Saturday, September 28, 2024
Saturday, September 28, 2024

Kateel Ashok Pai Memorial College ಕಟೀಲ್ ಅಶೋಕ್ ಪೈ ಕಾಲೇಜಿಗೆ ಭರ್ಜರಿ ಫಲಿತಾಂಶ

Date:


Kateel Ashok Pai Memorial College ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿಗೆ ವಿಶ್ವವಿದ್ಯಾಲಯ ಮಟ್ಟದಲ್ಲಿ 2022ನೇ ಸಾಲಿನ ಮೂರು ರ‍್ಯಾಂಕ್‌ಗಳು ಹಾಗೂ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಒಟ್ಟು ನಾಲ್ಕು ರ‍್ಯಾಂಕ್‌ಗಳು ಲಭಿಸಿವೆ.

2017 ರಲ್ಲಿ ಶಿವಮೊಗ್ಗ ಮಾನಸ ಟ್ರಸ್ಟ್(ರಿ) ಆರಂಭಿಸಿದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿಗೆ ಕುವೆಂಪು ವಿಶ್ವವಿದ್ಯಾಲಯ ಪ್ರಕಟಿಸಿದ 2022ನೇ ಸಾಲಿನ ರ‍್ಯಾಂಕ್ ಪಟ್ಟಿಯಲ್ಲಿ ಒಟ್ಟು ಮೂರು ರ‍್ಯಾಂಕ್‌ಗಳು ಲಭಿಸಿವೆ. ಈ ಕಾಲೇಜಿನ ಬಿ.ಎಸ್.ಡಬ್ಲ್ಯೂ ವಿದ್ಯಾರ್ಥಿನಿ ಕು. ಸಹನಶ್ರೀ ಟಿ., ಆ/o ಶ್ರೀ ತಿಮ್ಮಪ್ಪ ಟಿ, ದ್ವಿತೀಯ ರ‍್ಯಾಂಕ್ ಹಾಗೂ ಬಿ.ಎ ವಿದ್ಯಾರ್ಥಿನಿ ಕು. ರಾಧಿಕಾ ಎಸ್. ಜೋಷಿ ಆ/o ಶ್ರೀ ಸತೀಶ್ ಡಿ, ದ್ವಿತೀಯ ರ‍್ಯಾಂಕ್ ಮತ್ತು ಕು. ತೇಜಸ್ವಿನಿ ಎಂ.ಎಸ್., ಆ/o
ಶ್ರೀ ಶಿವಾನಂದ ಗೌಡ ನಾಲ್ಕನೇ ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.

ಈ ಮೂವರು ವಿದ್ಯಾರ್ಥಿನಿಯರಿಗೆ ಮಾನಸ ಟ್ರಸ್ಟ್ನ ನಿರ್ದೇಶಕಿ ಡಾ. ರಜನಿ ಎ ಪೈರವರು ಅಭಿನಂದಿಸುತ್ತಾ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದಲ್ಲದೆ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯೇ ಈ ಸಂಸ್ಥೆಯ ಗುರಿ ಎಂದು ತಿಳಿಸಿದರು.


Kateel Ashok Pai Memorial College ಕಟೀಲ್ ಅಶೋಕ್ ಪೈ ಸ್ಮಾರಕ ಪೂರಕ ಆರೋಗ್ಯ ವಿಜ್ಞಾನ ಸಂಸ್ಥೆಯ ಎಂ.ಎಸ್ಸಿ. ಕ್ಲಿನಿಕಲ್ ಸೈಕಾಲಜಿಯ ವಿಭಾಗದಲ್ಲಿ ರಾಜ್ಯದ ರಾಜೀವ್‌ಗಾಂಧಿ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿನಿ ಕು. ರಕ್ಷತಾ ಜೆ ರವರು ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿರುತ್ತಾರೆ. ಇದೇ ವಿಭಾಗದ ಕು. ದೀಕ್ಷಾ ಹೆಚ್. ಆರ್, ಕು. ಹೆಬ್ಬಾರ್ ಎನ್ ಕ್ಷಿತಿಜಾ ಮತ್ತು ಕು. ರುತುಜಾ ಎಸ್ ರಾವ್ ರವರು ಕ್ರಮವಾಗಿ ಮೂರು, ಐದು ಹಾಗೂ ಏಳನೇ ರ‍್ಯಾಂಕ್ ಪಡೆದಿರುತ್ತಾರೆ.
ಈ ಕಾಲೇಜು ಪ್ರಾರಂಭವಾದ ಕೇವಲ 06 ವರ್ಷಗಳಲ್ಲಿ ಪ್ರತಿ ವರ್ಷವೂ ರ‍್ಯಾಂಕ್ ಬರುತ್ತಿರುವುದು ಶ್ಲಾಘನೀಯ ವಿಷಯ ಎಂದು ಮಾನಸ ಟ್ರಸ್ಟ್ನ ಡಾ. ವಾಮನ್ ಶಾನ್‌ಭಾಗ್,ಡಾ. ಪ್ರೀತಿ ಶಾನ್‌ಭಾಗ್ ಹಾಗೂ ಶೈಕ್ಷಣ ಕ ಸಲಹೆಗಾರರೂ, ನಿರ್ದೇಶಕರೂ ಆದ ಡಾ. ರಾಜೇಂದ್ರ ಚೆನ್ನಿ ಪ್ರಶಂಸಿಸಿದರು.

