Metro Hospital Shivamogga ಸಾಹಸ ಕ್ರೀಡೆಗಳಲ್ಲಿ ಚಾರಣಗಳಲ್ಲಿ ಭಾಗವಹಿಸುವ ಮುನ್ನ ವೈದ್ಯಕೀಯ ತಪಾಸಣೆಯು ಅತ್ಯಂತ ಅವಶ್ಯಕ ಎಂದು ಸಾಹಸ ಮತ್ತು ಸಂಸದ ಅಕಾಡೆಮಿಯ ಇತಿಹಾಸ ಸಂಶೋಧನಾ ಕೇಂದ್ರದ ಅಧ್ಯಕ್ಷ ದಿಲೀಪ್ ಹೇಳಿದರು.
ಶಿವಮೊಗ್ಗ ನಗರದ ಮೆಟ್ರೋ ಆಸ್ಪತ್ರೆಯಲ್ಲಿ ಯೂತ್ ಹಾಸ್ಟಲ್ ಅಸೋಸಿಯೇಷನ್ ಆಫ್ ಇಂಡಿಯಾದ ವತಿಯಿಂದ ಹಿಮಾಲಯ ಹೊರಟಿರುವ ಎಲ್ಲ ಸಾಹಸರಿಗೆ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಾಹಸ ಚಾರಣ ಸಂದರ್ಭಗಳಲ್ಲಿ ಆರೋಗ್ಯ ಚೆನ್ನಾಗಿರುವುದು ತುಂಬಾ ಮುಖ್ಯ. ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆರೋಗ್ಯ ಸದೃಢವಾಗಿರುವುದರಿಂದ ಕಠಿಣ ಚಾರಣಗಳಲ್ಲಿಯು ಉತ್ಸಾಹದಿಂದ ಪಾಲ್ಗೊಳ್ಳಬಹುದು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್ ಕುಮಾರ್ ಮಾತನಾಡಿ, ಹಿಮಾಲಯ ಚಾರಣ ಸಂದರ್ಭದಲ್ಲಿ ಸುರಕ್ಷತೆ ವಹಿಸಬೇಕು. ಪ್ರತಿಯೊಬ್ಬರು ಸಾಹಸ ಮನೋಭಾವ ಬೆಳೆಸಿಕೊಳ್ಳಬೇಕು. ಇಂತಹ ಸಾಹಸ ಚಾರಣಗಳಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಉತ್ಸಾಹ ಹೆಚ್ಚುತ್ತದೆ ಎಂದು ಹೇಳಿದರು.
Metro Hospital Shivamogga ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯ ವೈದ್ಯರಾದ ಡಾ. ಶಂಕರ್, ಡಾ. ಪುಶ್ವಿಂಧರ್ ಧುನ್ಪುತ್, ಡಾ. ಕಾವ್ಯಾ ಮಾತನಾಡಿ, ಶಿವಮೊಗ್ಗದಿಂದ ಸಂಸ್ಕೃತ ಸಂಭಾಷಣಿಗರ 40ಜನರ ತಂಡವೊಂದು ಹಿಮಾಲಯ ಚಾರಣ ಹೊರಟಿದೆ. ಈ ಸಂಬಂಧ ಎಲ್ಲ ಚಾರಣಿಗರಿಗೂ ವೈದ್ಯಕೀಯ ತಪಾಸಣೆ ಮತ್ತು ಚಾರಣದ ಸಮಯದಲ್ಲಿ ಉಂಟಾಗುವ ಹಲವು ಸಮಸ್ಯೆಗಳನ್ನು ಎದುರಿಸುವ ಬಗ್ಗೆ ಮಾಹಿತಿಯನ್ನು ಮತ್ತು ಆಸ್ಪತ್ರೆ ಸಿಬ್ಬಂದಿಗಳು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಸಾಹಸ ಮತ್ತು ಸಂಸ್ಕೃತಿ ಮತ್ತು ಇತಿಹಾಸ ಸಂಶೋಧನಾ ಮತ್ತು ಅಧ್ಯಯನ ವೇದಿಕೆ ಅ.ನಾ.ವಿಜೇಂದ್ರ ರಾವ್, ತರುಣೋದಯ ಘಟಕದ ಚೇರ‍್ಮನ್ ವಾಗೀಶ್ ಉಪಸ್ಥಿತಿ ಇದ್ದರು.