Thursday, December 18, 2025
Thursday, December 18, 2025

Assembly Election ಅಂತೂ ಮತದಾನ ಬಹುತೇಕ ಶಾಂತಿಯುತ

Date:

Assembly Election ಚುನಾವಣೆಗಳು ನಡೆಯುವ ದಿನಗಳಲ್ಲಿ ದೊಂಬಿ, ಗಲಭೆಗಳು ಇತ್ತೀಚೆಗೆ ಸಾಮಾನ್ಯ ಸುದ್ದಿಯಾಗಿವೆ.
ಆದರೆ ಈ ಬಾರಿ ಕರ್ನಾಟಕದ ಹದಿನಾರನೇ ವಿಧಾನಸಭೆಗೆ ನಡೆದ ಚುನಾವಣೆ ಒಟ್ಟಾರೆ ಶಾಂತಿಯುತ ಎಂಬ ವರದಿ ನೋಡಿ ಸಮಾಧಾನವಾಯಿತು.
ಅಂದರೆ ಒಂದೂ ಗಲಾಟೆ ನಡೆದಿಲ್ಲವೆ? ಎಂಬ ಪ್ರಶ್ನೆ ಕೇಳಬಹುದು.
ಆದರೆ ಮಾಧ್ಯಮಗಳಲ್ಲಿ ಒಂದು ಪದ ಜಾಣ್ಮೆಯಿಂದ ಬಳಸಲಾಗುತ್ತದೆ.
“ಬಹುತೇಕ” ಶಾಂತಿಯುತ.
ಎಲ್ಲೋ ಕೆಲವೆಡೆ ನಡೆದಿದೆ.ಅದು ಲೆಕ್ಕಕ್ಕೆ ಬರುವುದಿಲ್ಲ ಎಂರ್ಥದಲ್ಲಿ ಪದ ಪ್ರಯೋಗವಾಗಿರುತ್ತದೆ.

Assembly Election ಸ್ವಾರಸ್ಯಕರ ಸಂಗತಿಗಳು ಚುನಾವಣೆಯ ದಿನ ನಡದಿವೆ. ಬಳ್ಳಾರಿ ಜಿಲ್ಲೆ ಕುರುಗೋಡಿನ ಕೊರ್ಲಗುಂದಿಯಲ್ಲಿ ಮತದಾನಕ್ಕೆ ಆಗಮಿಸಿದ ಗರ್ಭಿಣಿಗೆ ಅಲ್ಲಿಯೇ ಹೆರಿಗೆಯಾಗಿದೆ. ಆ ತಾಯಿ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ.
ಸಹಜ ಹೆರಿಗೆಯಂತೆ.ಅಂತೂ ಅಲ್ಲಿನ ಸಿಬ್ಬಂದಿ ಹಾಗೂ ಮತದಾನಕ್ಕೆ ಆಗಮಿಸಿದ್ದ ಹೆಣ್ಣುಮಕ್ಕಳು‌ ತಕ್ಷಣ ಸಹಕರಿಸಿ ತಮ್ಮ ಮಾನವೀಯತೆ ಮೆರೆದಿದ್ದಾರೆ.3.85 ಕೋಟಿ ಮಂದಿ ಮತಚಲಾಯಿಸಿದ್ದಾರೆ.

58,545 ಮತಗಟ್ಟೆಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 6 ರವರೆಗೆ ಮತದಾನ ನಡೆದಿದೆ. ಒಟ್ಟು ಅರ್ಹತೆ ಪಡೆದಿದ್ದ 5,30,85,566 ಮಂದಿ ಮತದಾರರಪೈಕಿ ಶೇ.72.67 ರಷ್ಟು (3.85 ಕೋಟಿ) ಮಂದಿ ಮತಚಲಾವಣೆ ಮಾಡಿದ್ದಾರೆ.

ಶಿವಮೊಗ್ಗ ಜಿಲ್ಲೆಗೆ ಹೊಂದಿಕೊಂಡಿರುವ ಜಿಲ್ಲೆಗಳ ಶೇಕಡಾ ಮತದಾನ ವಿವರ ಹೀಗಿದೆ
ಶಿವಮೊಗ್ಗ 79.14
ದಾವಣಗೆರೆ 77.47
ಚಿತ್ರದುರ್ಗ 80.37
ಚಿಕ್ಕಮಗಳೂರು 77.89
ಉಡುಪಿ 78.46 2018 ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ 71.1 ಮತದಾನವಾಗಿತ್ತು.
2023 ರಲ್ಲಿ ಶೇ 72.67 ಮತದಾನವಾಗಿದೆ.

Assembly Election ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ
ಗರಿಷ್ಠ ಶೇ 85.83
ಬೆಂಗಳೂರು ದಕ್ಷಿಣ ದಲ್ಲಿ‌ ಶೇ 52.80 ವಾರದ ನಡುವಿನ ದಿನ ಮತದಾನ ಇಟ್ಟುಕೊಂಡದ್ದರಿಂದ ಈ ಸಾಧನೆ ಸಾಧ್ಯವಾಗಿರಬಹುದು. ಇಲ್ಲದೇ ಇದ್ದಿದ್ದರೆ ಇನ್ನಷ್ಟೂ ಇಳಿಕೆಯಾಗುತ್ತಿತ್ತೇನೊ?
ಅಂತೂ ಚುನಾವಣೆ ಅಲ್ಲಲ್ಲಿ ಸಣ್ಣಪುಟ್ಟ ಘಟನೆ ಬಿಟ್ಟರೆ ಬಹುತೇಕ ಶಾಂತಿಯುತ ನಡೆದಿದೆ ಎಂದೇ ಮುಗಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Interact Club ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ – ರಮೇಶ್

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್ ಸಹಕಾರಿ ಎಂದು ಕ್ಷೇತ್ರ...

Veereshwar Punyashram Samskruth School ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾಯಕ ನಿಜಗುಣಿ ಮಂಗಿ ಅವರ ಹಿಂದೂಸ್ತಾನಿ ಗಾಯನ

Veereshwar Punyashram Samskruth School ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ...

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...