Friday, October 4, 2024
Friday, October 4, 2024

ಶಿವಮೊಗ್ಗ ನಗರ ಬಿಜೆಪಿ ಟಿಕೆಟ್ ಯಾರಿಗೆ?

Date:

BJP Karnataka ಹಾಸನ ಜೆಡಿಎಸ್ ಟಿಕೆಟ್ ಪಡೆಯುವವರಾರೆಂದು ರಾಜ್ಯದಲ್ಲೇ ಕುತೂಹಲ ಮನೆಮಾಡಿತ್ತು. ಆದರೆ ಅಂಥದೇ ಕುತೂಹಲ ಶಿವಮೊಗ್ಗ ಕಾಂಗ್ರೆಸ್ ಮತ್ತು ಬಿಜೇಪಿ ಬಗ್ಗೆ ಇದೆ.
ಕಾಂಗ್ರೆಸ್ ಕಾರ್ಪೋರೇಟರ್ ಯೋಗೀಶ್, ಜಿಲ್ಲಾಧ್ಯಕ್ಷ ಸುಂದರೇಶ್, ನಿವೃತ್ತ ಡಿವೈಎಸ್ಪಿ ಪಿ.ಓ.ಶಿವಕುಮಾರ್,ಅಷ್ಟೇಕೆ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್
ಮುಂತಾದವರಿದ್ದರು .
ಆದರೆ ಈಗ ಎಲ್ಲರೂ ಬೆರಗಾಗುವಂತೆ ಕಾಂಗ್ರೆಸ್ ಹೈಕಮಾಂಡ್ ಎಚ್.ಸಿ.ಯೋಗೀಶ್ ಅವರಿಗೆ ಟಿಕೆಟ್ ನೀಡಿದೆ.
ಹಾಗೆಯೇ ಹಾಸನಕ್ಕೂ ಭವಾನಿಯಕ್ಕ ಬದಲಿಗೆ ಸ್ವರೂಪ್ ಗೆ ಟಿಕೆಟ್ ಸಿಕ್ಕಿದೆ.

ಬಿಜೆಪಿಯಲ್ಲಿ ಡಾ.ಸರ್ಜಿ. ದತ್ತಾತ್ರಿ,
ಜ್ಯೋತಿ ಪ್ರಕಾಶ್, ಕಾಂತೇಶ್,ಹರಿಕೃಷ್ಣ, ಇತ್ಯಾದಿ
ಹೆಸರುಗಳಿವೆ. ಈಗ ಯೋಗೀಶ್ ಕಾಂಗ್ರೆಸ್ ಉಮೇದುವಾರ. ಅವರೆದುರು ನಿಲ್ಲುವ ಬಿಜೆಪಿ ವ್ಯಕ್ತಿ ಯಾರಿರಬಹುದು?

BJP Karnataka ಡಾ.ಸರ್ಜಿ. ಮೇಲ್ನೋಟಕ್ಕೆ ಉತ್ತಮ ಆಯ್ಕೆ.ಎರಡು ಮಾತಿಲ್ಲ. ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವ
ಧೀಮಂತ,ಶ್ರೀಮಂತ. ಮಾತು ನಡೆ ನುಡಿಗಳಲ್ಲಿ ಆಕರ್ಷಣೀಯತೆ. ಜನಪರ ಆಲೋಚನೆಗಳ ಮಂಡನೆ ಯಲ್ಲಿ ಬದ್ಧತೆ ಇದೆ. ಅಲ್ಪಕಾಲದಲ್ಲೇ ಪಕ್ಷದ ಬಗ್ಗೆ ಪ್ರಭಾವೀ ಇಮೇಜ್ ಸೃಷ್ಟಿಸಲು ಯತ್ನಿಸಿದ್ದಾರೆ.

ಆದರೆ ಬಿಜೆಪಿ ಒಳ‌ಬೇರುಗಳನ್ನ ನೋಡಿದರೆ.ಆಯ್ಕೆ ಬಗ್ಗೆ ಬೇರೆಯೇ
ಚಿತ್ರ ಲಭಿಸುತ್ತದೆ.
ಜ್ಯೋತಿ‌ಪ್ರಕಾಶ್, ಶ್ರೀಮಂತ.
ವ್ಯವಹಾರಸ್ಥರು. ಬಿಎಸ್ವೈ ಆಪ್ತರ ವಲಯದಲ್ಲಿದ್ದಾರೆ.ಮೇಲಾಗಿ ವೀರಶೈವ ಸಮಾಜದ ಅಧ್ಯಕ್ಷರು.
ಬಿಜೆಪಿಯಲ್ಲಿದ್ದು ವಿವಿಧ ಸಮಿತಿ ಮಂಡಳಿ ಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಸರ್ಜಿ ಅವರ ಸಾಮಾಜಿಕ ಸೇವೆಯೆದುರು ಅವರದು ಕೊಂಚ ಹೊಳಪು ಮಾಸುತ್ತದೆ.

