Saturday, December 6, 2025
Saturday, December 6, 2025

ಸಂವಿಧಾನವನ್ನು ಎಲ್ಲರೂ ಗೌರವಿಸೋಣ

Date:

ನಮ್ಮ ನೆಲದ ಕಾನೂನಾದ ಸಂವಿಧಾನವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಹಾಗೂ ಗೌರವಿಸಬೇಕು. ಸಂವಿಧಾನವನ್ನು ಗೌರವಿಸುವುದು ನಮ್ಮೆಲ್ಲರ ಮೂಲಭೂತ ಕರ್ತವ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎ. ಮುಸ್ತಫಾ ಹುಸೇನ್ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ವಕೀಲರ ಭವನದಲ್ಲಿ ಏರ್ಪಡಿಸಲಾಗಿದ್ದ ‘ಸಂವಿಧಾನ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳೆಲ್ಲರೂ ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಹಾಗೂ ಸಂವಿಧಾನ ತಿಳಿದವರು ಇತರರಲ್ಲೂ ಇದರ ಅರಿವು ಮೂಡಿಸಬೇಕು. ಇದು ನಮ್ಮ ನೆಲದ ಮೂಲಭೂತ ಕಾನೂನಾಗಿದ್ದು, ಮುಖ್ಯವಾಗಿ ವಕೀಲರು ಇದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ನ್ಯಾಯಾಂಗಕ್ಕೆ ಸಂವಿಧಾನ ಒಂದು ಮುಖ್ಯ ಅಂಶವಾಗಿದ್ದು ಕಾನೂನು ವ್ಯವಹರಿಸುವ ನಮಗೆ ಇದು ಬಹು ಮಹತ್ವದ್ದಾಗಿದೆ ಎಂದರು.
ನಾವು ಐಚ್ಚಿಕವಾಗಿ ಸಂವಿಧಾನ ಓದಿದಲ್ಲಿ ನಮಗೆ ಸಂವಿಧಾನ ರಚನೆ ಹಿಂದೆ ಇರುವ ಮಹನೀಯರ ಪರಿಶ್ರಮ ಮತ್ತು ಆಶಯಗಳು ಅರ್ಥವಾಗುತ್ತವೆ. ಇದರ ರಚನೆ ಹಿಂದೆ ಬಹಳ ಶ್ರಮ ಇದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಕೂಡ ಡ್ರಾಫ್ಟಿಂಗ್ ಕೆಲಸ ಕಷ್ಟ. ಇದಕ್ಕೆ ಉತ್ತಮ ಕೌಶಲ್ಯದ ಅಗತ್ಯವಿದೆ ಎಂದರು.
ಇಷ್ಟೊಂದು ದೊಡ್ಡ ಸಂವಿಧಾನ ನೀಡಿದ ಮಹನೀಯರು ಸಂವಿಧಾನ ರಚನೆ ಸಲುವಾಗಿ ಬಹು ಚರ್ಚೆಗಳು, ಸಭೆಗಳು, ಅಧ್ಯಯನ ನಡೆಸಿದ್ದಾರೆ. 1946 ರ ಡಿ.9 ರಂದು ಮೊದಲ ಸಂವಿಧಾನ ರಚನೆ ಪರಿಷತ್ ಸಭೆ ನಡೆಯಿತು. ನಂತರ 17 ಉಪ ಸಮಿತಿಗಳ ರಚನೆಯಾಗಿ 117 ಸಭೆಗಳು ನಡೆದು 1949 ರ ನವೆಂಬರ್ 26 ರಂದು ಸಂವಿಧಾನ ಅನುಮೋದನೆಗೊಂಡು 1950 ರ ಜನವರಿ 26 ರಿಂದ ಜಾರಿಗೊಂಡಿತು. ಬಹು ಸಂಸ್ಕøತಿಯ ನಮ್ಮ ದೇಶಕ್ಕೆ ಅನ್ವಯವಾಗುವಂತಹ ಬಹುದೊಡ್ಡ ಸಂವಿಧಾನವನ್ನು ನೀಡಿದ ಮಹನೀಯರನ್ನು ಸ್ಮರಿಸುವ ದಿನ ಇದಾಗಿದೆ. ಸಂವಿಧಾನ ರಚನಾ ಪೂರ್ವದ ಚರ್ಚೆಗಳನ್ನು ವಕೀಲರು ಸೇರಿದಂತೆ ಎಲ್ಲರೂ ತಿಳಿದುಕೊಳ್ಳಬೇಕು. ಸಂವಿಧಾನ ನ್ಯಾಯಾಲಯಕ್ಕೆ ವಿಶೇಷ ಅಧಿಕಾರ ನೀಡಿದ್ದು, ಸಂವಿಧಾನ ಕಾನೂನು ಮತ್ತು ಅದರ ಬೆಳವಣಿಗೆಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಬಹಳಷ್ಟು ಜನರಿಗೆ ಸಂವಿಧಾನದ ಅರಿವು ಇನ್ನೂ ಇಲ್ಲ. ಈ ನಿಟ್ಟಿನಲ್ಲಿ ಸಂವಿಧಾನ ಕುರಿತು ಅರಿವು ಕಾರ್ಯಕ್ರಮಗಳು ಹೆಚ್ಚಾಗಾಗಬೇಕು. ಆಗ ಎಲ್ಲರಿಗೂ ತಮ್ಮ ಹಕ್ಕು, ಕರ್ತವ್ಯಗಳು ಅರ್ಥವಾಗಿ ಜವಾಬ್ದಾರಿ ಹೆಚ್ಚುತ್ತದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ದೇವೇಂದ್ರಪ್ಪ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಲು ಒತ್ತಾಸೆಯಾಗಿ ನಿಂತಿದ್ದು ನಮ್ಮ ಸಂವಿಧಾನ. ವೈವಿಧ್ಯಮಯವಾದ ನಮ್ಮ ದೇಶದಲ್ಲಿ ಯಾವುದೇ ಬೇಧ ಭಾವವಿಲ್ಲದೆ ಎಲ್ಲರನ್ನೂ ಸಮಾನರಾಗಿ ಕಾಣುವ ಮತ್ತು ದೇಶದ ಒಗ್ಗಟ್ಟಿನ ಮೂಲಭೂತ ತತ್ವ ನಮ್ಮ ಸಂವಿಧಾನ. ಇಂತಹ ನಮ್ಮ ಸಂವಿಧಾನವನ್ನು ನಾವೆಲ್ಲರೂ ಗೌರವಿಸಬೇಕು.
ಸಂವಿಧಾನ ರಚನೆ ಒಂದು ಬಹುದೊಡ್ಡ ಕಾರ್ಯವಾಗಿದ್ದು ಶಿವಮೊಗ್ಗದ ಹಿರಿಯರಾದ ಕೃಷ್ಣಮೂರ್ತಿಯವರು ಸಹ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರೆಂಬುದು ನಮಗೆ ಹೆಮ್ಮೆಯ ವಿಷಯವಾಗಿದೆ. ಪ್ರಸ್ತುತ ಎಲ್ಲ ವಕೀಲರು ಸಂವಿಧಾನದ ಆಶಯಗಳನ್ನು ಅರಿತು ಅದೇ ಪಥದಲ್ಲಿ ಸಾಗಬೇಕೆಂದು ಆಶಿಸಿದರು.
ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ ಕೆ.ಎನ್. ಸ್ವಾಗತಿಸಿದರು. ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕಾಂತ್‍ರಾಜ್ ಕೆ.ಆರ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರು, ನ್ಯಾಯವಾದಿಗಳು, ಸಂಘದ ಸದಸ್ಯರು, ಪ್ಯಾನೆಲ್ ವಕೀಲರು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Bangalore Television Centre ಕಲಾತ್ಮಕ ಧಾರಾವಾಹಿ ನಿರ್ಮಾಣ & ಫೋಕ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಲು ಅರ್ಜಿ ಆಹ್ವಾನ

Bangalore Television Centre ಬೆಂಗಳೂರು ದೂರದರ್ಶನ ಕೇಂದ್ರವು ನಿರ್ಮಿಸಲಿರುವ ಕಲಾತ್ಮಕ ಧಾರಾವಾಹಿಯನ್ನು...

ಭಗವದ್ಗೀತೆ ಪಠ್ಯದಲ್ಲಿ ಅಳವಡಿಸಲು ಸಚಿವ ಕುಮಾರಣ್ಣ ಬರೆದ ಪತ್ರಕ್ಕೆ ಅಶೋಕ ಜಿ.ಭಟ್ ಕೃತಜ್ಞತೆ

ಶಿವಮೊಗ್ಗದಲ್ಲಿ ಇತ್ತೀಚೆಗೆ ಭಗವದ್ಗೀತಾ ಅಭಿಯಾನವು ಅತ್ಯಂತ ಯಶಸ್ವಿಯಾಗಿ ನೆರವೇರಿತು.ರಾಜ್ಯಮಟ್ಟದ ಬೃಹತ್ಸಮಾರಂಭದಲ್ಲಿ ವಿವಿಧ...

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...