ರೈತರ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಹರಿಸಲು, ದೆಹಲಿಯ ಸಂಸತ್ ಭವನದ ವರೆಗೆ ನಡೆಸಲು ಉದ್ದೇಶಿಸಿದ್ದ ಟ್ಯಾಕ್ಟರ್ ರಾಲಿಯನ್ನು ಬಿಟ್ಟಿರುವುದಾಗಿ ರೈತ ಸಂಘಟನೆಗಳ ಒಕ್ಕೂಟದ ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ಸಂಸತ್ತಿನ ಚಳಿಗಾಲದ ಅಧಿವೇಶನವು ನ.29ರಂದು ಆರಂಭವಾಗಲಿದೆ. ಅದೇ ದಿನ ಟ್ಯಾಕ್ಟರ್ ರಾಲಿ ನಡೆಸಲು ರೈತರ ಸಂಘಟನೆಗಳ ಒಕ್ಕೂಟ ಎಸ್ ಕೆ ಎಂ ತೀರ್ಮಾನಿಸಲಾಗಿತ್ತು.
ಈಗ ಸಂಸತ್ತು ಭವನದವರೆಗೆ ನಡೆಸಲು ಉದ್ದೇಶಿಸಿದ್ದ ರಾಲಿ ರದ್ದಾಗಿದೆ.
ನಮ್ಮ ಬೇಡಿಕೆಗಳ ಕುರಿತು ಪ್ರಧಾನಿಗೆ ಪತ್ರ ಬರೆದಿದ್ದೇವೆ.ಅದರ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದ್ದೇವೆ. ಡಿಸೆಂಬರ್ ನಾಲ್ಕರಂದು ಮತ್ತೊಂದು ಸಭೆ ನಡೆಸುತ್ತೇವೆ. ಅನಂತರ ಹೋರಾಟಕ್ಕೆ ನಿರ್ಧರಿಸುತ್ತೇವೆ ಎಂದು ಎಸ್ ಕೆ ಎಂ ಮುಖಂಡ ದರ್ಶನ್ ಪಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸರ್ಕಾರವು ರೈತರೊಂದಿಗೆ ಗೌರವದಲ್ಲಿ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಇದಕ್ಕೂ ಮುನ್ನ ಪ್ರತಿಭಟನೆಯನ್ನು ಕೈಬಿಡುವಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಮನವಿ ಮಾಡಿದ್ದರು.
‘ಭತ್ತದ ಕೂಳೆಗೆ ಬೆಂಕಿ ಹಾಕುವುದನ್ನು ಅಪರಾಧ ಎಂದು ಪರಿಗಣಿಸಬಾರದು ಎಂಬ ಕೃಷಿಕರ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡಿದೆ. ಬೆಳೆ ವೈವಿಧ್ಯತೆ, ಕನಿಷ್ಠ ಬೆಂಬಲ ಬೆಲೆ ಖಾತರಿ ಸೇರಿದಂತೆ ಇತರೆ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಬೇಕಿದೆ. ಪ್ರಧಾನಮಂತ್ರಿ ಈಗಾಗಲೇ ಪ್ರಕಟಗೊಳಿಸಿರುವ ಅಂತೆ ಸಮಿತಿ ರಚನೆಯೊಂದಿಗೆ ಈ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಹೇಳಿದ್ದಾರೆ.
ಪ್ರತಿಭಟನನಿರತ ರೈತರ ಮೇಲೆ ಹೇರಿರುವ ಮೊಕದ್ದಮೆಗಳನ್ನು ವಾಪಸಾತಿಯು ರಾಜ್ಯಗಳ ವ್ಯಾಪ್ತಿಗೆ ಬರಲಿದೆ. ಪ್ರಕರಣಗಳ ಗಂಭೀರತೆ ಆಧರಿಸಿ ಪ್ರಕರಣ ಕೈಬಿಡುವುದು ಮತ್ತು ಪರಿಹಾರ ಘೋಷಣೆ ಕುರಿತು ರಾಜ್ಯ ಸರ್ಕಾರ ತೀರ್ಮಾನಿಸಬೇಕಿದೆ. ಮೂರು ಕೃಷಿ ಕಾಯ್ದೆಗಳನ್ನು ಕೈ ಬಿಡಲಾಗುವುದು ಎಂದು ಸರ್ಕಾರ ಪ್ರಕಟಿಸಿದ ನಂತರ ಮುಷ್ಕರ ಮುಂದುವರೆಯುವುದ ರಲ್ಲಿ ಅರ್ಥವಿಲ್ಲ. ಅದಕ್ಕಾಗಿ ದೊಡ್ಡ ಮನಸ್ಸು ಮಾಡಿ ಧರಣಿ ಕೈಬಿಡಬೇಕು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕೋರಿದ್ದಾರೆ.