B. Y. Vijayendra ಈಗ ಶಿವಮೊಗ್ಗದ ಶಿಕಾರಿಪುರ ವಿಧಾನ ಸಭಾ ಕ್ಷೇತ್ರ ಕುತೂಹಲ ಮನೆಮಾಡಿಕೊಂಡಿದೆ.
ರಾಜಾಹುಲಿ ಕ್ಷೇತ್ರವಾದ ಶಿಕಾರಿಪುರ ಕ್ಷೇತ್ರದಲ್ಲಿ ಈಗ ಆ ಘರ್ಜನೆ ಕೇಳಿಸುತ್ತಿಲ್ಲ.
ಆದರೂ ಹುಲಿಯನ್ನ
ಮರೆಯುವಂತಿಲ್ಲ.
ಹೀಗೆ ಜನಪ್ರಿಯ ವ್ಯಕ್ತಿಯಾಗಿ, ಹಿರಿಯ ನಾಯಕ ಮಣಿಗಳಾಗಿರುವ ಯಡಿಯೂರಪ್ಪ ನವರ ರಾಜಕೀಯ ಆಡುಂಬೊಲ ಶಿಕಾರಿಪುರ.
ಬಹುಷಃ ಬಂಗಾರಪ್ಪನವರ ಸೊರಬ ಹೇಗೆ ತವರಿನಂತಾಗಿತ್ತೋ ಹಾಗೆ.
ಶಿಕಾರಿಪುರದ ಮಂದಿ ಶಿಕಾರಿ ಆಡುವುದರಲ್ಲಿ ನಿಸ್ಸೀಮರು. ಮುಗ್ಧ ಜನ. ಸ್ನೇಹ,ಪ್ರೀತಿ ವಿಶ್ವಾಸಗಳ ಶಿಕಾರಿಮಾಡಿ ಜನಗಳಿಸುವವರು.
ಹಿಂದೆ ಕಾಂಗ್ರೆಸ್ಸು ಅಲ್ಲಿ ಗೆಲುವುಪಡೆದಿತ್ತು.
ಆ ಚರಿತ್ರೆಯನ್ನೇ ದೋಸೆ ಮಗುಚುವಂತೆ ಮಾಡಿ ಯಡಿಯೂರಪ್ಪ
ಶಾಸಕರಾಗಿ ಆಯ್ಕೆಯಾಗುತ್ತಾ ಬಂದರು. ಅಲ್ಲಿನ ಜನ ಹೇಳುವಂತೆ ಕ್ರಿಯಾಶೀಲವಾಗಿ ಜನೋಪಕಾರಿ ಕಾರ್ಯಗಳನ್ನ ಕೈಗೆತ್ತಿಕೊಂಡರು.
ಮೊದಲ ಗೆಲುವಿನಿಂದ ಮತ್ತೆ ಹಿಂತಿರುಗಿ ನೋಡುವ ಪ್ರಸಂಗವೇ ಬರಲಿಲ್ಲ.
ಈಗ ಇಲ್ಲಿ ಉದ್ಭವಿಸಿರುವ ಸಮಸ್ಯೆಯೆಂದರೆ ಬಿಎಸ್ವೈ ಕಣದಲ್ಲಿಲ್ಲ.
ವಿಜಯೇಂದ್ರ ಕಣಕ್ಕೆ ಹೊಸಮುಖ. ಅವರ ಸಂಪೂರ್ಣ ಯಶಸ್ಸಿಗೆ ಬಿಎಸ್ ವೈ
ಅವರೇ ಊರುಗೋಲು. ಜೊತೆಗೆ ಸಹೋದರ ಸಂಸದ ರಾಘವೇಂದ್ರ ಸಾಥ್ ನೀಡಿ ಗೆಲ್ಲಿಸಬೇಕು.
ಹಾಗೆಂದು ವಿಜಯೇಂದ್ರ ರಾಜ್ಯ ರಾಜಕೀಯಕ್ಕೆ ಹಳಬರು.ಸ್ಥಳೀಯರಾಜಕೀಯಕ್ಕೆ “ಫ್ರೆಷ್ ಫೇಸ್”.
ಪರಿಣಿತರ ಪ್ರಕಾರ ವಿಜಯೇಂದ್ರ ಗೆಲುವು ಸಣ್ಣ ಸಲೀಸು.ಆದರೆ ಕಾಂಗ್ರೆಸ್ ಮತ್ತು ಬಂಡಾಯ ಕಾಂಗ್ರೆಸ್
ಅಭ್ಯರ್ಥಿ ಈಗ ಒಂದಾಗಿದ್ದಾರೆ. ಇದೊಂದು ಚೂರು ಇರುಕಾಗಬಹುದು. ಶಿಕಾರಿಪುರ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 1,95,370.
