Inauguration of the New Parliament House ನವದೆಹಲಿಯಲ್ಲಿ ನೂತನ ಸಂಸತ್ ಭವನವನ್ನು ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದರು.
ಇಂದು ಬೆಳಗ್ಗೆ ಏಳು ಗಂಟೆಯಿಂದ ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮಗಳು ನಿರಂತರವಾಗಿ ನಡೆದವು.
ಮೋದಿಯವರು ಸಂಸತ್ ಭವನ ಉದ್ಘಾಟನಾ ಸಮಾರಂಭದ ಸ್ಮರಣಾರ್ಥ ವಿಶೇಷ ಅಂಚೆ ಚೀಟಿ ಮತ್ತು ರೂ. 75 ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆಗೊಳಿಸಿದರು.
ಈ ಒಂದು ನಾಣ್ಯದಲ್ಲಿ
ಶೇ.50 ಬೆಳ್ಳಿ,ಶೇ.40 ತಾಮ್ರ, ಶೇ,5 ನಿಕ್ಕಲ್ ಮತ್ತು ಶೇ5 ಜಿಂಕ್ ಲೋಹವಿದೆ ಎಂದು ಪ್ರಕಟಣೆ ತಿಳಿಸುತ್ತದೆ.
ಈ ನಾಣ್ಯದ ವಿಶೇಷತೆ ಎಂದರೆ ಒಂದು ಬದಿಯಲ್ಲಿ ಅಶೋಕ ಸ್ತಂಭದ ಸಿಂಹದ ಲಾಂಛನ ಇದೆ. ಅದರ ಒಳಗೆ ಸತ್ಯಮೇವ ಜಯತೆ ಎಂಬ ಪದಗಳಿದೆ. ಎಡಭಾಗದಲ್ಲಿ ಭಾರತ್ ಎಂಬ ಪದವನ್ನು ದೇವನಾಗರಿ ಲಿಪಿಯಲ್ಲಿ ಮತ್ತು ಬಲಭಾಗದಲ್ಲಿ ಇಂಡಿಯಾ ಎಂಬ ಪದವನ್ನು ಇಂಗ್ಲಿಷ್ ನಲ್ಲಿ ಬರೆಯಲಾಗಿದೆ. ರೂಪಾಯಿ ಚಿನ್ಹೆ ಮತ್ತು ಸಿಂಹದ ಲಾಂಛನ ದ ಕೆಳಗೆ ಅಂತರಾಷ್ಟ್ರೀಯ ಅಂಕಿಗಳಲ್ಲಿ 75ರ ಮುಖಬೆಲೆಯ ಮೌಲ್ಯವನ್ನು ಈ ನಾಣ್ಯ ಹೊಂದಿದೆ.
ಶೃಂಗೇರಿ ಮಠದ ಪುರೋಹಿತರ ವೇದಘೋಷಗಳ ಮಧ್ಯೆ ಪ್ರಧಾನಿಯವರು ನೂತನ ಭವನದ ಉದ್ಘಾಟನೆ ಸಮಾರಂಭ ನೆರವೇರಿಸಿದರು.
ಸಾಂಪ್ರದಾಯಿಕ ಆಹ್ವಾನಿಸಲು ಗಣಪತಿ ಹೋಮವನ್ನು ನಡೆಸಲಾಯಿತು. ಪೂಜಾ ವಿಧಾನ ಮುಗಿದ ನಂತರ ಬಹು ಚರ್ಚಿತ ರಾಜದಂಡವಾದ ಸೆಂಗೋಲ್ ಅನ್ನು ತಮಿಳುನಾಡಿನ ವಿವಿಧ ಆಧೀನಮ್ ಗಳ ಸಂತರಿಂದ ಪ್ರಧಾನಿ ಮೋದಿಯವರಿಗೆ ಹಸ್ತಾಂತರ ಮಾಡಲಾಯಿತು.
ಪೂಜ್ಯರ ಆಶೀರ್ವಾದ ಪಡೆದು ಪ್ರಧಾನಿಗಳು ಅದರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿದರು. ನಂತರ ರಾಜದಂಡದೊಂದಿಗೆ ಮೋದಿಯವರು ನಾದಸ್ವರ ಮತ್ತು ವೇದ ಮಂತ್ರಗಳ ಪಠಣಗಳ ನಡುವೆ ಮೆರವಣಿಗೆಯಲ್ಲಿ ಹೊಸ ಸಂಸತ್ ಭವನಕ್ಕೆ ಸೆಂಗೋಲ್ ಅನ್ನು ಕೊಂಡೊಯ್ದರು.
Inauguration of the New Parliament House ಲೋಕಸಭೆಯ ಸಭಾಂಗಣದಲ್ಲಿ ಸ್ಪೀಕರ್ ಕುರ್ಚಿಯ ಬಲಭಾಗದಲ್ಲಿ ನಿಗದಿಪಡಿಸಲಾಗಿದ್ದ ವಿಶೇಷ ಆವರಣದಲ್ಲಿ ರಾಜ್ಯದಂಡವನ್ನು ಸ್ಪೀಕರ್ ಓಂ ಬಿರ್ಲಾ ಅವರ ಸಮೇತ ತೆರಳಿ ಅಲ್ಲಿ ಪ್ರತಿಷ್ಠಾಪಿಸಿದರು. ಅಲ್ಲಿ
ಜ್ಯೋತಿಯನ್ನು ಬೆಳಗಿಸುವ ಮುಖಾಂತರ ನೂತನ ಸಂಸತ್ ಭವನದ ಉದ್ಘಾಟನೆಗೆ ಅಧಿಕೃತ ಚಾಲನೆ ನೀಡಿದರು.