Wednesday, September 16, 2026
Wednesday, September 16, 2026

School Reopening ಮಕ್ಕಳಿಗೆ ಗುಲಾಬಿ ನೀಡಿ ಹರ್ಷದಿಂದ ಬರಮಾಡಿಕೊಂಡ ರೋಟರಿ ಪೂರ್ವ ಶಾಲೆಯ ಆಡಳಿತ ವರ್ಗ

Date:

School Reopening ರೋಟರಿ ಪೂರ್ವ ಆಂಗ್ಲ ಶಾಲೆಯಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳು, ಶಾಲಾ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಎಲ್ಲ ವಿದ್ಯಾರ್ಥಿಗಳಿಗೆ ಗುಲಾಬಿ ಹೂಗಳನ್ನು ನೀಡುವುದರ ಮೂಲಕ 2023-24ನೇ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಆಚರಿಸಿದರು.

ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಚಂದ್ರಶೇಖರಯ್ಯ ಎಂ., ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪೋಷಕರು, ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಲಭ್ಯವಿರುವ ಸೌಲಭ್ಯಗಳು, ಶಾಲಾ ಶಿಕ್ಷಕ ವೃಂದದವರ ಬೋಧನಾ ಅನುಭವ ಹಾಗೂ ಅವರು ಬೋಧಿಸುವ ವಿಷಯಗಳನ್ನೊಳಗೊಂಡತೆ ಅವರ ಪರಿಚಯ ಕಾರ್ಯಕ್ರಮ ಹಾಗೂ ಶಾಲೆಯಲ್ಲಿನ ಪಠ್ಯ ಮತ್ತು ಸಹ ಪಠ್ಯ ಚಟುವಟಿಕೆಗಳ ಗುಣಮಟ್ಟದ ಕುರಿತು ಸಮಾಲೋಚನೆ ನಡೆಸಲಾಯಿತು.

School Reopening ಈ ಸಮಾಲೋಚನಾ ಸಭೆಯಲ್ಲಿ ಟ್ರಸ್ಟ್ ಪದಾಧಿಕಾರಿಗಳಾದ ಡಾ. ಪರಮೇಶ್ವರ್ ಡಿ. ಶಿಗ್ಗಾಂವ್, ರಾಮಚಂದ್ರ ಎಸ್.ಸಿ., ವಿಜಯ್ ಕುಮಾರ್ ಜಿ., ನಾಗವೇಣಿ ಎಸ್.ಆರ್., ಪಾಂಶುಪಾಲ ಸೂರ್ಯನಾರಾಯಣ್ ಆರ್., ಮುಖ್ಯ ಶಿಕ್ಷಕಿ ಜಯಶೀಲಾ ಬಾಯಿ ಎಸ್. ಹಾಗೂ ಅಪಾರ ಸಂಖ್ಯೆಯಲ್ಲಿ ಪೋಷಕರು ಹಾಗೂ ಶಿಕ್ಷಕ ವೃಂದ ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...