Sakrebailu Elephant Camp ಶಿವಮೊಗ್ಗದ ಸಕ್ಕರೆ ಬೈಲು ಆನೆ ಬಿಡಾರದಲ್ಲಿ ತಾಯಿ ಆನೆಯನ್ನು ಸ್ನಾನ ಮಾಡಿಸ್ತಾ ಇರಬೇಕಾದರೆ, ಮರಿ ಆನೆ ಅದರ ಅಮ್ಮನೊಂದಿಗೆ ಆಟವಾಡುವ ದೃಶ್ಯ ಎಲ್ಲರ ಗಮನ ಸೆಳೆಯಿತು.
Sakrebailu Elephant Camp ಬೇಸಿಗೆಕಾಲ ಬಂತು ಅಂದ್ರೆ ನಾವು ತಂಪು ಪಾನೀಯಗಳತ್ತ ನಾವು ಮೊರೆ ಹೋಗುತ್ತೇವೆ. ಹಾಗೆಯೇ ಪ್ರಾಣಿಗಳು ಕೂಡ ಬೇಸಿಗೆ ಕಾಲದಲ್ಲಿ ನೀರಿರುವ ಕೆರೆ, ಹೊಳೆ ಇವುಗಳಲ್ಲಿ ಹೆಚ್ಚು ಸಮಯ ಕಳೆಯುತ್ತವೆ. ಅದೇ ರೀತಿ ಶಿವಮೊಗ್ಗದ ಸಕ್ಕರೆ ಬೈಲು ಆನೆ ಬಿಡಾರದಲ್ಲಿ ತಾಯಿ ಆನೆಯೂ ನೀರಿನಲ್ಲಿ ಮುಳಗಿ ಸ್ನಾನ ಮಾಡುತ್ತಿರುವಾಗ ಪುಟಾಣಿ ಆನೆ ಮರಿ ಅಮ್ಮನ ಮೇಲೆ ಹತ್ತಿ ಕುಡಿದಾಡುವ ದೃಶ್ಯ ಎಲ್ಲರ ಗಮನ ಸೆಳೆಯಿತು.
ಆನೆ ಮರಿಯು ನೀರಿನಲ್ಲಿ ಆಟ ವಾಡುವ ದೃಶ್ಯವನ್ನು ಪ್ರವಾಸಿಗರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದರು. ಈ ಮರಿ ಆನೆಯು ಕೆಲವೇ ಕೆಲವು ದಿನಗಳ ಹಿಂದೆ ಜನಿಸಿದೆ. ಕುಂತಿ ಎಂಬ ಆನೆಯ ಮರಿಯಾಗಿದೆ.