Friday, October 4, 2024
Friday, October 4, 2024

Kateel Ashok Pai Memorial College ಮಕ್ಕಳು ತೃತೀಯ ಲಿಂಗಿ ಅಂತ ಗೋತ್ತಾದ ತಕ್ಷಣ ಪೋಷಕರು ಸೂಕ್ತ ಶಿಕ್ಷಣ ಕೊಡಿಸಿ ಬೆಳೆಸಿ- ಪದ್ಮಶ್ರೀ ಡಾ.ಮಂಜಮ್ಮ ಜೋಗತಿ

Date:

Kateel Ashok Pai Memorial College ತಂದೆ ತಾಯಿಗಳು ಮಕ್ಕಳು ತೃತೀಯ ಲಿಂಗಿಗಳು ಎಂದು ಗೊತ್ತಾದ ತಕ್ಷಣ ಅವರಿಗಾಗಿ ಆಸ್ತಿ, ಮನೆ , ಅಂತಸ್ತು ಮಾಡುವ ಬದಲಾಗಿ ಆ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡಿ ಎಂದು ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ ಅವರು ತಿಳಿಸಿದರು.

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ 6ನೇ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ನಮ್ಮ ಹಳ್ಳಿ ಥಿಯೇಟರ್ ಸಹಯೋಗದಲ್ಲಿ ಪದ್ಮಶ್ರೀ ಪುರಸ್ಕೃತ ಡಾ. ಮಾತಾ ಬಿ ಮಂಜಮ್ಮ ಜೋಗತಿ ಅವರ ಜೀವನಾಧಾರಿತ ಏಕವ್ಯಕ್ತಿ ನಾಟಕ ಪ್ರದರ್ಶನ ಮತ್ತು ಮಂಜಮ್ಮ ಜೋಗತಿ ಅವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.

Kateel Ashok Pai Memorial College ತೃತೀಯ ಲಿಂಗಿಗಳು ಹೆಣ್ಣಿನ ಮನಸ್ಸು , ಗಂಡಿನ ದೇಹವುಳ್ಳವರು. ಕುಟುಂಬದವರು ಮೊದಲು ತೃತೀಯ ಲಿಂಗಿಗಳನ್ನು ಸ್ವೀಕರಿಸಿ. ಆಗ ಸುತ್ತ ಮುತ್ತಲಿನ ಜನ, ಸಮಾಜ, ಸರ್ಕಾರ ತಾನಾಗಿಯೇ ಅವರನ್ನು ಸ್ವೀಕರಿಸುವರು ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಂಗಭೂಮಿ ಕಲಾವಿದರಾದ ಬೇಳೂರು ರಘುನಂದನ್ ಅವರು ಮಾತನಾಡಿ, ನಮ್ಮನ್ನ ನಾವು ಶುದ್ದಿಕರಿಸುವ ಮಾದ್ಯಮ ನಾಟಕ ಮಾತ್ರ. ಅದ್ಬುತ ಕಲಾವಿದರು ಹುಟ್ಟಿಕೊಳ್ಳುವುದು ನಾಟಕಗಳಿಂದಲೇ ಎಂದು ತಿಳಿಸಿದರು.

ಮಂಜಮ್ಮ ಜೋಗತಿಯವರ ಜೀವನಾಧಾರಿತ ನಾಟಕದ ನಿರ್ದೇಶನ ಕೇವಲ ಮನರಂಜನೆಗೆ ಮಾತ್ರವಲ್ಲ. ನಾವೆಲ್ಲ ರಾಜ ಮಹಾರಾಜರ ಕಥೆಗಳನ್ನು ಕೇಳಿರುತ್ತೇವೆ.. ಅದರಲ್ಲಿ ಶೇ.70ರಷ್ಟು ನಿಜ ಕಥೆಯಿದ್ದರೆ, ಇನ್ನಷ್ಟು ವಿಷಯಗಳು ಕಾಲ್ಪನಿಕವಾಗಿರುತ್ತವೆ.. ಆದರೆ ನಮ್ಮ ನಡುವೆ ಇರುವ ಆದರ್ಶ ವ್ಯಕ್ತಿಯ ಜೀವನದ ಮುಖ್ಯಭೂಮಿಕೆ ತರಲು ಪ್ರಯತ್ನ ಮಾಡಲಾಗಿದೆ ಎಂದರು.

ಪ್ರಾಸ್ತಾವಿಕನುಡಿಗಳನ್ನಾಡಿದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಮಂಜುನಾಥ ಸ್ವಾಮಿಯವರು, ನಾಟಕಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಟಕಗಳನ್ನು ನೋಡಬೇಕು. ನಾಟಕವನ್ನು ಕಲಿತು ಪ್ರದರ್ಶನ ನೀಡಬೇಕು ಎಂದರು.

ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಡಾ. ರಾಜೇಂದ್ರ ಚೆನ್ನಿ ಅವರು ಮಾತನಾಡಿ, ಅಶೋಕ್ ಪೈ ಅವರು ಕಲಾರಾಧನರು. ಲಿಂಗ ತಾರತಮ್ಯದ ಬಗ್ಗೆ ಪುಸ್ತಕಗಳಲ್ಲಿ ವಿದ್ಯಾರ್ಥಿಗಳು ಓದಿರುತ್ತಾರೆ. ಮನಸ್ಸಿಗೆ ನಾಟುವಂತೆ ವಿಷಯವನ್ನು ಪ್ರಸ್ತುತಪಡಿಸುವುದು ನಾಟಕಗಳು ಮಾತ್ರ. ಮಂಜಮ್ಮ ಜೋಗತಿಯವರ ಜೀವನಾಧಾರಿತ ನಾಟಕದ ಮೂಲಕ ವಿದ್ಯಾರ್ಥಿಗಳು ಇನ್ನಷ್ಟು ಅರ್ಥಪೂರ್ಣವಾಗಿ ಹಲವಾರು ಸಾಮಾಜಿಕ ವಿಚಾರಗಳು ಅರ್ಥೈಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಕಲೆಯನ್ನು ಆರಾಧಿಸುವ ಪ್ರತಿಯೊಬ್ಬ ಕಲಾವಿದರೂ ಸಮಾಜದ ಆಸ್ತಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಅವರು ಮಾತನಾಡಿ , ಮಂಜಮ್ಮ ಜೋಗತಿಯವರ ಜೀವನಾಧಾರಿತ ಏಕವ್ಯಕ್ತಿ ನಾಟಕ ಮಾತಾ ನಿಜಕ್ಕೂ ಅತ್ಯದ್ಬುತ ನಾಟಕ. ಭಾವನಾತ್ಮಕ, ಭಾವಪಲ್ಲಟಗಳನ್ನು ಸಮಂಜಸವಾಗಿ ನಟನೆಯ ಮೂಲಕ ತೋರಿಸಿಕೊಡುವ ಕೆಲಸವನ್ನು ಕಲಾವಿದರು ಮಾಡಿದ್ದಾರೆ. ನಾಟಕ ನೋಡುವ ಮತ್ತು ನಾಟಕ ಮಾಡುವ ಮೂಲಕ ನಾವು ಬೆಳೆಯಲು ಸಾಧ್ಯ ಎಂದು ತಿಳಿಸಿದರು.

ಈ ನಾಟಕವು ಹಲವು ವಿಚಾರಗಳನ್ನು ತಿಳಿದುಕೊಳ್ಳಲು , ಸ್ವ ವಿಶ್ಲೇಷಣೆ ಮಾಡಲು ಒಂದು ಮಾರ್ಗವಾಗಿದೆ. ಈ ನಾಟಕ ಕೇವಲ ಮನರಂಜನೆಗೆ ಸೀಮಿತವಾಗಿರದೇ, ಸಂಕೀರ್ಣವಾದ ಸಂದೇಶಗಳನ್ನು ಸಾರುವ ಆಗರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ , ನಮ್ಮ ಹಳ್ಳಿ ಥಿಯೇಟರ್ ಅಧ್ಯಕ್ಷರಾದ ಶ್ರೀ ಚೇತನ್ ಕುಮಾರ್ ಸಿ ರಾಯನಹಳ್ಳಿ, ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Jawahar Navodaya Vidyalaya ಗಾಜನೂರಿನ ನವೋದಯ ಶಾಲಾ ಪ್ರವೇಶಾತಿ 2025-26 ಪರೀಕ್ಷೆಗೆ ಆನ್ ಲೈನ್ ಅರ್ಜಿ ಆಹ್ವಾನ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯವು 2025-26ನೇ ಸಾಲಿಗೆ 9...

Department of Parliamentary Affairs and Legislation ಅಕ್ಟೋಬರ್ 5 ರಂದು ನಡೆಯುವ “ಯುವ ಸಂಸತ್” ಸ್ಥಳ‌ ಬದಲಾವಣೆ ಗಮನಿಸಿ

Department of Parliamentary Affairs and Legislation ಸಂಸದೀಯ ಮತ್ತು ವ್ಯವಹಾರಗಳು...

MESCOM ಅ.4 ರಿಂದ7 ವರೆಗೆ ಮೆಸ್ಕಾಂ ಆನ್ ಲೈನ್ ಸೇವೆ ತಾತ್ಕಾಲಿಕ ಅಲಭ್ಯ

MESCOM ಅ.04ರಿಂದ 07 ರ ವರೆಗೆ ಮೆಸ್ಕಾಂ ಮಾಹಿತಿ ತಂತ್ರಜ್ಞಾನ...

Shivamogga Dasara ಶಿವಮೊಗ್ಗ ಚಲನಚಿತ್ರ ದಸರಾ ಚಾಲನೆಗೆ ಹಿರಿಯ ನಟಿ ಉಮಾಶ್ರೀ ಆಗಮನ

Shivamogga Dasara ಶಿವಮೊಗ್ಗ ಮಹಾ ನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿರುವ...