Shivamogga Jatra Mahotsava ಶಿವಮೊಗ್ಗ ಹೊಸ ಮನೆ ಬಡಾವಣೆಯ ಅಂತರಘಟ್ಟಮ್ಮ ಜಲದುರ್ಗಮ್ಮ ದೇವಸ್ಥಾನ ಆವರಣದಲ್ಲಿ ಜಾತ್ರೆಯ ಅಂಗವಾಗಿ ದೇವರನ್ನು ಹೊತ್ತು ಭಕ್ತರು ಕೆಂಡ ಹಾಯ್ದರು.
ಶಿವಮೊಗ್ಗದ ಶಕ್ತಿ ದೇವತೆ ಎಂದೇ ಪ್ರಸಿದ್ಧಿಯಾಗಿರುವ, ಹೊಸಮನೆಯ ಅಂತರಘಟ್ಟಮ್ಮ, ಜಲದುರ್ಗಮ್ಮ ಮತ್ತು ಕೆಂಚರಾಯಸ್ವಾಮಿ ದೇವರ ಜಾತ್ರಾ ಮಹೋತ್ಸವ 4 ವರ್ಷಗಳ ನಂತರ ಅತಿ ವಿಜೃಂಭಣೆಯಿಂದ ನಡೆಯಿತು.
ಪ್ರತಿ 2 ವರ್ಷಕ್ಕೊಮ್ಮೆ ಅದ್ದೂರಿಯಾಗಿ ನಡೆಯುತ್ತಿದ್ದ, ಈ ಜಾತ್ರಾ ಮಹೋತ್ಸವ ಕರೋನ ಕಾರಣದಿಂದ ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿತ್ತು.
ಶಕ್ತಿ ದೇವತೆಗಳ ಮೆರವಣಿಗೆ ನಡೆಯಿತು. ದುರ್ಗಿ ಗುಡಿಯ ಶ್ರೀರಾಮ ಮಂದಿರದಿಂದ ಗಂಗೆ ಪೂಜೆಯೊಂದಿಗೆ ದೊಡ್ಡಮ್ಮ, ಜಲದುರ್ಗಮ್ಮ ದೇವರನ್ನ ಹೊಸ ಮನೆಯ ದೇವಸ್ಥಾನಕ್ಕೆ ಕರೆತರಲಾಯಿತು.
Shivamogga Jatra Mahotsava ದೇವಸ್ಥಾನದ ಆವರಣದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರದಲ್ಲಿ ಕೆಂಡಾರ್ಚನೆಯಲ್ಲಿ ಭಕ್ತರು ಕೆಂಡವನ್ನು ಹಾಯ್ದು ತಮ್ಮ ಹರಿಕೆ ತೀರಿಸಿಕೊಂಡರು. ಜಾತ್ರೆಗೆ ಸಾವಿರಾರು ಭಕ್ತರು ಭಾಗಿಯಾಗಿ ತಮ್ಮ ಹರಕೆಗಳನ್ನ ತೀರಿಸಿದರು.