Rotary Institute Shivamogga ಶಿಕ್ಷಣ ಕ್ಷೇತ್ರದಲ್ಲಿ ರೋಟರಿ ಸಂಸ್ಥೆಯು ಮಹತ್ತರ ಕೆಲಸಗಳನ್ನು ನಡೆಸುತ್ತಿದ್ದು, ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಲು ವಿಶೇಷ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದೆ ಎಂದು ರೋಟರಿ ಕ್ಲಬ್ ಉತ್ತರ ಶಿವಮೊಗ್ಗ ಸಂಸ್ಥೆ ಅಧ್ಯಕ್ಷ ಸರ್ಜಾ ಜಗದೀಶ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಉತ್ತರವು ಜಿಲ್ಲಾ ಪ್ರಾಯೋಜಕತ್ವದ ಅಡಿಯಲ್ಲಿ ಶಿವಮೊಗ್ಗ ನಗರದ ಎನ್ ಟಿ ರಸ್ತೆಯಲ್ಲಿರುವ ಸರ್ಕಾರಿ ಉರ್ದು ಶಾಲೆ ಮಕ್ಕಳಿಗೆ ಅನುಕೂಲ ಒದಗಿಸುವ ದೃಷ್ಠಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದರು.
ರೋಟರಿ ಸಂಸ್ಥೆಯು ಸೇವಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಸರ್ಕಾರಿ ಶಾಲೆಗಳಿಗೆ ವಿಶೇಷ ಕೊಡುಗೆಗಳನ್ನು ಒದಗಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡುತ್ತಿದೆ. ಮುಂದಿನ ದಿನಗಳಲ್ಲಿಯು ಅಗತ್ಯವಿರುವ ಸೇವೆಗಳನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
Rotary Institute Shivamogga ಶುದ್ಧ ನೀರು ಕುಡಿಯುವ ಮುಖಾಂತರ ಮಕ್ಕಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸಬೇಕು. ಸಮಾಜದಲ್ಲಿ ಉತ್ತಮ ಸ್ಥಾನಮಾನಗಳಿಸಿ ಇದೇ ರೀತಿ ಸಮಾಜದಲ್ಲಿ ಸೇವೆ ಮಾಡುವ ಮನೋಭಾವ ಹೊಂದಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಬಸವಾರಾಜಪ್ಪ, ಪಿ.ಡಿ.ಜಿ. ಪ್ರೊ. ಚಂದ್ರಶೇಖರ್, ರವೀಂದ್ರನಾಥ್ ಐತಾಳ್, ಎಮ್ ಹಾಲಪ್ಪ, ಕೆ.ಜೆ. ಮಿತ್ರ, ಎಸ್.ಜಿ. ರಮೇಶ್, ಅನಿಲ್ ತುಂಬಾಳ್, ವಾರಿಜಾ ಜಗದೀಶ್ ಮತ್ತು ಶಾಲೆಯ ಮುಖ್ಯ ಶಿಕ್ಷಕಿ ಅಜೀಜ ಅಸ್ಗರಿ ಮತ್ತು ಎಸ್.ಡಿ.ಎಮ್.ಸಿ ಸದಸ್ಯರುಗಳು ಭಾಗವಹಿಸಿದ್ದರು.
ಶಾಲೆಯ ಶಿಕ್ಷಕ ಮಲ್ಲಿಕಾರ್ಜುನ್ ಎಲ್ಲರನ್ನು ಸ್ವಾಗತಿಸಿದರು. ಶಾಲೆಯ ಶಿಕ್ಷಕಿ ಶಗುಪ್ತ ತಮ್ಕೀನ್ ಎಲ್ಲರನ್ನು ಆತ್ಮೀಯವಾಗಿ ವಂದಿಸಿದರು. ಕಾರ್ಯಕ್ರಮದ ನೀರೂಪಣೆಯನ್ನು ದೈಹಿಕ ಶಿಕ್ಷಕ ವರುಣ್ ಕುಮಾರ್ ನಿರ್ವಹಿಸಿದರು.