Sunday, December 7, 2025
Sunday, December 7, 2025

Sagar Press Trust ಸಾಗರದಲ್ಲಿ ಪತ್ರಿಕಾ ವಿತರಕರಿಗೆ ಸೈಕಲ್ ವಿತರಣೆ

Date:

Sagar Press Trust ಸಾಗರದ ಪತ್ರಿಕಾಭವನದಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ವಾಯುಮಾಲಿನ್ಯ ತಡೆಯುವ ಉದ್ದೇಶಿತ ಸೈಕಲ್
ಬಳಕೆಗೆ ಪ್ರಚೋದನೆ ನೀಡುವ ಉದ್ದೇಶದಿಂದ ಪತ್ರಿಕಾ ವಿತರಕರುಗಳಿಗೆ ಸೈಕಲ್ ವಿತರಣಾ ಕಾರ್ಯಕ್ರಮವನ್ನು
ಆಯೋಜಿಸಲಾಗಿದೆ.

ಶನಿವಾರ ಜೂನ್ 10 ರಂದು ಬೆಳಿಗ್ಗೆ 11:00 ಗಂಟೆಗೆ ಅಣಲೇಕೊಪ್ಪ ಬಡಾವಣೆಯಲ್ಲಿನ ಪತ್ರಿಕಾ ಭವನದಲ್ಲಿ ಪ್ರೆಸ್‌ಟ್ರಸ್ಟ್ ಆಫ್ ಸಾಗರ್ ಮತ್ತು
ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪತ್ರಿಕಾ ವಿತರಕರ ಸಂಘದ
ಆಶ್ರಯದಲ್ಲಿ ದಾನಿಗಳ ಸಹಕಾರದಿಂದ ಆಯೋಜಿಸಲಾಗಿರುವ ಸೈಕಲ್
ವಿತರಣೆಯನ್ನು ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು
ವಿತರಿಸುವರು.

Sagar Press Trust ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೆಸ್ ಟ್ರಸ್ಟ್ ಆಫ್ ಸಾಗರ್ ಇದರ
ಅಧ್ಯಕ್ಷರಾದ ಹೆಚ್.ವಿ.ರಾಮಚಂದ್ರರಾವ್ ವಹಿಸಲಿದ್ದು, ವೇದಿಕೆಯಲ್ಲಿ
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ,ತಾ.ಪಂ.ಮಾಜಿ
ಸದಸ್ಯ ಸೋಮಶೇಖರ್ ಲ್ಯಾವಗೆರೆ,ರಾಯಲ್ ಬಿಲ್ರ‍್ಸ್ ಮಹೇಶ್ ಮತ್ತು
ಜಲೀಲ್,ಅರಣ್ಯ ಇಲಾಖೆ ನೌಕರರ ಸಂಘದ ಅಧ್ಯಕ್ಷ
ಸಂತೋಷ್‌ಕುಮಾರ್,ನಗರಸಭೆ ಸದಸ್ಯ ಆರ್.ಶ್ರೀನಿವಾಸ್,ನಗರಸಭೆ ಸದಸ್ಯೆ
ಪ್ರೇಮಾಕಿರಣ್‌ಸಿಂಗ್,ನಗರಸಭೆ ಸದಸ್ಯೆ, ನಾದಿರಾಪರ್ವೀನ್,ನಗರಸಭೆ
ಕಾರ್ಯಪಾಲಕ ಇಂಜಿನಿಯರ್ ಹೆಚ್.ಕೆ.ನಾಗಪ್ಪ,ಶಂಕರ್ ಅಳವೆಕೋಡಿ,ಪತ್ರಿಕಾ
ವಿತರಕರ ಸಂಘದ ಅಧ್ಯಕ್ಷ ಎನ್.ರಮೇಶ್,ಕಾರ್ಯನಿರತ ಪತ್ರಕರ್ತರ
ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್.ವಿ.ಹಿತಕರ ಜೈನ್,ತಾಲ್ಲೂಕು ಕಾರ್ಯನಿರತ
ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾಜೇಶ್ ಭಡ್ತಿ,ಪತ್ರಕರ್ತರ
ಸಂಘದ ಕಾರ್ಯದರ್ಶಿ ಗಣಪತಿಶಿರಳಗಿ,ಹಿರಿಯ ಪತ್ರಕರ್ತ ಎ.ಡಿ.ಸುಭ್ರಮಣ್ಯ
ಭಟ್ ,ರಾಮಕೃಷ್ಣ ವಸತಿ ಶಾಲೆಯ ಮುಖ್ಯಸ್ಥರಾದ ದೇವರಾಜ್, ನಾಗೇಂದ್ರ ಕೆ. ಮಾರಿಕಾಂಬಾ ಸಮಿತಿ ಅಧ್ಯಕ್ಷರು ಉಪಸ್ಥಿತರಿರುವರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...