Thursday, March 19, 2026
Thursday, March 19, 2026

Kiccha Sudeep ಶಿಕಾರಿಪುರದಲ್ಲಿ ವಿಜಯೇಂದ್ರ ಪರ ಕಿಚ್ಚ ಸುದೀಪ್ ರೋಡ್ ಶೋ

Date:

Kiccha Sudeep ಖ್ಯಾತ ಚಲನಚಿತ್ರ ನಟ ಕಿಚ್ವ ಸುದೀಪ್ ಅವರು ಇಂದು ಶಿಕಾರಿಪುರದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೆಂದ್ರ ಅವರ ಪರ ಮತ ಯಾಚಿಸಿದರು. ಸಂಸದ ಬಿ.ವೈ. ರಾಘವೇಂದ್ರ ಸಾತ್ ನೀಡಿದರು.

ಸುಮಾರು 2 ಗಂಟೆಗಳ ಕಾಲ ನಡೆದ ರೋಡ್ ಶೋ ಅಕ್ಕಮಹಾದೇವಿ ವೃತ್ತದಿಂದ ಆರಂಭವಾಗಿ, ಪ್ರಮುಖ ರಸ್ತೆಗಳಲ್ಲಿ ಸಾಗಿ ಬಸ್ ನಿಲ್ದಾಣ ವೃತ್ತದಲ್ಲಿ ಕೊನೆಯಾಯಿತು. ನಾಲ್ಕು ಕಿಲೋಮೀಟರ್ ನಷ್ಟು ದೂರ ಸಾಗಿದ ಈ ರೋಡ್ ಶೋನಲ್ಲಿ ಸಾವಿರಾರು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ವೀಕ್ಷಿಸಿದರು.

ಹಲವರು ಹೂವುಗಳನ್ನು ಎರಚಿ ಸಂಭ್ರಮಿಸಿದರು. ಬಿ.ವೈ. ವಿಜಯೇಂದ್ರ, ಬಿ.ವೈ. ರಾಘವೇಂದ್ರ ಹಾಗೂ ಯಡಿಯೂರಪ್ಪ ಪರ ಘೋಷಣೆ ಕೂಗಿದರು. “ಕಿಚ್ಚ ಕಿಚ್ಚ” ಎಂಬ ಘೋಷಣೆಯಂತೂ ಮುಗಿಲು ಮುಟ್ಟಿತ್ತು. ಕಿಚ್ಚ ಸುದೀಪ್ ಅವರು ಮದಕರಿ ಸಿನಿಮಾದ “ಕೋಪದಲ್ಲಿದ್ದಾಗ ದೇವ್ರು ಎಂಥೆಂತವರನ್ನೋ ಸೃಷ್ಟಿ ಮಾಡ್ತಾನೆ. ಆದ್ರೆ ಖುಷಿಯಲ್ಲಿದ್ದಾಗ ಕಿಚ್ಚ ಸುದೀಪ್ ತರದವರನ್ನ ಸೃಷ್ಟಿ ಮಾಡ್ತಾನೆ” ಡೈಲಾಗ್ ಹೇಳಿ ರಂಜಿಸಿದರು.

Kiccha Sudeep ರೋಡ್ ಶೋ ಉದ್ದಕ್ಕೂ ಬಿಜೆಪಿಯ ಬಾವುಟಗಳು, ಕಿಚ್ಚ ಸುದೀಪ್ ಅವರ ಫೋಟೋಗಳು, ಪ್ಲಕಾರ್ಡ್ ಗಳು, ರಾರಾಜಿಸಿದವು.
ಪ್ರಚಾರದ ಕೊನೆಯ ದಿನವಾದ ಇಂದು ಮಧ್ಯಾಹ್ನದ ನಂತರ ಶಿರಾಳಕೊಪ್ಪದಲ್ಲಿ ಸುದೀಪ್ ಅವರ ರೋಡ್ ಶೋ ನಡೆಯಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...