Hanuman Jayanti ಶಿವಮೊಗ್ಗ, ನಗರದ ಪುರಾಣ, ಇತಿಹಾಸ ಪ್ರಸಿದ್ಧ ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಭಾರತೀಯ ವಿಚಾರ ವೇದಿಕೆ, ಭಕ್ತ ಶಿರೋಮಣಿ, ಅನಂತ ರಾಮ ಅಯ್ಯಂಗಾರ್ ಸ್ಮಾರಕ ಟ್ರಸ್ಟ್ ಹಾಗೂ ದೇವಾಲಯ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಜೂ. 1ರಿಂದ 3 ರವರೆಗೆ ಹನುಮ ಜಯಂತಿ ಮಹೋತ್ಸವವು ಆಯೋಜನೆಗೊಂಡಿದೆ. ಇದರ ಅಂಗವಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪ್ರತಿದಿನ ಸಂಜೆ 7 ಗಂಟೆಗೆ ದೇವಾಲಯದ ಆವರಣದಲ್ಲಿನ ಸಭಾ ಮಂಟಪದಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು, ಮೇ. 30ರ ಇಂದು ಶ್ರೀ ಬ್ರಹ್ಮಣ್ಯ ಆಚಾರ್ಯರವರಿಂದ ಉಪನ್ಯಾಸ ಹಾಗೂ ಮೇ. 31ರಂದು ಬೆಂಗಳೂರಿನ ಆಧ್ಯಾತ್ಮ ಚಿಂತಕಿ ವೀಣಾ ಬನ್ನಂಜೆಯವರಿಂದ ರಾಮನ ಭಕ್ತಿ, ಹನುಮನ ಶಕ್ತಿ ಕುರಿತು ಉಪನ್ಯಾಸ ನಡೆಯಲಿದೆ.
* ಧಾರ್ಮಿಕ ಕಾರ್ಯಕ್ರಮಗಳು:
ಹನುಮ ಜಯಂತಿ ಅಂಗವಾಗಿ, ಜೂ. 1ರಂದು ಸ್ವಾತಿ ನಕ್ಷತ್ರ ಬೆಳಿಗ್ಗೆ 8ರಿಂದ ಶ್ರೀ ಆಂಜನೇಯ, ಶ್ರೀ ನಾರಸಿಂಹರಿಗೆ ಅಭಿಷೇಕ, ನಂತರ ಸುದರ್ಶನ ಹೋಮ, ಸಂಜೆ ಶ್ರೀ ಲಕ್ಷ್ಮೀ ನರಸಿಂಹರ ಪಲ್ಲಕ್ಕಿ ಉತ್ಸವ ನಡೆಯಲಿದೆ.
Hanuman Jayanti ಜೂ. 2ರಂದು ವಿಶಾಖ ನಕ್ಷತ್ರ ಬೆಳಿಗ್ಗೆ ಶ್ರೀ ಆಂಜನೇಯರಿಗೆ ಅಭಿಷೇಕ, ನಂತರ ಶ್ರೀ ರಾಮತಾರಕ ಹೋಮ, ರಾತ್ರಿ ಪಟ್ಟಾಭಿರಾಮರ ಪಲ್ಲಕ್ಕಿ ಉತ್ಸವ, ಜೂ. 3ರಂದು ಅನುರಾಧ ನಕ್ಷತ್ರ ಶ್ರೀ ಹನುಮ ಜಯಂತಿ ಬೆಳಿಗ್ಗೆ ಶ್ರೀ ಆಂಜನೇಯರಿಗೆ ಅಭಿಷೇಕ, ಶ್ರೀ ಮಾರುತಿ ಮೂಲ ಮಂತ್ರ ಹೋಮ, ಸಂಜೆ 7ರಿಂದ ಶ್ರೀ ರಾಮ, ಹನುಮರ ಎದುರು ಉತ್ಸವ, ಅಷ್ಟಾವಧಾನ ಸೇವೆ, ಮಹಾ ಮಂಗಳಾರತಿ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.