Assembly General Election-2023 ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ರ ಮತಗಟ್ಟೆ ಕಾರ್ಯನಿರ್ವಹಿಸಲು ಮತಗಟ್ಟೆ ಅಧ್ಯಕ್ಷಾಧಿಕಾರಿ, ಮತಗಟ್ಟೆ ಸಿಬ್ಬಂದಿಗಳನ್ನು ನೇಮಕಾತಿ ಮಾಡಲಾಗಿದೆ. ಈ ಅಧಿಕಾರಿ ಅಥವಾ ಸಿಬ್ಬಂದಿಗಳಿಗೆ ಮೇ.04 ರಂದು 2ನೇ ಹಂತದ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.
Assembly General Election-2023 ಚುನಾವಣಾ ಕಾರ್ಯಕ್ಕೆ ನೇಮಕಾತಿಗೊಂಡು ಅಂಚೆ ಮತಪತ್ರ ನಮೂನೆ-12ನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳು ಅಂಚೆ ಮತಪತ್ರ ಮುಖಾಂತರ ಮತ ಚಲಾಯಿಸಲು, ಆಯಾ ವಿಧಾನಸಭಾ ಕ್ಷೇತ್ರದ ತರಬೇತಿ ನಡೆಯುವ ಸ್ಥಳದಲ್ಲಿ ಪ್ರತ್ಯೇಕವಾಗಿ ವಿಧಾನಸಭಾ ಕ್ಷೇತ್ರವಾರು ವೋಟರ್ ಫೆಸಿಲಿಟಿ ಸೆಂಟರ್‍ಗಳನ್ನು ತೆರೆಯಲಾಗಿದೆ. ತಮ್ಮ ವಿಧಾನಸಭಾ ಕ್ಷೇತ್ರದ ಮತಪತ್ರವನ್ನು ಪಡೆದುಕೊಂಡು ಕಡ್ಡಾಯವಾಗಿ ತರಬೇತಿ ದಿನದಂದೆ ವೋಟರ್ ಫೆಸಿಲಿಟಿ ಸೆಂಟರ್‍ಗಳಲ್ಲಿ ಮತ ಚಲಾಯಿಸಲು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ತಿಳಿಸಿದ್ದಾರೆ.