Saturday, December 6, 2025
Saturday, December 6, 2025

Dr. Rajkumar ಡಾ.ರಾಜ್ ನಾಡಿನ ಸಾಂಸ್ಕೃತಿಕ ರಾಯಭಾರಿ-ಡಾ.ಸಿ.ಆರ್.ಮೋಹನ್

Date:

Dr. Rajkumar ಕನ್ನಡದ ಅಸ್ಮಿತೆ ಮತ್ತು ಆದರ್ಶವಾಗಿದ್ದ ಡಾ|| ರಾಜ್ ಅವರು ಸದಭಿರುಚಿಯ ಸಿನಿಮಾಗಳಲ್ಲಿ ನಟನೆ ಮಾಡಿ ಲಕ್ಷಾಂತರ ಮಂದಿ ಬದುಕಿನಲ್ಲಿ ಸ್ಫೂರ್ತಿ ಕಂಡವರು. ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಿದ್ದ ಇವರು ನಮ್ಮಗೆಲ್ಲಾ ದಾರಿದೀಪ ಎಂದು ಕಳಸ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸಪೆಕ್ಟರ್ ಡಾ.ಸಿ.ಆರ್. ಮೋಹನ್ ಕುಮಾರ್ ಹೇಳಿದರು.

ಪಟ್ಟಣದಲ್ಲಿ ಡಾ|| ರಾಜ್ ಕನ್ನಡ ಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಸಂಯುಕ್ತಾಶ್ರಯದಲ್ಲಿ ವರನಟ ಡಾ. ರಾಜ್‌ಕುಮಾರ್ ಅವರ 94ನೇ ಜನ್ಮದಿನಾಚರಣೆ ಪ್ರಯುಕ್ತ ಸಂಘದ ಕಚೇರಿಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿದರು.
ಕರ್ನಾಟಕ ರತ್ನ ಡಾ|| ರಾಜ್‌ಕುಮಾರ್ ಅವರು ಮೇರು ವ್ಯಕ್ತಿತ್ವದ ನಟ. ಅವರ ವಿನಮ್ರತೆಯ ಗುಣವನ್ನು ನಾವೆಲ್ಲಾ ಮೈಗೂಡಿಸಿಕೊಳ್ಳಬೇಕು. ಕನ್ನಡ ನಾಡು, ನುಡಿ, ಸಂಸೃತಿಯ ಬಗ್ಗೆ ಅಭಿಮಾನವು ಅನುಪಮ.

ಹಾಗೂ ಎಂಥದೇ ಪಾತ್ರವಾದರೂ ಅದಕ್ಕೆ ಜೀವ ತುಂಬುವಂತಹ ಅದ್ಬುತ ಅಭಿನಯ ಅವರಲ್ಲಿ ಅಡಗಿತ್ತು ಎಂದರು.

Dr. Rajkumar ಇದೇ ವೇಳೆ ಗಾಯಕಿ ಲಕ್ಷ್ಮೀನಾಗರಾಜ್ ಅವರಿಂದ ಡಾ. ರಾಜ್‌ಕುಮಾರ್ ರವರ ಚಲನಚಿತ್ರದ ಗೀತೆಗಳನ್ನು ಹಾಡುವ ಮೂಲಕ ಸಭಿಕರನ್ನು ಮನರಂಜಿಸಿ ನಂತರ ಸಿಹಿ ವಿತರಿಸಲಾಯಿತು.

ಡಾ.ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್ ಸಿಬ್ಬಂದಿಗಳಾದ ರಘು ರಾಮ್, ಸತ್ಯನಾರಾಯಣ, ಕರವೇ ಅಧ್ಯಕ್ಷ ಪೂರ್ಣೇಶ್, ಮಾಜಿ* ಅಧ್ಯಕ್ಷ ಶ್ಯಾಮಚಾರ್, ಮುಖಂಡರುಗಳಾದ ಸಂತೋಷ, ಚೌಡಪ್ಪ, ಕಬೀರ್, ಸುದರ್ಶನ್, ಸ್ರೇಯಸ್, ಗಾಯಕಿ ಲಕ್ಷ್ಮೀ, ನಾಗರಾಜ್, ಮಮತ, ಲತಾ, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...