Saturday, December 6, 2025
Saturday, December 6, 2025

Samanvaya Trust Shivamogga ಮಧುರಾ ಪ್ರೀತಮ್ ಅವರಿಗೆ ಸಮನ್ವಯ ಪರಿಸರ ಪ್ರಶಸ್ತಿ

Date:

Samanvaya Trust Shivamogga ತ್ಯಾಜ್ಯದ ಸಮರ್ಪಕ ನಿರ್ವಹಣೆ ಜತೆಯಲ್ಲಿ ಮನೆ ಆವರಣದಲ್ಲಿ ಉತ್ತಮ ಪರಿಸರ ವಾತಾವರಣ ನಿರ್ಮಾಣ ಮಾಡಿಕೊಂಡಿರುವ ರವೀಂದ್ರನಗರದ 4ನೇ ತಿರುವಿನ ನಿವಾಸಿ ಮಧುರಾ ಪ್ರೀತಮ್ ಕುಟುಂಬಕ್ಕೆ ಸಮನ್ವಯ ಟ್ರಸ್ಟ್ ವತಿಯಿಂದ ಪರಿಸರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಿವಮೊಗ್ಗ ಸಮನ್ವಯ ಟ್ರಸ್ಟ್ ನೇತೃತ್ವದಲ್ಲಿ ಪರಿಸರ ಸ್ನೇಹಿ ಕುಟುಂಬಗಳನ್ನು ಗುರುತಿಸಿ ಪರಿಸರ ಪ್ರಶಸ್ತಿ ನೀಡಿ ಗೌರವಿಸುವ ಕೆಲಸ ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ.

ಈ ಬಾರಿ ಶಿವಮೊಗ್ಗ ರವೀಂದ್ರನಗರದ ಮಧುರಾ ಪ್ರೀತಮ್ ಕುಟಂಬಕ್ಕೆ ಪ್ರಶಸ್ತಿ ವಿತರಿಸಲಾಯಿತು.
ಸಮನ್ವಯ ಟ್ರಸ್ಟ್ ಕಾರ್ಯ ನಿರ್ವಾಹಕ ನಿರ್ದೇಶಕ ಸಮನ್ವಯ ಕಾಶಿ ನೇತೃತ್ವದ ತಂಡವು ಶಿವಮೊಗ್ಗದಲ್ಲಿ ಪರಿಸರ ಸ್ನೇಹಿ ಕುಟುಂಬಗಳನ್ನು ಗುರುತಿಸಿ ಗೌರವಿಸುವ ವಿಶೇಷ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದೆ. ಪರಿಸರದ ಕಾಳಜಿಯನ್ನು ಮನೆ ಮನೆಗೆ ತಲುಪಿಸುವ ಆಶಯದಿಂದ ರಾಜ್ಯದಲ್ಲಿಯೇ ವಿಶೇಷ ಪ್ರಯತ್ನ ನಡೆಸುತ್ತಿದೆ.
ಮಧುರಾ ಪ್ರೀತಮ್ ಅವರು ಮನೆ ಆವರಣದಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡಿದ್ದಾರೆ. ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ. ಹಸಿ, ಒಣ ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುತ್ತಾರೆ. ಪ್ಲಾಸ್ಟಿಕ್ ಬಳಕೆ ಮಾಡುತ್ತಿಲ್ಲ. ಸುಂದರವಾದ ಕೈತೋಟ ನಿರ್ಮಾಣ ಮಾಡಿದ್ದಾರೆ.ಮನೆ ಆವರಣದ ಪರಿಸರದಲ್ಲಿ ವೈವಿಧ್ಯ ಸಸ್ಯಗಳನ್ನು ಬೆಳೆಸಿದ್ದಾರೆ. ಪರಿಸರ ಸ್ನೇಹಿಯಾಗಿ ವಾತಾವರಣ ರೂಪಿಸಿದ್ದಾರೆ. ಮನೆ ಇರುವ ಪ್ರದೇಶದಲ್ಲಿ ಸಸಿಗಳನ್ನು ಪೋಷಿಸುತ್ತಿದ್ದಾರೆ.

Samanvaya Trust Shivamogga ನಿವೃತ್ತ ಪ್ರಾಚಾರ್ಯ ಎಸ್.ರಂಗನಾಥಯ್ಯ ಅವರು ಮಧುರಾ ಪ್ರೀತಮ್ ಅವರಿಗೆ ಪ್ರಶಸ್ತಿ ವಿತರಿಸಿದರು.

ಈ ಸಂದರ್ಭದಲ್ಲಿ ಸಮನ್ವಯ ಟ್ರಸ್ಟ್ ಕಾರ್ಯ ನಿರ್ವಾಹಕ ನಿರ್ದೇಶಕ ಸಮನ್ವಯ ಕಾಶಿ, ಕಾರ್ಯಕ್ರಮ ನಿಯೋಜಕರಾದ ನಿತ್ಯ, ಅಭಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...