Deputy Commissioner’s office Chikmagalur ಚಿಕ್ಕಮಗಳೂರಿನ ಮಾಚಿಕೊಪ್ಪ ಗ್ರಾಮದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಆಶ್ರಯ ಯೋಜ ನೆಯಲ್ಲಿ ಮಂಜೂರಾಗಿ ವಾಸವಿರುವ ಮನೆಯನ್ನು ಅದೇ ಜಾಗದಲ್ಲಿ ಪುನಃ ದುರಸ್ಥಿಗೊಳಿಸಿ ನಿರ್ಮಿಸಲು ಅರಣ್ಯ ಇಲಾಖೆ ಅಡ್ಡಿಪಡಿಸಿ ತೊಂದರೆ ನೀಡುತ್ತಿದ್ದಾರೆ ಎಂದು ದಲಿತ ಸಂಘಟನೆಗಳ ಐಕ್ಯಾತ ಚಾಲನಾ ಸಮಿತಿ ಜಿಲ್ಲಾ ಡಳಿತವನ್ನು ಒತ್ತಾಯಿಸಿದೆ.
ಈ ಸಂಬಂಧ ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರಿಗೆ ಅರ್ಜಿದಾರ ವಿಜಯಪೂಜಾರಿ ಎಂಬುವವರು ಐಕ್ಯಾತಾ ಚಾಲನಾ ಸಮಿತಿ ನೇತೃತ್ವದಲ್ಲಿ ಮನವಿ ಸಲ್ಲಿಸಿ ವಾಸವಿರುವ ಗುಡಿಸಲಿನ ಜಾಗವನ್ನು ಅರಣ್ಯ ಸೆಕ್ಷನ್ 4(1) ರಿಂದ ಕೈಬಿಟ್ಟು ತಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಸಮಿತಿ ಮುಖಂಡ ಮರ್ಲೆ ಅಣ್ಣಯ್ಯ ಕೊಪ್ಪ ತಾಲ್ಲೂಕಿನ ಕಸಬಾ ಹೋಬಳಿಯ ಮಾಚಿಕೊಪ್ಪ ಗ್ರಾಮದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ 50-80ಅಡಿ ವಿಸ್ತೀರ್ಣದಲ್ಲಿ ಅರ್ಜಿದಾರ ಗುಡಿಸಲು ನಿರ್ಮಿಸಿಕೊಂಡಿದ್ದಾನೆ. ಇದೀಗ ವಾಸವಿರುವ ಜಾಗದಲ್ಲಿ ಮನೆಯನ್ನು ಪುನಃ ದುರಸ್ಥಿಗೊಳಿಸಲು ಅರಣ್ಯ ಇಲಾಖೆ ಸೆಕ್ಷನ್ 4(1) ಎಂದು ಅಡ್ಡಿಪಡಿಸುತ್ತಿದ್ದಾರೆ ಎಂದು ಹೇಳಿದರು.
ಈಗಾಗಲೇ ವಾಸವಿರುವ ಜಾಗಕ್ಕೆ ಗ್ರಾ.ಪಂ. ನಿಂದ ಕಂದಾಯವನ್ನು ವಿಧಿಸಲಾಗಿದೆ. ಹೇರಂಭಾಪುರ, ಕರಿಮನೆ ಹಾಗೂ ಕಳಸಾಪುರ ಗ್ರಾಮಗಳ ಗಡಿಯಲ್ಲಿರುವ ಈ ಜಾಗ 19996-98ರಲ್ಲಿ ನಿವೇಶನದಳಕ್ಕೆ ಗುರುತಿಸಿ ಕಡತ ತಯಾರಾಗಿ ಮಂಜೂರಾಗಿದೆ. ಮೂರು ಮಂದಿ ದಲಿತರಿಗೆ ಸರ್ಕಾರಿ ಸೌಲಭ್ಯದಲ್ಲಿ ಮನೆ, ವಿದ್ಯುತ್ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದರು.
