Karnataka State Election Commission 80 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದವರು ಹಾಗೂ ಅಂಗವಿಕಲರಿಗೆ ಚುನಾವಣಾ ಆಯೋಗವು ಮನೆಯಿಂದಲೇ ಮತ ಚಲಾಯಿಸುವ ಅವಕಾಶ ನೀಡಿರುವನ್ವಯ ಈ ಪ್ರಕ್ರಿಯೆ ಏ.29 ರಿಂದ ಆರಂಭವಾಗಿದ್ದು, ಏ.06 ಕ್ಕೆ ಅಂತ್ಯಗೊಂಡಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಮನೆ ಮತದಲ್ಲಿ ಶೇ.94.22 ಪ್ರಗತಿ ಸಾಧಿಸಲಾಗಿದೆ.
ಜಿಲ್ಲೆಯಲ್ಲಿ ನೋಂದಾಯಿಸಲ್ಪಟ್ಟ 80 ವರ್ಷ ಮೇಲ್ಪಟ್ಟ ಮತ್ತು ಅಂಗವಿಕಲರ ಒಟ್ಟು 2374 ಮತದಾರರ ಪೈಕಿ ಪೋಸ್ಟಲ್ ಬ್ಯಾಲಟ್ ಮೂಲಕ 2237 ಮತಗಳನ್ನು ಚಲಾಯಿಸಲಾಗಿದೆ. ಶೇ.94.22 ಪ್ರಗತಿ ಸಾಧಿಸಲಾಗಿದೆ.
Karnataka State Election Commission ಜಿಲ್ಲೆಯಲ್ಲಿ ಅಗತ್ಯ ಸೇವೆಗಳಡಿ(ಎವಿಇಎಸ್) ಪೋಸ್ಟಲ್ ಬ್ಯಾಲೆಟ್‍ಗೆ 149 ಮತದಾರರು ನೋಂದಾಯಿಸಿಕೊಂಡಿರುತ್ತಾರೆ.
ಈ ಪೈಕಿ 126 ಮತದಾರರು ಮತ ಚಲಾಯಿಸಿದ್ದಿ ಶೇ.84.56 ಪ್ರಗತಿ ಸಾಧಿಸಲಾಗಿದೆ.