ಕೆಳದಿಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕೆಳದಿ ಶಿವಪ್ಪನಾಯಕ ಪ್ರತಿಷ್ಠಾನದ ಡಾ. ಕೆಳದಿ ವೆಂಕಟೇಶ್ ಜೋಯಿಸ್ ಆಗ್ರಹಿಸಿದ್ದಾರೆ.
ಕೆಳದಿ ಸಂಸ್ಥಾನಕ್ಕೆ ಸುಮಾರು 263 ವರ್ಷಗಳ ಇತಿಹಾಸ ಇದೆ. ಕ್ರಿ. ಶ 1499ರಿಂದ 1763ರ ವರೆಗೆ ಕೆಳದಿ ಯೂ ಸೇರಿ 13 ಜಿಲ್ಲೆಗಳ ಆಡಳಿತವನ್ನು 17 ರಾಜರು, ಇಬ್ಬರು ರಾಣಿಯರು, ಕೆಳದಿ ಆಳ್ವಿಕೆ ಮಾಡಿದ್ದಾರೆ. ಕರ್ನಾಟಕದ ರಾಜಕೀಯ, ಸಾಂಸ್ಕೃತಿಕ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರವಾಗಿದೆ ಎಂದು ಡಾ.ಕೆಳದಿ ವೆಂಕಟೇಶ್ ಜೊಯಿಸ್ ಅವರು ಹೇಳಿದರು.
ಪ್ರತಿವರ್ಷ ಕೆಳದಿ ಉತ್ಸವ ಆಚರಣೆಯನ್ನು ಸರ್ಕಾರವೇ ಮಾಡಬೇಕು. ಅಮೂಲ್ಯ ಕೆಳದಿಯ ಇತಿಹಾಸವನ್ನು ಎಲ್ಲರಿಗೂ ತಿಳಿಸಬೇಕು. ಹಂಪಿ ಉತ್ಸವದಂತೆ ಶಾಶ್ವತವಾಗಿ ಸರ್ಕಾರ ವಿಶೇಷ ಅನುದಾನ ನೀಡಬೇಕು. ಕುವೆಂಪು ವಿವಿಯಲ್ಲಿ ಕೆಳದಿ ರಾಣಿ ಚೆನ್ನಮ್ಮ ಅವರ ಜಯಂತಿ ಆಚರಿಸಬೇಕು. ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು. ಹಾಗೂ ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಬೇಕು ಎಂದು ಡಾ. ಕೆಳದಿ ವೆಂಕಟೇಶ್ ಜೋಯಿಸ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೆಳದಿ ಇತಿಹಾಸ ಸ್ಮಾರಕವಾದ ರಾಜ್ಯದ ಸಮಾಧಿ ರಾಜರ ಶಿವಮೊಗ್ಗದಲ್ಲಿದೆ. ಅದನ್ನು ಸಂರಕ್ಷಿಸಲೇ ಬೇಕು ಎಂದು ನಿವೃತ್ತ ಪ್ರಾಧ್ಯಾಪಕಿ ಪ್ರೊ. ಕಿರಣ್ ದೇಸಾಯಿ ಮತ್ತು ಎನ್.ಜೆ. ರಾಜಶೇಖರ್ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕತ್ತಿಗೆ ಚನ್ನಪ್ಪ, ಬಳ್ಳೇಕೆರೆ ಸಂತೋಷ್, ಎನ್.ಎಲ್. ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.