ಈ ಬಾರಿಯ 10 ನೇ ತರಗತಿ ಪಠ್ಯಕ್ರಮವನ್ನು ಶೇ.20 ರಷ್ಟು ಕಡಿಮೆಗೊಳಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಶಿಕ್ಷಣಕ್ಕೆ ಸಂಬಂಧಿಸಿದ ವರ ಅಭಿಪ್ರಾಯ ಪಡೆದು, 10 ನೇ ತರಗತಿಯ ಎಲ್ಲಾ ವಿಷಯಗಳ ಶೇಕಡ 20ರಷ್ಟು ಪಠ್ಯ ಕಡಿತ ಗೊಳಿಸಲು ನಿರ್ಧರಿಸಲಾಗಿದೆ. ಒಂದೆರಡು ದಿನಗಳಲ್ಲಿ ವಿವರಗಳನ್ನು ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ .ನಾಗೇಶ್ ಅವರು ತಿಳಿಸಿದರು.
ಕೊರೋನಾ ದಿಂದಾಗಿ ಶಾಲೆಗಳು ತಡವಾಗಿ ಆರಂಭಗೊಂಡಿದೆ. ಇದನ್ನು ಪರಿಗಣಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಬಾರಿಯ ಶೈಕ್ಷಣಿಕ ವರ್ಷದ ಅವಧಿಯಲ್ಲಿ ಶೇ.100ರಷ್ಟು ಪಠ್ಯ ಕ್ರಮ ಬೋಧನೆ ಇದು ಕಷ್ಟಸಾಧ್ಯ ಇಂದು ಶಿಕ್ಷಕರ ವಲಯದಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ಪ್ರತಿವರ್ಷವೂ 240ಕ್ಕೂ ಹೆಚ್ಚು ಬೋಧನಾ ದಿನಗಳು ಲಭಿಸುತ್ತಿದ್ದವು. ಆದರೆ, ಈ ಬಾರಿ 180 ಬೋಧನಾ ದಿನಗಳು ಮಾತ್ರ ಲಭಿಸಿವೆ. ಇದರಿಂದ ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆ ಪುನರಾವರ್ತಿಸಲು ಸಾಧ್ಯವಾಗುವುದಿಲ್ಲ ಎಂದು ಶಿಕ್ಷಕರು ಅಭಿಪ್ರಾಯಪಟ್ಟಿದ್ದರು.
ಪಠ್ಯ ಕಡಿತಗೊಳಿಸುವ ವಿವರಗಳನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸದ್ಯದಲ್ಲೇ ಪ್ರಕಟಿಸಲಿದೆ.
ಪಠ್ಯ ಕಡಿತಗೊಳಿಸುವ ನಿರ್ಧಾರ ಕೈಗೊಂಡಿರುವುದರಿಂದ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಎಸೆಸೆಲ್ಸಿ ಪರೀಕ್ಷೆಗಳು ನಡೆಯುವ ಸಾಧ್ಯತೆಗಳಿವೆ. ಇದರಿಂದ ಮೊದಲಿನಂತೆಯೇ ಶೈಕ್ಷಣಿಕ ವರ್ಷಗಳು ಆರಂಭವಾಗಲು ಅನುಕೂಲವಾಗುತ್ತದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.