Saturday, December 6, 2025
Saturday, December 6, 2025

Shivamogga McGann Hospital ಅಪರಿಚಿತ ಶವ ಪತ್ತೆ

Date:

Shivamogga McGann Hospital ಶಿವಮೊಗ್ಗದ ಆಯನೂರಿನ ವೀರಗಾರನಬೈರನಕೊಪ್ಪ ಬಿ.ಹೆಚ್ ರಸ್ತೆ ಪಕ್ಕದಲ್ಲಿ ಗೋಕುಲ್ ಹೋಟೆಲ್ ಬಿಲ್ಡಿಂಗ್ ಪಕ್ಕದ ಸ್ಟೇರ್ ಕೇಸ್ ಕೆಳ ಭಾಗದಲ್ಲಿ ಸುಮಾರು 60-70 ವರ್ಷ ವಯಸ್ಸಿನ ಅನಾಮಧೇಯ ವ್ಯಕ್ತಿ ಯಾವುದೋ ಕಾಯಿಲೆಯಿಂದ ಮೃತ ಪಟ್ಟಿದ್ದು, ಮೃತ ದೇಹವನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.

ಈ ಮೃತ ವ್ಯಕ್ತಿಯ ವಿಳಾಸ ಅಥವಾ ವಾರಸ್ಸುದಾರರ ಯಾರು ತಿಳಿದು ಬಂದಿರುವುದಿಲ್ಲ.
ಮೃತ ವ್ಯಕ್ತಿಯ ಚಹರೆ 5.3 ಅಡಿ. ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗಪ್ಪು ಮೈಬಣ್ಣ ಹೊಂದಿದ್ದು, ತಲೆಯಲ್ಲಿ 2 ಇಂಚು ಉದ್ದದ ಕಪ್ಪು ಮಿಶ್ರಿತ ಬಿಳಿ ಕೂದಲು, ಮುಖದಲ್ಲಿ ಕಪ್ಪು ಮಿಶ್ರಿತ ಬಿಳಿ ಗಡ್ಡ ಮೀಸೆ ಬಿಟ್ಟಿರುತ್ತಾರೆ. ಈತನ ಮೈಮೇಲೆ ಬಿಳಿ ಬಣ್ಣದ ಗೆರೆ ಇರುವ ತುಂಬು ತೋಳಿನ ಶರ್ಟು, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

Shivamogga McGann Hospital ಈ ಮೇಲ್ಕಂಡ ಚಹರೆಯುಳ್ಳ ವ್ಯಕ್ತಿಯ ವಾರಸ್ಸುದಾರರು ಪತ್ತೆಯಾದಲ್ಲಿ ಅಥವಾ ತಮ್ಮ ಠಾಣೆಯಲ್ಲಿ ಮನುಷ್ಯಕಾಣೆ ಪ್ರಕರಣ ದಾಖಲಾಗಿದ್ದಲ್ಲಿ ಕುಂಸಿ ಪೊಲೀಸ್ ಠಾಣೆಗಾಗಲಿ ಅಥವಾ ಶಿವಮೊಗ್ಗ ಜಿಲ್ಲಾ ಪೊಲೀಸ್ ನಿಯಂತ್ರಣ ಕೋಣೆಗೆ ಪಿ.ಎಸ್.ಐ ಕುಂಸಿ ಠಾಣೆ. – 9480803351, ಡಿ ವೈ ಎಸ್ ಪಿ ಶಿವಮೊಗ್ಗ -08182 261412, ಶಿವಮೊಗ್ಗ ಕಂಟ್ರೋಲ್ ರೂಂ.-08182 2614ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...