Friday, November 22, 2024
Friday, November 22, 2024

Chikmagalur District Kannada Literary Meet ಕನ್ನಡ ಭಾಷೆ ಹೆತ್ತತಾಯಿಯಂತೆ- ಮಂಜುಳಾ ಹುಲ್ಲಹಳ್ಳಿ

Date:

Chikmagalur District Kannada Literary Meet ಇಂಗ್ಲೀಷ್ ಜ್ಞಾನ ನೀಡುವ ಭಾಷೆಯಾದರೆ, ಕನ್ನಡ ಭಾಷೆ ಹೆತ್ತ ತಾಯಿ ಯಂತೆ. ಪ್ರತಿನಿತ್ಯದ ಚಟುವಟಿಕೆಗಳಲ್ಲಿ ಕನ್ನಡ ಬಳಸುವುದರ ಮೂಲಕ ಹೆತ್ತ ತಾಯಿಗೆ ನೀಡುವ ಗೌರವವನ್ನು ಕನ್ನಡ ಭಾಷೆಗೂ ನೀಡಿ ನಾಡಿನ ಬೆಳವಣಿಗೆಗೆ ಮುಂದಾಗಬೇಕು ಎಂದು ಯುವ ಸಬಲೀಕರಣ ಇಲಾಖೆಯ ಉಪ ನಿರ್ದೇಶಕಿ ಡಾ. ಮಂಜುಳಾ ಹುಲ್ಲಹಳ್ಳಿ ಹೇಳಿದರು.

ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಲ್ಯಾಣನಗರದ ನೈಟಿಂಗೇಲ್ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜು ಆವರಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕಸಾಪ 109ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯ ಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.

1915ರಲ್ಲಿ ಹೆಚ್.ವಿ. ನಂಜುಂಡ ಯ್ಯನವರ ಅಧ್ಯಕ್ಷರಾಗಿ ಪ್ರಾರಂಭಗೊಂಡ ಕನ್ನಡ ಸಾಹಿತ್ಯ ಪರಿಷತ್ ಅಂದಿ ನಿಂದ ಇಲ್ಲಿಯವರೆಗೂ ಕನ್ನಡ ನಾಡು, ನುಡಿ ಹಾಗೂ ರಕ್ಷಣೆ ಬಗ್ಗೆ ಹಲವಾರು ಜಾಗೃತಿ ಹಾಗೂ ಸಾಮಾಜಿಕ ಕಾರ್ಯಕ್ರಮವನ್ನು ಆಯೋಜಿಸಿ ಕನ್ನಡದ ಕಂಪನ್ನು ಎಲ್ಲೆಡೆ ಹಮ್ಮಿಸಿದ್ದಾರೆ ಎಂದರು.

ವಿದ್ಯಾರ್ಥಿಗಳು ಬಾಲ್ಯದಿಂದಲೇ ಕನ್ನಡ ಭಾಷೆ ಬಗ್ಗೆ ವಿಶೇಷ ಅಭಿಮಾನ ಹೊಂದಿರಬೇಕು. ಎಲ್ಲೇ ತೆರಳಿದರೂ ಕನ್ನಡದಲ್ಲೇ ಸಹಿಯನ್ನು ಮಾಡುವ ಮೂಲಕ ಭಾಷೆ ಬೆಳವಣಿಗೆಗೆ ಸಹಕರಿಸಬೇಕು.

ಗೆಳೆಯರೊಂದಿಗೆ ಎಂದಿನಂತೆ ಕನ್ನಡದಲ್ಲೇ ಮಾತನಾಡುವ ವಿದ್ಯಾರ್ಥಿಗಳು ವೇದಿಕೆ ಕಾರ್ಯಕ್ರಮಗಳಲ್ಲೂ ಅಂಜದೇ ಧೈರ್ಯವಾಗಿ ಕನ್ನಡ ಭಾಷೆಯಲ್ಲೇ ಸಭಿಕರನ್ನು ಮೆಚ್ಚಿಸುವಂತೆ ವಾಕ್ಚಾತುರ್ಯ ಬೆಳೆಸಿಕೊಳ್ಳಬೇಕು ಎಂದರು.
ಕನ್ನಡ ನಾಡಿನ ಬೆಳವಣಿಗೆಗೆ ಸಹಕರಿಸುವ ವಿದ್ಯಾರ್ಥಿಗಳು ಶಾಲೆಗಳಲ್ಲಿ ಅಭ್ಯಾಸಿಸುವ ಪುಸ್ತಕಗಳನ್ನು ಮಾತ್ರ ಅಧ್ಯಯನ ಮಾಡಿದರೆ ಸಾಲದು. ನಾಡಿನ ಕವಿಗಳು ರಚಿಸಿರುವಂತಹ ನಿಘಂಟು ಹಾಗೂ ಸಾಮಾಜಿಕ ಅರಿವಿನ ಪುಸ್ತಕಗಳನ್ನು ಹವ್ಯಾಸ ಮಾಡಿಕೊಂಡಲ್ಲಿ ಮುಂದಿನ ವೃತ್ತಿ ಬದುಕಿನಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದುವರೆಗೂ ಎರಡು ಭಾರೀ ಮಾತ್ರ ಅಖಿಲ ಭಾರತ ಕಸಾಪ ಸಮ್ಮೇಳನ ನಡೆದಿದ್ದು ಅಲ್ಲಿಂದ ಇಲ್ಲಿಯವರೆಗೂ ಜಿಲ್ಲೆಯಲ್ಲಿ ರಾಷ್ಟ್ರಮಟ್ಟದ ಸಮ್ಮೇಳನಗಳು ನಡೆದು 45ವರ್ಷಗಳು ಕಳದಿವೆ. ಮುಂದಿನ ದಿನಗಳಲ್ಲಿ ಜಿಲ್ಲಾಧ್ಯಕ್ಷರ ಸತತ ಪ್ರಯತ್ನದಿಂದ ಮತ್ತೊಮ್ಮೆ ಜಿಲ್ಲೆಯಲ್ಲಿ ರಾಷ್ಟ್ರಮಟ್ಟದ ಕನ್ನಡ ಸಮ್ಮೇಳನ ನಡೆಸಿದ್ದಲ್ಲಿ ಜಿಲ್ಲೆಯ ಹಲವಾರು ಪ್ರತಿಭೆಗಳನ್ನು ಹೊರತರಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಸಾಪ ಹಿರಿಯ ಸದಸ್ಯ ಬಿ.ಬಿ.ರೇಣುಕಾರ್ಯ ಕಸಾಪ ಬೆಳ ವಣಿಗೆಗೆ ಅಂದಿನ ಸಮಯದಲ್ಲೇ ಡಿ.ಎಲ್.ನರಸಿಂಹಚಾರ್ಯ, ಗೋಪಾಲಕೃಷ್ಣ ಅಡಿಗ, ಮಿರ್ಜಾ ಇಸ್ಮಾಯಿಲ್, ನಾಲ್ವಡಿ ಕೃಷ್ಣರಾಜೇ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯ ಅವರ ಅಪಾರವಾದ ಕೊಡುಗೆಯಿದೆ ಎಂದರು.

Chikmagalur District Kannada Literary Meet ವಾಲ್ಮೀಕಿಯು ರಾಮಾಯಣ ಗ್ರಂಥವನ್ನು ರಚಿಸಿ ದೇಶಾದ್ಯಂತ ಅಚ್ಚರಿಯನ್ನು ಮೂಡಿಸಿದ್ದು ಕನ್ನಡಕ್ಕೆ ಕುವೆಂಪುರವರು ಅನುವಾದಿಸಿ ಕನ್ನಡ ಭಾಷೆಗೆ ಇನ್ನಷ್ಟು ಜೀವ ತುಂಬಿದರು. ಇಂತಹ ರಾಮಾಯಣ, ಮಹಾ ಭಾರತ ಗ್ರಂಥವನ್ನು ಮನೆಯಲ್ಲಿರಿಸಿ ಇಂದಿನ ಯುವಪೀಳಿಗೆ ಅಭ್ಯಾಸಿಸಬೇಕು ಎಂದು ಸಲಹೆ ಮಾಡಿದರು.
ಪ್ರಾಸ್ತಾವಿಕ ಮಾತನಾಡಿದ ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಕನ್ನಡ ಭಾಷೆ ಎಂಬುದು ಭಾಷೆಯಲ್ಲ ಅದೊಂದು ಸಂಸ್ಕೃತಿ. ನಾಡಿನ ಹಲವಾರು ಕವಿಗಳು ಕೊಡುಗೆಯಿಂದ ವಿಶ್ವಾದ್ಯಂತ ಕನ್ನಡ ಕಂಪು ಪಸರಿಸಿದೆ. ಇಂದಿನ ವಿದ್ಯಾರ್ಥಿಗಳು ಕುವೆಂಪು, ದ.ರಾ.ಬೇಂದ್ರ, ಮಾಸ್ತಿ ವೆಂಕಟೇಶ್ ಅಯ್ಯಗಾರ್ ಸೇರಿದಂತೆ ಇತರರ ಕವಿಗಳು ರಚಿಸಿರುವ ಕೃತಿಗಳನ್ನು ಅಧ್ಯಯನ ಮಾಡಿದರೆ ಪ್ರಬುದ್ಧತೆ ಮೂಡಿ ಸಮಾಜದಲ್ಲಿ ಸಮರ್ಥ ವ್ಯಕ್ತಿಯಾಗಿ ರೂಪುಗೊಳ್ಳಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೂರೀ ಶ್ರೀನಿವಾಸ್ ನೆಲ, ಜಲ ಸಂರಕ್ಷಣೆ ಹಾಗೂ ಬೆಳವಣಿಗೆಗೆ ಮುಂದಾಗಲು ಇಂದು ಲಕ್ಷಗಟ್ಟಲೇ ಮಂದಿ ಕಸಾಪ ಅಜೀವ ಸದಸ್ಯರಾಗುತ್ತಿದ್ದಾರೆ. ಇದರಿಂದ ನಾಡಿನಾದ್ಯಂತ ಯಾವುದೇ ಸ್ಥಳದಲ್ಲಿ ಕಸಾಪ ಸಮ್ಮೇಳನ ನಡೆದರೆ ಅಲ್ಲಿ ದೊರೆಯುವ ಪುಸ್ತಕಗಳು ಅಜೀವ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಲಭಿಸಲಿದೆ ಎಂದು ಮಾಹಿತಿ ತಿಳಿಸಿದರು.

ಈ ಸಂದರ್ಭದಲ್ಲಿ ನೈಟಿಂಗೇಲ್ ಸ್ಕೂಲ್ ಆಫ್ ಸೊಸೈಟಿಯ ಕಾರ್ಯದರ್ಶಿ ಶಶಿಕಲಾ ನಾಯ್ಕ್, ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಹೆಚ್.ಸೋಮಶೇಖರ್, ಶ್ರೀಮತಿ ವೀಣಾ ಮಲ್ಲಿಕಾರ್ಜುನ್, ವೀರೇಶ್ ಕೌಲಗಿ ಹಾಗೂ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...