ಸುಮಾರು ಐವತ್ತು ಸಾವಿರಕ್ಕೂ ಹೆಚ್ವು ಲಿಂಗಾಯತ ಮತಗಳಿವೆ.
ನಂತರ ಎಸ್ ಸಿ ಎಸ್ ಟಿ ಪರಿವಾರದ ನಲವತ್ತು ಸಾವಿರಕ್ಕೂ ಅಧಿಕ ಮತದಾರರಿದ್ದಾರೆ.
ಕುರುಬ ಮತ್ತು ಈಡಿಗ ಜನಾಂಗದ ಮತದಾರರ ಸಂಖ್ಯೆ ಮೂವತ್ತು ಸಾವಿರಕ್ಕೂ ಮಿಕ್ಕಿದೆ.
ಇವೇ ನಿರ್ಣಾಯಕ ಮತಗಳೂ ಆಗಿವೆ. ಅಚ್ಚರಿಯೆಂದರೆ
ಜೆಡಿಎಸ್ ಶಿಕಾರಿಪುರದಲ್ಲಿ ಅಭ್ಯರ್ಥಿಯನ್ನೇ ನಿಲ್ಲಿಸಿಲ್ಲ.
ಸದ್ಯ ರಾಜಕೀಯ ತಜ್ಞರು ಹೇಳುವಂತೆ ಕಾಂಗ್ರೆಸ್ ಅಭ್ಯರ್ಥಿ ಪ್ರಬಲವಾಗಿಲ್ಲ.
ಆದರೂ ಬಿಎಸ್ ವೈ ವಿರೋಧಿಗಳಿಲ್ಲ ಅನ್ನುವಂತಿಲ್ಲ.
ಅಭಿವೃದ್ಧಿ ಆಗಿದೆ ಇಲ್ಲ ಅಂತ ಹೇಳುವ ಹಾಗಿಲ್ಲ. ಆದರೆ ಕುಟುಂಬ ರಾಜಕಾರಣವನ್ನ ಇಷ್ಟಪಡದವರ ಸಂಖ್ಯೆ ತನ್ನ ತಾನೇ ಬೆಳೆಯುತ್ತಿದೆ.
ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಬಾಚಿಕೊಳ್ಳುವ ಮತಗಳೂ ಕಾಂಗ್ರೆಸ್ ಪಕ್ಷಕ್ಕೆ ಪ್ಲಸ್ ಆಗುತ್ತವೆ. ಮುಸ್ಲೀಂ ಮತದಾರರು ಮತ್ತು ಬಂಜಾರ ಸಮುದಾಯದವರು ಈಗ ಮುಂಚಿನ ಮನಸ್ಥಿತಿ ಹೊಂದಿಲ್ಲ.
ಅಂತಹ ಘಟನೆಗಳು ಶಿಕಾರಿಪುರದಲ್ಲಿ ಸಂಭವಿಸಿವೆ.
B. Y. Vijayendra ಏನೇ ಆದರೂ ಹಿರಿಯ ಬಿಎಸ್ ವೈ ಕ್ಷೇತ್ರದಲ್ಲಿ ತಮಗಮ ಬಿಗಿ ಹಿಡಿತ ಸಡಿಲಗೊಳಿಸಿಲ್ಲ.
ಅದೊಂದೇ ವಿಜಯೇಂದ್ರ ಅವರಿಗೆ ನೆತ್ತಿಕಾಯುವ ಅಭಯ ಹಸ್ತವಾಗಿದೆ.
ರಾಜಾಹುಲಿಯ ಮಾಂತ್ರಿಕತೆ ಅಲ್ಲಿ ಮಾಸಿಲ್ಲ. ಜನ ಅವರ ಬಗ್ಗೆ ಆದರ, ಗೌರವಗಳನ್ನ ಹಸಿಹಸಿಯಾಗಿಯೇ ಇರಿಸಿಕೊಂಡಿದ್ದಾರೆ.
ರಾಜ್ಯದ ರಾಜಕೀಯಕ್ಕೆ ಒಂದು ಯುವ ಪ್ರತಿಭೆಯಾಗಿ ಶಿಕಾರಿಪುರ ವಿಜಯೇಂದ್ರ ಅವರನ್ನ ವಿಧಾನಸೌಧಕ್ಕೆ ಕಳಿಸಬಹುದು.