುಂದಾಗಿದ್ದಾರೆ. ಅಂತೆಯೇ ಹಲವಾರು ವೈದ್ಯರೂ ಕೂಡ ತಮ್ಮ ದಿನಚರಿಯಲ್ಲಿ ಯೋಗದ ಅಭ್ಯಾಸ ಮಾಡಿ, ಪ್ರಾಮುಖ್ಯತೆ ತಿಳಿಯದವರಿಗೆ ಅದರ ಲಾಭದ ಬಗ್ಗೆ ತಿಳಿ ಹೇಳಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ .
ಇದರಿಂದ ಮನಸ್ಸು, ದೇಹ ಮತ್ತು ಮನುಷ್ಯ ಮತ್ತು ಪ್ರಕೃತಿಯ ನಡುವೆ ಪರಿಪೂರ್ಣ ಸಾಮರಸ್ಯವನ್ನು ಬೆಸೆಯುತ್ತದೆ ಎಂದು ಐಎಂಎ ಅಧ್ಯಕ್ಷರಾದ ಡಾ . ಅರುಣ್ ಎಂ . ಎಸ್ ನುಡಿದರು .
ಯೋಗ ದಿನದ ಆಚರಣೆಯಲ್ಲಿ ಸುಮಾರು 25 ಜನ ವೈದ್ಯರು ಪಾಲ್ಗೊಂಡಿದ್ದರು . ಕಾರ್ಯದರ್ಶಿ ಡಾ. ರಕ್ಷಾ ರಾವ್ , ಖಜಾಂಚಿ ಡಾ. ಶಶಿಧರ್ , ಡಾ. ರಮೇಶ್ , ಡಾ. ಶಂಭುಲಿಂಗ ಸೇರಿದಂತೆ ಹಲವಾರು ವೈದ್ಯರು ನೆರೆದಿದ್ದರು .