ಸರ್ವೆ ಹಾಗೂ ರೆವೆನ್ಯೂ ಇಲಾಖೆಯ ತಪ್ಪಿನಿಂದ ಜಾಗದ ಕಡತ ಹಾಗೂ ಪಹಣಿಯಲ್ಲಿ ಕಳಸಾಪುರ ಎಂದು ನಮೂದಾಗಿ ಆಶ್ರಯ ನಿವೇಶನ ಎಂದಾಗಿರುತ್ತದೆ. ಆದರೆ ಕಳಸಾಪುರ ಸರ್ವೆ ನಂ.1 ರಲ್ಲಿ ಎಸ್ಟೇಟ್ ಗ್ರಾಮವಾಗಿ ರುವ ಕಾರಣ ಆಶ್ರಯ ನಿವೇಶನ ಮಂಜೂರಾತಿಗೆ ಅವಕಾಶವಿರುವುದಿಲ್ಲ.
Deputy Commissioner’s office Chikmagalur ಇಲಾಖೆಗಳ ತಪ್ಪಿನಿಂದಾಗಿ ಬಡವರು, ಕೂಲಿಕಾರ್ಮಿಕರು ಇದೀಗ ತೊಂದರೆ ಅನುಭವಿಸುಂತಾಗಿದೆ ಎಂದರು.
ಗ್ರಾಮದಲ್ಲಿ ವಾಸವಿದ್ದ ಅರ್ಜಿದಾರ ಗುಡಿಸಲನ್ನು ಹಾಗೂ ಸುತ್ತಮುತ್ತಲು ಬೆಳೆಸಿದ್ದ ಬಾಳೆ, ತೆಂಗು ಹೂವಿನ ಗಿಡಗಳನ್ನು ಅರಣ್ಯ ಇಲಾಖೆ ಜೆಸಿಬಿಯಿಂದ ತೆಗೆದು ಜಾಗವನ್ನು ಸಮತಟ್ಟುಗೊಳಿಸಲಾಗಿದೆ.
ಮನೆಯ ಪೌಂಡೇ ಷನ್ ಮಾಡುವವರೆಗೂ ಮೌನವಹಿಸಿ ಮನೆ ಕಟ್ಟದಂತೆ ತಡೆದು ಅರ್ಜಿದಾರನ ಕುಟುಂಬವನ್ನು ಬೀದಿಯಲ್ಲಿ ತಂಗುವAತೆ ಮಾಡಲಾಗಿದೆ ಎಂದು ದೂರಿದರು.
ಹಿಂದುಳಿದ ವರ್ಗ ಹಾಗೂ ಬಡ ಕೂಲಿಕಾರ್ಮಿಕರನಾದ ಅರ್ಜಿದಾರ ಮಳೆಗಾಲಕ್ಕೆ ಮುನ್ನವೇ ಮಂಜೂ ರಾದ ಸರ್ಕಾರಿ ಸೌಲಭ್ಯವನ್ನು ಬಳಸಿಕೊಂಡು ಗುಡಿಸಲನ್ನು ತೆಗೆದು ಅದೇ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ ನೀಡುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಸೆಕ್ಷನ್ 4(1) ನ್ನು ಕೈಬಿಟ್ಟು ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ಈ ವಿಚಾರವಾಗಿ ಕೊಪ್ಪ ತಹಶೀಲ್ದಾರ್‌ಗೂ ಅರ್ಜಿ ಸಲ್ಲಿಸಲಾಗಿದೆ.
ಗುಡಿಸಲನ್ನು ಪರಿಶೀಲಿಸಿ ಕಂದಾಯ ಅಧಿಕಾರಿಗಳು ನಕಾಶೆ ಮಾಡಿಸಿ ಕಡತ ತಯಾರಿಸಿ ತಹಶೀಲ್ದಾರ್‌ಗೆ ರವಾನಿಸಲಾಗಿದೆ. ಈ ಸಂಬAಧ ಹಕ್ಕುಪತ್ರಕ್ಕೆ ಅರಣ್ಯ ಇಲಾಖೆಯ ಒಪ್ಪಿಗೆಗೆ ಮಾತ್ರ ಬಾಕಿಯಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೋಡಿಹೋಚಿಹಳ್ಳಿ ಗ್ರಾ.ಪಂ. ಸದಸ್ಯ ಸಣ್ಣಪ್ಪ, ಚಾಲನಾ ಸಮಿತಿಯ ಮುಖಂಡರು ಗಳಾದ ಪಿ.ಟಿ.ಚಂದ್ರಶೇಖರ್, ಜಗದೀಶ್, ಸಂತೋಷ್, ನಾಗೇಶ್ ಮತ್ತಿತರರು ಹಾಜರಿದ್ದರು.