Assembly Election ಭದ್ರಾವತಿ ಬಹುತೇಕ ಚುನಾವಣೆಗಳಲ್ಲಿ ಕಾಂಗ್ರೆಸ್ ಹುರಿಯಾಳು ವಿಜೇರಾದ ಕ್ಷೇತ್ರ.
ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಈ ನೇಮ ಮುರಿದಾಗಿದೆ.
ಅಲ್ಲಿ ಸ್ವಲ್ಪ ಅವಧಿ ಇಬ್ರಾಹಿಂ ಸೋದರರ ಮುಷ್ಠಿಯಲ್ಲಿ ಕೊಂಚ
ಕಾಲ ಬಿಗುವಿನ ವಾತಾವರಣವೂ ಇತ್ತು. ಅಲ್ಲಿಂದ ಕಾಂಗ್ರೆಸ್ ನ ಹಿಡಿತ ಸಡಿಲವಾಗಿ ಅಪ್ಪಾಜಿ ಗೌಡರು ಮೊದಲು ಪಕ್ಷೇತರರಾಗಿ ನಂತರ ಜೆಡಿಎಸ್ ಸದಸ್ಯರಾಗಿ ಗೆಲುವು ಪಡೆದರು. ಆಮೇಲೆ ಬಿ.ಕೆ.ಸಂಗಮೇಶ್ ಕೂಡ ಪಕ್ಷೇತರರಾಗಿ ಬಂದರು. ಶಾಸಕರಾದರು. ನಂತರ ಕಾಂಗ್ರೆಸ್ ಸೇರಿ ಮತ್ತೆ ಶಾಸಕರಾದರು.
ವಿಧಾನಸಭಾ ಚುನಾವಣೆ ಎಂದರೆ ಅಪ್ಪಾಜಿ ಮತ್ತು ಸಂಗಮೇಶ್ ಅವರ ಅಭಿಮಾನಿಗಳಲ್ಲಿ ಪರ ವಿರೋಧ ಚಕಮಕಿ ನಡೆಯುತ್ತಲೇ ಇತ್ತು.
ಭದ್ರಾವತಿಯಲ್ಲಿ ಇದು ಜನಜನಿತ.
ಗುಂಪು ಗಲಭೆಗಳು
ತಲೆಯೆತ್ತುತ್ತಿದ್ದವು.
ಶಾಂತಿಪ್ರಿಯ ಶಾಸಕರೆಂದು ಸಂಗಮೇಶ್ ಕರೆಸಿಕೊಂಡರು.
ಹಠಾತ್ ಅಪ್ಪಾಜಿ ಗೌಡರ ನಿಧನದ ನಂತರ ಸಂಗಮೇಶ್ ಗೆ ಸಮರ್ಥ ಎದುರಾಳಿ ಮತ್ತು ಪಕ್ಷ ಬಂದಿಲ್ಲ. ಕಾಂಗ್ರೆಸ್ ಟಿಕೆಟ್ ನಲ್ಲಿ ಗೆದ್ದ ಸಂಗಮೇಶ್ ತಮಗಿರುವ ಅವಕಾಶಗಳನ್ನ ಕೌಶಲದಿಂದ ಬಳಸಿಕೊಂಡರು. ಕೋವಿಡ್ ಸಮಯದಲ್ಲಿ ಶಾಸಕರಾಗಿ ಸಂಗಮೇಶ್ ನಿರ್ವಹಿಸಿದ ಪಾತ್ರ ಜನಮೆಚ್ಚುಗೆ ಗಳಿಸಿತು.
Assembly Election ಸಂಗಮೇಶ್ ತಮ್ಮ ಜನಪ್ರಿಯತೆಯನ್ನ ಕಡಿಮೆಮಾಡಿಕೊಳ್ಳಲೇ ಇಲ್ಲ. ವಿಐಎಸ್ ಎಲ್ ಉಳಿವಿಗೆ ಪರದಾಡುತ್ತಿತ್ತು. ಅದಕ್ಕೆಂದೆ ಗಣಿ ಪ್ರದೇಶವನ್ನ ಮೀಸಲಾಗಿಡಲು ರಾಜ್ಯ ಸರ್ಕಾರಕ್ಕೆ
ದುಂಬಾಲುಬಿದ್ದರು.
ಯಶಸ್ವಿಯಾದರು.
ಈ ಪ್ರಭಾವಳಿ ಸಂಗಮೇಶ್ ಪಡೆದಿದ್ದಾರೆ. ಬಿಜೆಪಿ
ಆಡಳಿತಶಕ್ತಿಯಿಂದ ಗೆಲ್ಲಲು ಪ್ರಯತ್ನಿಸಬೇಕಿದೆ.
ಸದ್ಯ ಸಂಗಮೇಶ್ ಎದುರು ಸಮರ್ಥ ಎದುರಾಳಿ ಅಂತ ಹೇಳಿಕೊಳ್ಳುವಂತೆ ಯಾರೂ ಇಲ್ಲ.
ಸಂಗಮೇಶ್ ಗೆಲ್ಲುವ ಅವಕಾಶಗಳೇ ಜಾಸ್ತಿ ಇದೆ. ರಾಜ್ಯ ಸರ್ಕಾರ
ವಿಐಎಸ್ ಎಲ್ ಮತ್ತು ಕಾಗದ ಕಾರ್ಖಾನೆ ಉಳಿಸಿದಿದ್ದರೆ ಅದರ ಕತೆಯೇ ಬೇರೆ ಇರುತ್ತಿತ್ತು. ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಎಲ್ಲಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೆ ಅಂದರೆ ಭದ್ರಾವತಿ ಬಗ್ಗೆ ಆತ್ಮವಿಶ್ವಾದಿಂದ ಹೇಳಲು ಸಾಧ್ಯವಿಲ್ಲ.
ಭದ್ರಾವತಿ ಪರಿಸ್ಥಿತಿ ಹಾಗಿದೆ.