Department Of Agriculture ಚಿಕ್ಕಮಗಳೂರು ಜಿಲ್ಲೆಯ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಗೊಬ್ಬರ ಅವಶ್ಯವಿರುವ ಹಿನ್ನೆಲೆಯಲ್ಲೆ ಮಾರಾಟಗಾರರು ನಿಗಧಿತ ದರಕ್ಕಿಂತ ಹೆಚ್ಚು ಬೆಲೆಗೆ ಮಾರಾಟ ಮಾಡದಂತೆ ಇಲಾಖೆ ಸೂಕ್ತ ಕ್ರಮ ವಹಿಸಬೇಕು ಎಂದು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ತಾಲ್ಲೂಕು ಘಟಕ ಜಿಲ್ಲಾ ಕೃಷಿ ಇಲಾಖೆಯನ್ನು ಒತ್ತಾಯಿಸಿದೆ.
ಈ ಸಂಬಂಧ ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶ್ ಎಸ್.ಚೌವ್ಹಾಣ್ ಅವರಿಗೆ ಸೋಮವಾರ ಮನವಿ ಸಲ್ಲಿಸಿ ಗೊಬ್ಬರಕ್ಕೆ ಸಂಬಂಧಿಸಿದಂತೆ ಮಾರಾಟಗಾರರು ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ಕ್ರಮ ವಹಿಸಬೇಕು ಎಂದು ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಘಟಕದ ತಾಲ್ಲೂಕು ಕಾರ್ಯದರ್ಶಿ ಕೆ.ಇ.ಪೂರ್ಣೇಶ್ ಜಿಲ್ಲೆಯಲ್ಲಿ ಹಿಂದಿನ ವರ್ಷ ದಂತೆ ರೈತರಿಗೆ ತೊಂದರೆಯಾಗದಂತೆ ರಸಗೊಬ್ಬರ ಮಾರಾಟಗಾರರು ಚೀಲದ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು ಎಂದು ಒತ್ತಾಯಿಸಿದರು.
Department Of Agriculture ರೈತರಿಗೆ ರಸಗೊಬ್ಬರವನ್ನು ತೆಗೆದುಕೊಂಡಾಗ ಚೀಲದ ಎಂ.ಆರ್.ಪಿ ಬೆಲೆಯನ್ನು ತೆಗೆದುಕೊಳ್ಳಬೇಕು ಜೊತೆಗೆ ಅಂಗಡಿ ಮಾರಾಟಗಾರರ ಸಮರ್ಪಕ ರಶೀದಿಯನ್ನು ಕಡ್ಡಾಯವಾಗಿ ರೈತರಿಗೆ ನೀಡಬೇಕು. ರಸಗೊಬ್ಬರದ ದರಪಟ್ಟಿಯನ್ನು ಕಡ್ಡಾಯವಾಗಿ ಗ್ರಾಹಕರಿಗೆ ಕಾಣ ಸುವಂತೆ ಅಂಗಡಿಯ ಮುಂಭಾಗದಲ್ಲಿ ನಿಗಧಿತ ದರದಲ್ಲಿ ನಾಮಫಲಕ ಹಾಕಬೇಕು ಎಂದರು.
ರೈತರಿಗೆ ವಂಚಿಸುವ ಸಲುವಾಗಿ ರಸಗೊಬ್ಬರವನ್ನು ಅಂಗಡಿಯೊಳಗೆ ಇಟ್ಟುಕೊಂಡು ಖಾಲಿಯಾಗಿದೆ ಎಂದು ಸಬೂಬು ಹೇಳಬಾರದು. ರಸಗೊಬ್ಬರ ಖರೀದಿಸಿದಾಗ ಮತ್ತೊಂದು ವಸ್ತುವನ್ನು ರೈತರಿಗೆ ಖರೀದಿಸು ವಂತೆ ಒತ್ತಡ ಹಾಕಬಾರದು. ಚೀಲದಲ್ಲಿ ಕಡಿಮೆ ತೂಕ ಹೊಂದಿರುವ ಗೊಬ್ಬರವನ್ನು ಮಾರಾಟ ಮಾಡದಂತೆ ಜೊತೆಗೆ ಸರ್ಕಾರದ ಸೂಕ್ತ ಆದೇಶವನ್ನು ಪಾಲಿಸಬೇಕು ಎಂದು ಒತ್ತಾಯಿಸಿದರು.