Karnataka Assembly Election Results ಕರ್ನಾಟಕದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಎರಡು ದಿನಗಳೆ ಕಳೆದಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 135 ಸ್ಥಾನಗಳನ್ನು ಪಡೆದುಕೊಳ್ಳುವುದರ ಮುಖಾಂತರ ಭರ್ಜರಿ ಜಯವನ್ನು ಗಳಿಸಿದೆ.
ಹೊಸ ಸರ್ಕಾರ ರಚನೆಯಾಗುತ್ತಿದ್ದಂತೆ ಪ್ರತಿ ಜಿಲ್ಲೆಯಲ್ಲೂ ಯಾರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಪ್ರಶ್ನೆ ಎಲ್ಲರನ್ನ ಕಾಡ್ತಾ ಇದೆ. ಅದೇ ರೀತಿ ಶಿವಮೊಗ್ಗ ಸಚಿವ ಸ್ಥಾನ ಯಾರಿಗೆ ಲಭಿಸುತ್ತದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.
ಇನ್ನು ಶಿವಮೊಗ್ಗಕ್ಕೆ ಸಚಿವ ಸ್ಥಾನ ಯಾರಿಗೆ ದೊರೆಯಬಹುದು ಎಂದು ಲೆಕ್ಕಚಾರ ಶುರುವಾಗಿದೆ. ಕಾಂಗ್ರೆಸ್ ನ ಮೂರು ಅಭ್ಯರ್ಥಿಗಳಾದ ಬಿಕೆ ಸಂಗಮೇಶ್ವರ, ಗೋಪಾಲಕೃಷ್ಣ ಬೇಳೂರು, ಮಧು ಬಂಗಾರಪ್ಪ ಇವರಲ್ಲಿ ಯಾರಿಗೆ ಸಚಿವ ಸ್ಥಾನ ದೊರೆಯುವುದು ಸಚಿವರಾಗಬಹುದು ಎಂಬ ಚರ್ಚೆ ಲೆಕ್ಕಾಚಾರ ಈಗಾಗಲೇ ಆರಂಭಗೊಂಡಿದೆ.
ಒಂದು ವಿಶೇಷವೆಂದರೆ ಈ ಮೂರು ಅಭ್ಯರ್ಥಿಗಳು ಕೂಡ ಅನುಭವಸ್ಥರೇ… ಜಿಲ್ಲೆಗೆ ಆದ್ಯತೆ ಕೊಡುವುದರಿಂದ ಕೇವಲ ಒಬ್ಬರಿಗೆ ಸಚಿವ ಸ್ಥಾನ ಸಿಗುತ್ತದೆ.
ಸೊರಬದ ಮಧು ಬಂಗಾರಪ್ಪ ಅವರು ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರು. ಮಾಜಿ ಸಿಎಂ ಎಸ್ ಬಂಗಾರಪ್ಪ ಅವರ ಪುತ್ರ ಎಂಬ ಕಾರಣಕ್ಕೆ ಇವರಿಗೆ ಶಿವಮೊಗ್ಗ ಸಚಿವ ಸ್ಥಾನ ನೀಡಬಹುದು ಎಂದು ಲೆಕ್ಕಾಚಾರ ಹಾಕಬಹುದು.
Karnataka Assembly Election Results ಭದ್ರಾವತಿಯ ಬಿಕೆ ಸಂಗಮೇಶ್ವರ ದೃಷ್ಟಿಯಿಂದ ನೋಡುವುದಾದರೆ ಇವರು ನಾಲ್ಕನೇ ಬಾರಿ ಶಾಸಕರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರು ಒಂದು ವೇಳೆ ಭದ್ರಾವತಿಯಿಂದ ಸಂಗಮೇಶ್ವರ ಗೆದ್ದು ಬಂದಲ್ಲಿ ಮಂತ್ರಿ ಸ್ಥಾನವನ್ನು ನೀಡುವುದಾಗಿ ಮತದಾರರಿಗೆ ಭರವಸೆ ನೀಡಿದರು. ಅದೇ ರೀತಿ ಸಂಗಮೇಶ್ವರ ಅವರು ಸಹ ಈ ವಿಚಾರವನ್ನು ಮುಂದಿಟ್ಟುಕೊಂಡೇ ಪ್ರಚಾರ ನಡೆಸಿದರು. ಈ ಕಾರಣದಿಂದ ಕಾಂಗ್ರೆಸ್ ಸರ್ಕಾರಕ್ಕೆ ಸಂಗಮೇಶ್ ಅವರನ್ನು ಸಚಿವರನ್ನಾಗಿ ಮಾಡಲು ಅನಿವಾರ್ಯತೆ ಇರುವುದು ತಿಳಿಯುತ್ತದೆ.
ಸಾಗರದ ಗೋಪಾಲಕೃಷ್ಣ ಬೇಳೂರು ಮೂರನೇ ಬಾರಿ ಶಾಸಕರಾಗಿರುವ ಇವರು ಮತ್ತೊರ್ವ ಅನುಭವಿ ರಾಜಕಾರಣಿ. ಇವರಿಗೆ ಕಾಂಗ್ರೆಸ್ ಪಕ್ಷ ಅನುಭವದ ಆಧಾರದ ಮೇಲೆ ಸಚಿವ ಸ್ಥಾನ ನೀಡಬಹುದು.
ಶಿವಮೊಗ್ಗ ಸಚಿವರು ಯಾರಾಗಬಹುದು ಎಂಬುದು ಕಾದು ನೋಡಬೇಕಿದೆ.