Klive.news ಮನುಷ್ಯನ ನಾಲಿಗೆ ಬಗ್ಗೆ ದಾಸರು ಹೇಳಿದ್ದು ನೆನಪಿಗೆ ಬರುತ್ತದೆ.
“ಆಚಾರವಿಲ್ಲದ ನಾಲಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಗೆ..”
ವಿಚಾರವಿಲ್ಲದೆ ಪರರ ದೂಷಿಸುವುದಕ್ಕೆ
ಚಾಚಿಕೊಂಡಿರುವಂತ ನಾಲಿಗೆ …
ಇದು ಎಲ್ಲರಿಗೂ ಅಂದರೆ ಪರಸ್ಪರ ದೂಷಿಸುವ ಮನೋಭಾವದವರಿಗೆ ಹೇಳಿದ ವಿಡಂಬನೆಯಾಗಿದೆ.
ಇದನ್ನ ಬರೆಯಲು ಹಿನ್ನೆಲೆ ಪ್ರಸ್ತುತ ಚುನಾವಣಾ ವಾತಾವರಣ.
ಮಾಧ್ಯಮಗಳಲ್ಲಿ ನೀವೆಲ್ಲ ನೋಡಿದಂತೆ ನಮ್ಮ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ಮೋದಿಯವರ ಬಗ್ಗೆ
ವಿಷದ ಹಾವು ಎಂಬ ಅರ್ಥ ಬರುವಂತೆ ಮಾತಾಡಿದ್ದರು ಆ ಸುದ್ದಿ ದೃಶ್ಯಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ಮಾನ್ಯ ಹಿರಿಯ ಖರ್ಗೆ ಅವರು ಮಾತಾಡಿದ ಬಗ್ಗೆ ದೃಶ್ಯದ ಕ್ಲಿಪಿಂಗ್ ರಿಪೀಟ್ ಮಾಡಿ ಖಾಸಗಿ ಟಿವಿಗಳು ತೋರಿಸಿವೆ.
ಅದಕ್ಕೆ ಪ್ರತ್ಯೇಕ ಪತ್ರಿಕಾಗೋಷ್ಠಿಯಲ್ಲಿ
ತಾವು ಆ ರೀತಿ ಮಾತಾಡಿಲ್ಲ. ಮಾಧ್ಯಮಗಳು ತಿರುಚಿವೆ ಎಂಬ ಹೇಳಿಕೆ ನೀಡಿದರು.
Klive.news ವೀಕ್ಷಕರು ತಮ್ಮ ಕಣ್ಣುಕಿವಿಗಳ ಬಗೆಗಿನ ನಂಬಿಕೆ ವಿಚಲಿತಗೊಳ್ಳುವಂತೆ
ಮಾಡಿಬಿಟ್ಟರು.
ಹಿರಿಯ ವ್ಯಕ್ತಿ ನಿಜ.ಆದರೆ ಆಡುಮಾತಿನ ವಾಕ್ಯ ರಚನೆಯಲ್ಲಿ ಬಳಸಿದ ಮತ್ತು ವೀಕ್ಷಕರು ಕೇಳಿದ ಪದಗಳು ಅವೇ ಆಗಿವೆ.
ಇಲ್ಲಿ ಮುಖ್ಯವಾಗಿ ಬಿಜೆಪಿ,ಜೆಡಿಎಸ್ ಮತ್ತು ಕಾಂಗ್ರೆಸ್ ಎಲ್ಲರೂ ಈ ರೀತಿಯಾಗಿ ಒಮ್ಮೊಮ್ಮೆ ನಿಯಂತ್ರಣ ತಪ್ಪಿ ಮಾತನಾಡುವುದು ಸಾಮಾನ್ಯ.
ಮಾನ್ಯ ಖರಘರ ಅವರು ಅದಕ್ಕೆ ತಿದ್ದುಪಡಿ ಹೇಳಿ
ಆರ್ ಎಸ್ಎಸ್ ಮತ್ತು ಬಿಜೆಪಿ ವಿಷಕಾರಿ ಆಲೋಚನೆಯುಳ್ಳ ವ್ಯಕ್ತಿಗಳಿದ್ದಾರೆ. ಮೋದಿಯವರ ಬಗ್ಗೆ ಆ ರೀತಿ ಹೇಳಿಲ್ಲ.
ಯಾರಿಗಾದರೂ ನೋವಾಗಿದ್ದರೆ ಖೇದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.
ಚುನಾವಣೆಯಕಾವಿನಲ್ಲಿ ಭಾವನಾತ್ಯಕವಾಗಿ ಭಾಷಣಮಾಡುವುದು ಸಹಜ. ಆದರೆ
ಸ್ಥಾನಮಾನ ಮತ್ತು ಮಾನವೀಯ ಅಂತಃಕರಣಗಳನ್ನ ಗಾಳಿಗೆ ತೂರಬಾರದು ಎಂಬ ವಿವೇಕ ಎಲ್ಲ ಪಕ್ಷದವರಿಗೂ ಅಗತ್ಯ.