Shivamogga Backward Castes Union ಶಿವಮೊಗ್ಗ ನಗರದ ಬಾಲರಾಜ ಅರಸು ರಸ್ತೆ, ಸರ್ವಜ್ಞ ವೃತ್ತ ಬಳಿ ಸುಮಾರು 03 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಡಿ. ದೇವರಾಜ ಅರಸು ಭವನ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಅನುದಾನದ ಕೊರತೆಯಿದೆ.
ಕೂಡಲೇ ಇದಕ್ಕೆ ಅನುದಾನ ಕಲ್ಪಿಸಿಕೊಡಲು ಶಿವಮೊಗ್ಗ ನಗರಕ್ಕೆ ಭೇಟಿ ನೀಡಿದ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಶಿವಮೊಗ್ಗ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಮನವಿ ಅರ್ಪಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಅವರು ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ಕಲ್ಪಿಸುವ ಭರವಸೆಯನ್ನ ಸಚಿವರು ನೀಡಿದರು.
Shivamogga Backward Castes Union ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ವಿ. ರಾಜು, ಪ್ರಮುಖರಾದ ರೇಖಾ ರಂಗನಾಥ್, ಜಿ.ಡಿ. ಮಂಜುನಾಥ್, ಎಸ್.ಬಿ. ಅಶೋಕ್‌ಕುಮಾರ್, ಲೋಕೇಶ್, ಉಮಾಪತಿ, ಎಸ್.ಪಿ. ಶೇಷಾದ್ರಿ, ಶರತ್ ಮರಿಯಪ್ಪ, ರಾದಮ್ಮ, ನಾಗರತ್ನ, ಪಲ್ಲವಿ, ಅಬ್ದುಲ್ ವಾಜಿದ್, ಪ್ರಭಾಕರ್, ಕರಿಯಪ್ಪ, ಆಸಿಫ್ ಸೇರಿದಂತೆ ಇನ್ನಿತರರಿದ್ದರು.
