Ramzan Festival ಚಿಕ್ಕಮಗಳೂರು ನಗರದ ಸಂತೆಮೈದಾನದ ಸಮೀಪವಿರುವ ನ್ಯೂ ಲೇಕ್ ವ್ಯೂ ಕೇಂಬ್ರಿಡ್ಜ್ ಶಾಲೆಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಸುಮಾರು ಒಂದು ಸಾವಿರ ದಿನಸಿ ಕಿಟ್‌ಗಳನ್ನು ಸಮಾಜದ ಮುಖಂಡ ಸಿ.ಎನ್.ಅಕ್ಮಲ್ ಅವರು ಎಲ್ಲಾ ಸಮುದಾಯದ ಕುಟುಂಬಗಳಿಗೆ ಸಂಜೆ ಉಚಿತವಾಗಿ ವಿತರಿಸಿದರು.
ಈ ವೇಳೆ ಮಾತನಾಡಿದ ಸಿ.ಎನ್.ಅಕ್ಮಲ್ ರಂಜಾನ್ ಪ್ರಯುಕ್ತ ಮುಸ್ಲಿಮರು ಪ್ರತಿದಿನ ಉಪವಾಸ ಮಾಡು ತ್ತಾರೆ. ಈ ವೇಳೆ, ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅನ್ನ, ನೀರು ಬಿಟ್ಟಿರುತ್ತಾರೆ. ಈ ಆಚರಣೆಯ ನಂಬಿಕೆಯಂತೆ, ಅಲ್ಲಾನೊಂದಿಗಿನ ತಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು, ಉಪ ವಾಸ ಎಂಬುದು ಆತ್ಮಸ್ಥೈರ್ಯ ಹೆಚ್ಚಿಸಲು ಮತ್ತು ಅದೃಷ್ಟ ಸಂಪಾದನೆ ಮಾಡಲು ಈ ಉಪವಾಸವನ್ನು ಆಚರಿಸುತ್ತಾರೆ ಎಂದರು.
Ramzan Festival ರಂಜಾನ್ ತಿಂಗಳಲ್ಲಿ ಪ್ರತಿಯೊಂದು ದಿನ ಮುಸ್ಲಿಮರು, ಈ ಹಬ್ಬದ ಆಚರಣೆ ಮೂಲಕ ಅಲ್ಲಾನಲ್ಲಿ ನಂಬಿಕೆ ಇಟ್ಟುಕೊಳ್ಳುತ್ತಾರೆ. ಇದಕ್ಕಾಗಿ, ಪ್ರಾರ್ಥನೆ, ಕುರಾನ್ ಪಠಣ ಮತ್ತು ದಾನ-ಧರ್ಮದಲ್ಲಿ ತೊಡಗುವುದು ಹಾಗೂ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ತಮ್ಮ ಒಡನಾಟವನ್ನು ಇನ್ನಷ್ಟು ಗಟ್ಟಿಯಾಗಿಸುತ್ತಾರೆ ಎಂದರು.
ಸೂರ್ಯಾಸ್ತದ ವೇಳೆ, ಉಪವಾಸ ಮುರಿಯುವುದನ್ನು ಇಫ್ತಾರ್ ಎಂದು ಹೇಳಲಾಗುತ್ತದೆ. ಎಲ್ಲರೂ ಒಂದೇ ಕಡೆ ಸೇರುವುದು. ಅದು ಸಾರ್ವಜನಿಕ ಸ್ಥಳವೇ ಆಗಿರಲಿ, ಮನೆಯೇ ಆಗಿರಲಿ. ಒಟ್ಟಾಗಿ ಕುಳಿತು ಆಹಾರವನ್ನು ಸೇವಿಸುತ್ತಾರೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವಿನ ಅವಧಿಗೆ ಉಪವಾಸ ಸಮಯವನ್ನು ನಿರ್ಧರಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ರಿಯಾಜ್, ಅತೀಕ್ ಖೈಸರ್, ಕಾಲುಬಾ ನಜೀರ್, ಬಾಬುಶೇಟ್, ಜಬೀ, ರಿಜ್ವಾನ್‌ಖಾನ್, ಸಾದಿಕ್, ಶಹಬುದ್ದಿನ್, ಚಂದ, ಜಹೋರ್ ಅಜುಂ, ನೂರ್ ಅಹ್ಮದ್ ಹಾಗೂ ಸ್ಥಳೀಯ ನಿವಾಸಿಗಳು ಹಾಜರಿದ್ದರು.