Friday, December 5, 2025
Friday, December 5, 2025

Janata Banjara Sangha Chikkamagaluru ಜನತಾ ಬಂಜಾರ ಸಂಘಕ್ಕೆ ಕೈಲಾದ ನೆರವು ಸಿಗುವಂತೆ ಮಾಡುವೆ-ಎಚ್.ಡಿ. ತಮ್ಮಯ್ಯ

Date:

Janata Banjara Sangha Chikkamagaluru ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ನೂತನ ಶಾಸಕರಾಗಿ ಆಯ್ಕೆ ಯಾದ ಹೆಚ್.ಡಿ.ತಮ್ಮಯ್ಯ ಅವರಿಗೆ ನಗರದ ಹೌಸಿಂಗ್ ಬೋರ್ಡ್ನಲ್ಲಿ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾ ರಾಟ ಸ್ಟೋರ್ಸ್ ಮತ್ತು ಜನತಾ ಬಜಾರ್ ಸಂಘದ ಕಚೇರಿಯಲ್ಲಿ ಪದಾಧಿಕಾರಿಗಳು ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಶಾಸಕ ಹೆಚ್.ಡಿ.ತಮ್ಮಯ್ಯ ಜನತಾ ಬಜಾರ ಸಂಘವು ತಾವು ಕಂಡಂತೆ ಅನೇಕ ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.

ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಉತ್ತಮ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಸಂಘದ ಬೆಳವಣಿಗೆ ತಮ್ಮ ಕೈಲಾದ ಮಟ್ಟಿನ ಸಹಾಯವನ್ನು ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ಸಂಘದ ನಿರ್ದೇಶಕ ಟಿ.ಕೆ.ಜಯರಾಜ್ ಅರಸ್ ಮಾತನಾಡಿ ಸಂಘದಲ್ಲಿ ಹಿರಿಯ ರಾಜಕೀಯ ದುರೀಣರಾದ ಎಸ್.ಎಲ್.ಧರ್ಮೇಗೌಡ ಸೇರಿದಂತೆ ಅನೇಕ ಮಹಾನೀಯರು ಅಧ್ಯಕ್ಷರಾಗಿ ಉತ್ತಮ ಅಧಿಕಾರ ನಿರ್ವಹಿಸಿದ್ದಾರೆ.

ಶಾಸಕರು ಮುಂದಿನ ಅಧಿಕಾರದ ಸಮಯದಲ್ಲಿ ಸಂಘದ ಅಭಿವೃಧ್ದಿ ಸಹಕಾರ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

Janata Banjara Sangha Chikkamagaluru ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಲ್ಲೇದೇವರಪ್ಪ, ಉಪಾಧ್ಯಕ್ಷ ಪುಟ್ಟೇಗೌಡ, ನಿರ್ದೇಶಕರುಗಳಾದ ಮಂಜುನಾಥ್‌ಜೋಷಿ, ಕುಸುಮ ರಮೇಶ್, ಸುಧಾ ಪೈ, ಮಲ್ಲೇಶಯ್ಯ, ಶಂಕರಮೂರ್ತಿ, ಕಾರ್ಯದರ್ಶಿ ಚಿದಾ ನಂದ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...