NSS Camp ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಶಿಬಿರದಲ್ಲಿ ಶ್ರಮದಾನದ ಅಂಗವಾಗಿ ಭದ್ರಾ ಜಲಾಶಯದ ಆವರಣದಲ್ಲಿ ಶಿಬಿರಾರ್ಥಿಗಳು ಮತ್ತು ಅಧಿಕಾರಿಗಳು ಪ್ಲಾಸ್ಟಿಕ್ ತ್ಯಾಜ್ಯ ನಿರ್ಮೂಲನೆ ಕಾರ್ಯದಲ್ಲಿ ತೊಡಗಿದರು.
ಈ ಕಾರ್ಯದಲ್ಲಿ ಬೃಹತ್ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಆರಿಸಿ ತೆಗೆದು ಪಟ್ಟಣ ಪಂಚಾಯಿತಿಗೆ ವಿಲೇವಾರು ಮಾಡಿದ್ದಾರೆ. ಡಾ. ನಾಗರಾಜ ಪರಿಸರ, ಕಾರ್ಯಕ್ರಮ ಸಂಯೋಜನಾಧಿಕಾರಿ, ಎನ್.ಎಸ್.ಎಸ್. ಅವರು, ಈ ಕಾರ್ಯಕ್ರಮದ ನೇತೃತ್ವ ವಹಿಸಿ ಪ್ಲಾಸ್ಟಿಕ್ ಆರಿಸುವಲ್ಲಿ ತಾವು ಸಹ ಕೈಜೋಡಿಸಿ ಇನ್ನುಮುಂದೆ ಯಾರೂ ಸಹಾ ಪ್ಲಾಸ್ಟಿಕ್ ಬಳಕೆಯನ್ನು ಮಾಡಬಾರದು ಮತ್ತು ಈ ರೀತಿ ಪ್ರವಾಸಿ ತಾಣಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಇರದಂತೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿ ಹೇಳಿದರು.
ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಸ್ವಯಂ ಸೇವಕರಲ್ಲಿ ಅರಿವು ಮೂಡಿಸಿ ಮಾತನಾಡುತ್ತಾ ನಮ್ಮ ಘನಸರ್ಕಾರ ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ಉತ್ಪಾದನೆಯನ್ನು ನಿಲ್ಲಿಸಿ, ಪ್ಲಾಸ್ಟಿಕ್ ಬಳಕೆ ಮತ್ತು ತ್ಯಾಜ್ಯ ವಿಲೇವಾರಿ ಕುರಿತು ಶ್ರೀಘ್ರ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಪರಿಸರದಲ್ಲಿ ಪ್ಲಾಸ್ಟಿಕ್ ನಿಂದ ಉಂಟಾಗುವ ಅಪಾಯಗಳು ಹೆಚ್ಚಿ, ಪಶು ಪಕ್ಷಿ ಪ್ರಾಣಿಗಳು ಸಾಯುತ್ತವೆ. ಮುಂದಿನ ದಿನಗಳಲ್ಲಿ ಇದರಿಂದ ಮಾನವಸಂಕುಲ ಹೆಚ್ಚಿನ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಸರ್ಕಾರ ಮತ್ತು ನಾವು (ಎನ್.ಎಸ್.ಎಸ್. ಸ್ವಯಂ ಸೇವಕರು ಮತ್ತು ಅಧಿಕಾರಿಗಳು) ಈ ಬಗ್ಗೆ ಶ್ರೀಘ್ರ ಗಮನ ಹರಿಸಿ ಪ್ಲಾಸ್ಟಿಕ್ ಬಳಕೆ ಮತ್ತು ತ್ಯಾಜ್ಯ ನಿರ್ಮೂಲನೆ ಕುರಿತು ಶ್ರೀಘ್ರ ಕ್ರಮಕೈಗೊಂಡು ಪರಿಸರದ ಸಂರಕ್ಷಣೆಯಲ್ಲಿ ಮುಖ್ಯ ಪಾತ್ರವಹಿಸ ಬೇಕಾಗಿದೆ ಎಂದು ತಿಳಿಸಿದರು.
NSS Camp ರಾ.ಸೇ.ಯೋ. ಅಧಿಕಾರಿಗಳಾದ ಶರತ್, ಶರಣ ನಾಯಕ್, ಲಕ್ಷಣ್ ಮತ್ತು ಗ್ರಾಮ ಪಂಚಯಿತಿ ಅಧ್ಯಕ್ಷರಾದ ಶ್ರೀಯುತ ಲೋಕೇಶ್ ಹಾಗೂ ಒಟ್ಟು 160 ಸ್ವಯಂ ಸೇವಕರು, ಇವರು ಭಾಗವಹಿಸಿದ್ದರು.