Wednesday, September 16, 2026
Wednesday, September 16, 2026

Indian Medical Association Shivamogga ಸಿಪಿಆರ್ ಮಾಹಿತಿಯಿಂದ ಹೃದಯಾಘಾತವಾದವರನ್ನ ಬದುಕಿಸಬಹುದು- ಡಾ.ಎಂ.ಎಸ್.ಅರುಣ್

Date:

Indian Medical Association Shivamogga ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ . ಮನುಷ್ಯನ ಹೃದಯ ಬಡಿತ ನಿಲ್ಲುತ್ತಿದ್ದಂತೆ ಕುಟುಂಬಸ್ಥರು ಭಯಭೀತರಾಗುತ್ತಾರೆ , ಏನು ಮಾಡಬೇಕೆಂಬುದು ಗೊತ್ತಾಗುವುದಿಲ್ಲ. ಆ ಸಮಯದಲ್ಲಿ , ತಕ್ಷಣ ಸಿಪಿಆರ್ ಮಾಡಿದರೆ ,ಜೀವ ಉಳಿಯುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆಯ ಅಧ್ಯಕ್ಷರಾದ ಡಾ . ಅರುಣ್ ಎಂ ಎಸ್ ನುಡಿದರು .

ಐಎಂಎ ಶಿವಮೊಗ್ಗದಿಂದ 15.6.2023 ರಂದು ಐಎಂಎ ಸಭಾಂಗಣದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಹ್ಯಾಂಡ್ಸ್ ಓನ್ಲಿ ಸಿಪಿಆರ್ ತರಬೇತಿ ಕಾರ್ಯಕ್ರಮದ ಚಾಲನೆ ನೀಡುತ್ತಾ ಹೇಳಿದರು .

ಸಿಪಿಆರ್ ತರಬೇತಿಯನ್ನು ಐಎಂಎ ಸಹ ಕಾರ್ಯದರ್ಶಿ ಹಾಗು ಸಿಪಿಆರ್ ಪ್ರಮಾಣೀಕೃತ ತರಬೇತುದಾರರಾದ ಡಾ. ಅನುಪ್ ರಾವ್ ಅವರು ಅತ್ಯುತ್ತಮ ಪಿಪಿಟಿ ಪ್ರಸ್ತುತಿ ಮೂಲಕ ಮತ್ತು ಲೈವ್ ಡೆಮೊ ಮತ್ತು ಸಂವಾದದ ಮೂಲಕ ನಡೆಸಿಕೊಟ್ಟರು .

ಮಾನಸ ಟ್ರಸ್ಟ್ ಸಹಯೋಗದೊಂದಿಗೆ ನರ್ಸಿಂಗ್ ವಿದ್ಯಾರ್ಥಿಗಳಿಗೆ ಬ್ಯಾಚ್ಗಳ ಮೂಲಕ ಈ ಪ್ರಮಾಣೀಕೃತ ತರಭೇತಿಯನ್ನು ನೀಡುವ ಜವಾಬ್ದಾರಿಯನ್ನು ಐಎಂಎ ಹೊತ್ತಿಕೊಂಡಿದ್ದು ತಿಂಗಳಲ್ಲಿ 2-3 ಬಾರಿ ಈ ಕಾರ್ಯಾಗಾರ ನಡೆಯಲಿದೆ .

Indian Medical Association Shivamogga ಸಿಪಿಆರ್ ಸಹಾಯದಿಂದ, ಒಬ್ಬ ವ್ಯಕ್ತಿಗೆ ಹೊಸ ಜೀವ ಸಿಗಬಹುದು. ಕಾರ್ಡಿಯೋ ಅರೆಸ್ಟ್ ಆದ ಮೊದಲು ಐದು ನಿಮಿಷದಲ್ಲಿ ಸಿಪಿಆರ್ ಸಿಕ್ಕಲ್ಲಿ ಬದುಕುವ ಸಾಧ್ಯತೆ 2-3 ಪಟ್ಟು ಹೆಚ್ಚಿರುತ್ತದೆ.ಕಾರ್ಡಿಯೋ ಅರೆಸ್ಟ್ ಆದ ವ್ಯಕ್ತಿಯನ್ನು ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸಿಪಿಆರ್ ಜೀವ ರಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ.

ಹಾಗಾಗಿ ತರಬೇತಿ ಪಡೆದ ವಿದ್ಯಾರ್ಥಿಗಳು ಅವಕಾಶ ಸಿಕ್ಕಾಗ ಧೈರ್ಯದಿಂದ ಈ ತುರ್ತು ಚಿಕಿತ್ಸೆ ನೀಡಬಹುದು ಎಂದು ಕಾರ್ಯದರ್ಶಿ ಡಾ . ರಕ್ಷಾ ರಾವ್ ವಿವರಿಸಿದರು.

ಐಎಂಎ ಹಿರಿಯ ಸದಸ್ಯರಾದ ಡಾ ರಜನಿ ಪೈ , ಡಾ ಭಾರತಿದೇವಿ , ಡಾ . ಎಚ್ . ಜಿ . ಭಾರತಿ ಅವರು ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...