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಕುವೆಂಪು ವಿಶ್ವವಿದ್ಯಾಲಯದ ಸಂಯೋಜನೆಯೊಂದಿಗೆ ಬಿಎ, ಬಿಎಸ್ಸಿ, ಬಿಸಿಎ, ಬಿಕಾಂ, ಬಿಎಸ್‌ಡಬ್ಲ್ಯೂ ಹಾಗೂ ಎಂಎಸ್ಸಿ ಸೈಕಾಲಜಿ ಕೋರ್ಸ್ಗಳನ್ನು ನಡೆಸುತ್ತಿದೆ. ಸುಸಜ್ಜಿತ ಕಟ್ಟಡ, ಪರಿಣಿತ ಉಪನ್ಯಾಸಕರ ವೃಂದ, ಉತ್ತಮ ಪ್ರಯೋಗಾಲಯಗಳನ್ನು ಈ ಕಾಲೇಜು ಹೊಂದಿದ್ದು, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯ ತರಬೇತಿ, ಇಂಗ್ಲಿಷ್ ಸಂವಹನ ತರಬೇತಿ, ಕಂಪ್ಯೂಟರ್ ತರಬೇತಿಗಳನ್ನು ನೀಡುತ್ತಿದೆ.

ಪ್ರತಿ ವಿದ್ಯಾರ್ಥಿಯು ಪದವಿಯೊಂದಿಗೆ ವಿವಿಧ ಸರ್ಟಿಫಿಕೇಟ್ ಕೋರ್ಸುಗಳನ್ನು ಮಾಡಿಕೊಂಡು ತನ್ನ ಔದ್ಯೋಗಿಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಈ ಕಾಲೇಜು ಅವಕಾಶ ನೀಡುತ್ತಿದೆ.
ಅತ್ಯುತ್ತಮ ಅಂಕ ಪಡೆದು ವಿಶ್ವವಿದ್ಯಾಲಯ ಮಟ್ಟದಲ್ಲೇ ದ್ವಿತೀಯ ರ‍್ಯಾಂಕ್ ಪಡೆದ ಬಿಎ ವಿದ್ಯಾರ್ಥಿನಿ ಕು. ರಾಧಿಕಾ ಜೋಷಿ, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ತನ್ನ ಗುರಿಯನ್ನು ಈಡೇರಿಸಿಕೊಳ್ಳಲು ಎಲ್ಲ ರೀತಿಯ ಅನುಕೂಲಗಳನ್ನು ಒದಗಿಸಿದ್ದಾಗಿ ಹೇಳುತ್ತಾರೆ. ತನ್ನ ಆಸಕ್ತಿಯ ಸೈಕಾಲಜಿ, ಇಂಗ್ಲಿಷ್ ಸಾಹಿತ್ಯ ವಿಷಯಗಳನ್ನು ಬೋಧಿಸುತ್ತಿದ್ದ ಅನುಭವೀ ಉಪನ್ಯಾಸಕರು ಜ್ಞಾನದ ಧಾರೆಯನ್ನೇ ಎರೆದರು ಹಾಗೂ ಹಲವಾರು ಸೆಮಿನಾರ್‌ಗಳು, ಕಾರ್ಯಾಗಾರಗಳಲ್ಲಿ ಭಾಗವಹಿಸುವಂತೆ ಮಾಡಿ ನನ್ನ ಕೌಶಲ್ಯಗಳನ್ನೂ ನೈಪುಣ್ಯತೆಯನ್ನು ಹೆಚ್ಚು ಮಾಡಿದರು ಎಂದು ಹೇಳಿದರು.
.
ಬಿಎಸ್‌ಡಬ್ಲ್ಯೂ ರ‍್ಯಾಂಕ್ ವಿಜೇತೆ ಕು. ಸಹನಶ್ರೀ ಟಿ ಯವರ ತಂದೆ ಶ್ರೀ ತಿಮ್ಮಪ್ಪರವರು ಗ್ರಾಮೀಣ ಪ್ರದೇಶದಿಂದ ಬಂದ ತನ್ನ ಮಗಳಿಗೆ ವಿಶ್ವವಿದ್ಯಾಲಯದ ಮಟ್ಟದಲ್ಲಿ ರ‍್ಯಾಂಕ್ ಬರಲು ಮುಖ್ಯ ಕಾರಣ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಪ್ರತಿಯೊಬ್ಬ ವಿದ್ಯಾರ್ಥಿಗೆ ಮೌಲ್ಯಯುತ ಶಿಕ್ಷಣ ನೀಡುವುದಲ್ಲದೇ ಅವರ ಭವಿಷ್ಯಕ್ಕೆ ಬೇಕಾದ ಎಲ್ಲ ಸಾಮರ್ಥ್ಯಗಳನ್ನೂ ಬೆಳೆಸಿಕೊಳ್ಳಲು ಈ ಕಾಲೇಜು ಶ್ರಮಿಸುತ್ತಿದೆ ಎಂದರು.

