Thursday, December 18, 2025
Thursday, December 18, 2025

Online Business ಆನ್ ಲೈನ್ ವ್ಯವಹಾರದಲ್ಲಿ ಜಾಗೃತಿವಹಿಸಬೇಕು-ಡಾ.ವೀರಮಂಜು

Date:

Online Business ಆನ್‌ಲೈನ್ ವ್ಯವಸ್ಥೆಯಲ್ಲಿ ವ್ಯವಹಾರ ಮಾಡುವಾಗ ಅತ್ಯಂತ ಜಾಗೃತಿ ವಹಿಸಬೇಕಾಗಿರುವುದು ಅವಶ್ಯಕ. ಸ್ವಲ್ಪ ಎಚ್ಚರ ತಪ್ಪಿದರೂ ವಂಚನೆಗೆ ಒಳಗಾಗುತ್ತೇವೆ ಅಥವಾ ದುರ್ಬಳಕೆ ಆಗುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ವೀರಮಂಜು ಹೇಳಿದರು.

ಸೈಬರ್ ಸುರಕ್ಷತೆ ಹಾಗೂ ಹಣಕಾಸಿನ ವ್ಯವಹಾರದಲ್ಲಿ ಆಗುವ ಹ್ಯಾಕಿಂಗ್ ತೊಂದರೆ ಕುರಿತು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಡಿಜಿಟಲ್ ವ್ಯವಸ್ಥೆ ಹೆಚ್ಚಾದರೆ ಉಪಯೋಗ ಕೂಡ ಹೆಚ್ಚುತ್ತಿದೆ. ಆದರೆ ಡಿಜಿಟಲ್ ವ್ಯವಸ್ಥೆಯಲ್ಲಿ ತೊಂದರೆ ಆಗುವ ಸಾಧ್ಯತೆಯು ಹೆಚ್ಚಿರುತ್ತದೆ. ಮಾಹಿತಿ ಸೋರಿಕೆ ಅಥವಾ ಕಳ್ಳತನ ಆದಲ್ಲಿ ವಂಚನೆಗೆ ಒಳಗಾಗಬೇಕಾಗುತ್ತದೆ. ಆದ್ದರಿಂದ ಸುರಕ್ಷತೆ ಹಾಗೂ ಜಾಗೃತಿಯ ಬಳಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದರು.

ಅಂತರ್ಜಾಲದ ಬಳಕೆಯು ನಮ್ಮ ಜೀವನದಲ್ಲಿ ದಿನನಿತ್ಯ ಹೆಚ್ಚಾಗುತ್ತಿದೆ. ಗೃಹೋಪಯೋಗಿ ವ್ಯವಸ್ಥೆಯಲ್ಲೂ ಐಒಟಿ ಕಾನ್ಸೆಪ್ಟ್ ಬಳಕೆ ಮಾಡಲಾಗುತ್ತಿದೆ. ಎಲ್ಲ ವ್ಯವಸ್ಥೆಯು ಸ್ಮಾರ್ಟ್ ಆಗುತ್ತಿದ್ದು, ನೆಟ್‌ನಿಂದಲೇ ಎಲ್ಲವೂ ನಿರ್ವಹಣೆ ಮಾಡಲಾಗುತ್ತದೆ. ಆದರೆ ದುರ್ಬಲ ನೆಟ್ ವರ್ಕ್ ವ್ಯವಸ್ಥೆ ಇದ್ದರೆ ಹ್ಯಾಕರ್‌ಗಳು ಸುಲಭವಾಗಿ ವಂಚನೆ ಮಾಡುತ್ತಾರೆ ಎಂದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಸೈಬರ್ ಬಳಕೆ ಬಗ್ಗೆ ಎಲ್ಲರೂ ತಿಳವಳಿಕೆ ಹೊಂದಬೇಕು. ಡಿಜಿಟಲ್ ಯುಗ ಆಗಿರುವುದರಿಂದ ಸೈಬರ್ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿರಬೇಕು. ಸೈಬರ್ ಅಪರಾಧ ಹಾಗೂ ಹ್ಯಾಕಿಂಗ್ ಸಮಸ್ಯೆ ಹೆಚ್ಚುತ್ತಿರುವ ಕಾಲ ಇದಾಗಿದೆ. ಸುರಕ್ಷಿತವಾಗಿ ಆನ್‌ಲೈನ್ ವ್ಯವಹಾರ ನಡೆಸಬೇಕು ಎಂದು ಹೇಳಿದರು.

Online Business ಅಗಮ್ಯ ಸೈಬರ್ ಟೆಕ್ ಸಂಸ್ಥಾಪಕ ಮಹೇಶ್ ವಸ್ತçದ್ ಅವರು ಹ್ಯಾಕಿಂಗ್ ವಿಷಯಗಳ ಕುರಿತು ಕಾರ್ಯಾಗಾರ ನಡೆಸಿಕೊಟ್ಟರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಬಿ.ಗೋಪಿನಾಥ್, ಎಂ.ರಾಜು, ಶಿಲ್ಪಾ ಗೋಪಿನಾಥ್, ಪರಮೇಶ್ವರ್, ಗಣೇಶ ಅಂಗಡಿ, ಮರಿಸ್ವಾಮಿ, ರಮೇಶ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...

Department of Agriculture 2026 ಜನವರಿ 6. ಕೃಷಿ ಇಲಾಖೆಯಿಂದ “ಸಿರಿಧಾನ್ಯ & ಮರೆತು ಹೋದ ಖಾದ್ಯಗಳ ಪಾಕ ತಯಾರಿ” ಸ್ಪರ್ಧೆ

Department of Agriculture ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2026 ರ ಅಂಗವಾಗಿ ಕೃಷಿ...

Shivamogga Police ಶಿಕಾರಿಪುರ- ಚುರ್ಚುಗುಂಡಿಯಿಂದ ಯುವಕ ನಾಪತ್ತೆ, ಪೊಲೀಸ್ ಪ್ರಕಟಣೆ

Shivamogga Police ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...