ಎಂ.ಎಸ್ಸಿ ಕ್ಲಿನಿಕಲ್ ಸೈಕಾಲಜಿಯಲ್ಲಿ ರಾಜ್ಯಕ್ಕೇ ಮೊದಲ ರ‍್ಯಾಂಕ್ ಪಡೆದ ಕು. ರಕ್ಷತಾರವರು ಸೈಕಾಲಜಿಯಲ್ಲಿ ಅತ್ಯುತ್ತಮ ತರಗತಿಗಳು ಈ ಕಾಲೇಜಿನಲ್ಲಿ ನಡೆಯುವುದಲ್ಲದೆ, ಮಾನಸ ನರ್ಸಿಂಗ್ ಹೋಂ ಮೂಲಕ ಪ್ರಾಯೋಗಿಕ ನೇರ ತರಬೇತಿಯನ್ನು ನೀಡುತ್ತಿರುವ ಏಕೈಕ ಕಾಲೇಜು ಇದಾಗಿದೆ ಎಂದು ಹೇಳಿದರು.

ಮನೋವಿಜ್ಞಾನವನ್ನು ಅತ್ಯಂತ ಆಳವಾಗಿ ಹಾಗೂ ಆಸಕ್ತಿಯಿಂದ ಕಲಿಯಲು ಇದೇ ಕಾಲೇಜೇ ವಿದ್ಯಾರ್ಥಿಗೆ ಸೂಕ್ತ ಎಂಬುದು ಅವರ ಅಭಿಪ್ರಾಯ. ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಚಾರ್ಯೆ ಡಾ. ಸಂಧ್ಯಾಕಾವೇರಿ, ಉಪನ್ಯಾಸಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿರುತ್ತಾರೆ.

ಮಾನಸ ಸಂಸ್ಥೆಯ ನಿರ್ದೇಶಕಿ ಡಾ. ರಜನಿ ಎ. ಪೈರವರು ಅತ್ಯಂತ ಸಂಭ್ರಮದ ಈ ವರ್ಷದ ಉತ್ತಮ ಫಲಿತಾಂಶಕ್ಕಾಗಿ ಕಾಲೇಜಿನ ಎಲ್ಲಾ ಸಲಹಾಮಂಡಳಿ ಸದಸ್ಯರನ್ನೂ, ಸಿಬ್ಬಂದಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸಿರುತ್ತಾರೆ.

ಇಡೀ ರಾಜ್ಯಮಟ್ಟದಲ್ಲೇ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರು ಮಾಡುತ್ತಿರುವ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಮಲೆನಾಡಿನ ಒಂದು ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿದ್ದು, ರಾಜ್ಯ ಹಾಗೂ ಹೊರರಾಜ್ಯಗಳಿಂದ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಅರಸಿ ಬರುತ್ತಿದ್ದಾರೆ ಎಂದು ಪ್ರಾಚಾರ್ಯೆ ಡಾ. ಸಂಧ್ಯಾಕಾವೇರಿ ಹೇಳಿದರು.

ರಾಜ್ಯದ ಅನೇಕ ವಿಶ್ವವಿದ್ಯಾಲಯಗಳು ಹಾಗೂ ಪ್ರತಿಷ್ಟಿತ ಕಾಲೇಜುಗಳೊಂದಿಗೆ ಸಹಯೋಗದ ಮೂಲಕ ವಿಶೇಷ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...