ಕಾಂತೇಶ್ , ತಂದೆಯ ಪ್ರಭಾವಲಯದಲ್ಲೇ ಇದ್ದಾರೆ ಹೊರತು ಸ್ವಯಂ ಪ್ರಭಾವಳಿ ನಿರ್ಮಿಸಿಕೊಂಡಿಲ್ಲ. ಮೇಲ್ಪದರದಲ್ಲೇ ಹೆಸರುಗಳಿಸಿದರೆ ಸಾಕೆಂಬ ಅಲ್ಪತೃಪ್ತಿಯೇ ಅವರ ಮೈನಸ್ ಪಾಯಿಂಟ್. ಧಾರ್ಮಿಕ ವಲಯ, ಮಹಿಳೆಯರ ಕಲ್ಯಾಣ ಇಷ್ಟಾಗಿ ಯುವಜನ ಕ್ಷೇತ್ರದಲ್ಲಿ ಸಾಕಷ್ಟು ಆಳ ಪ್ರಭಾವವಿಲ್ಲದಾಗಿದೆ. ಅವರಿಗೆ ಶಾಸಕ ತಂದೆಯವರ ಅನುಭವಗಳೇ ಸಾಕಿತ್ತು ಅವುಗಳನ್ನ ಬಂಡವಾಳ ಮಾಡಿಕೊಂಡು ಈ ಹೊತ್ತಿಗೆ ಪ್ರಭಾವಿ
ನಾಯಕತ್ವ ರೂಪಿಸಿ ಕೊಳ್ಳಬಹುದಾಗಿತ್ತು. ಆದರೂ ಈಗ ಶೆಟ್ಟರ್ ಪ್ರಕರಣ ಹೈಕಮಾಂಡ್ ಗೆ ಎಚ್ಚರಿಕೆ ನೀಡಿರಬಹುದು. ಕಾಂತೇಶ್ ಗೆ ತೆರೆದ ಅವಕಾಶವಿದೆ

ಹರಿಕೃಷ್ಣ ಅವರು ತೀರಾ ಇತ್ತೀಚೆಗೆ ಶಿವಮೊಗ್ಗ ಜನಮಾನಸಕ್ಕೆ ಪ್ರವೇಶಪಡೆದ ರಾಜಕೀಯ ಪ್ರತಿಭೆ.
ಆದರೆ ಪಕ್ವತೆಯ ಕೊರತೆಯಿಂದ ಅವರು ಪೂರ್ಣಪ್ರಮಾಣದ ರಾಜಕೀಯ ತರಬೇತಿಯನ್ನ ತಂದೆಯವರಿಂದ ಪಡೆದರೆ ಕಾಲಮಿಂಚಿಲ್ಲ. ಯುವಜನರಿಗೆ ಅವಕಾಶ ನೀಡುತ್ತಿರುವ ಬಿಜೆಪಿ ಹೈಕಮಾಂಡ್ ಗಮನ ಸೆಳೆಯಬೇಕಿದೆ. ಈಗಾಗಲೇ ದೆಹಲಿಯಲ್ಲಿ ದಾಳ ಉರುಳಿಸಿರಲೂ ಸಾಕು. ಅದೃಷ್ಟದ ಹುಡುಗ ಆಗಲಿಕ್ಕೂ ಸಾಕು.

ದತ್ತಾತ್ರಿ, ಈ ಎಲ್ಲರಿಗಿಂತ ವಿಭಿನ್ನ
ವ್ಯಕ್ತಿ. ಆರ್ ಎಸ್ಎಸ್ ನ ತಳಮಟ್ಟದಿಂದ ಬೆಳೆದು ಜಿಲ್ಲಾ ಬಿಜೆಪಿಯಲ್ಲಿ ಎಲ್ಲರ ಗಮನ ಸೆಳೆದು ಆಪ್ತತೆ ಬೆಳೆಸಿಕೊಂಡಿರುವಾತ. ಬಿಜೆಪಿಯ ವಿವಿಧ ಸ್ತರಗಳಲ್ಲಿ ಜಿಲ್ಲಾ ಮಟ್ಟ ಮತ್ತು ರಾಜ್ಯಮಟ್ಟದಲ್ಲಿ ಜೀವ ತೇಯ್ದ ಮನುಷ್ಯ. ಜಿಲ್ಲೆಯ ಕೆಲವು
ಕ್ಷೇತ್ರಗಳಲ್ಲಿ ಎಮ್ಮೆಲ್ಯೆಗಳ ಗೆಲುವಿಗೆ ಶ್ರಮಿಸಿದ್ದಾರೆ. ರಾಘವೇಂದ್ರ ಅವರ ಸಂಸತ್ ಕ್ಷೇತ್ರ ಚುನಾವಣೆಯಲ್ಲಿ ಶ್ರಮಿಸಿದ್ದಾರೆ.
ಸಾಮಾಜಿಕವಾಗಿ ಯಾರೇ ಕಷ್ಟದಲ್ಲಿದ್ದರೂ ನೆರವು,ಮಾಹಿತಿ ನೀಡಿ ಸೂಕ್ತ ಸ್ಪಂದಿಸುವ ವ್ಯಕ್ತಿ.ಅದೇ ಅವರಿಗೆ ಈಗ ಟಿಕೆಟ್ ಸಿಗುವಂತೆ
ಮಾಡಬಹುದಾದ ಚಿಂತಾಮಣಿ.
ಕೆಲವೊಮ್ಮೆ ಬಿಜೆಪಿ ಹೈಕಮಾಂಡ್ ಹೀಗೆ ತಳಮಟ್ಟದ ಕಾರ್ಯಕರ್ತರನ್ನ
ಗುರುತಿಸಿ ಅಚ್ಚರಿಮೂಡಿಸುತ್ತದೆ.
ಹಾಗೂ ಆಗಬಹುದು. ಕಾಂಗ್ರೆಸ್
ಯೋಗೀಶ್ ಗೆ ನೀಡಿದೆ. ಅದೇ ಆಸುಪಾಸಿನ ಅವರಿಗಿಂತ ಸಾಮಾಜಿಕ,ರಾಜಕೀಯ ಅನುಭವ ದತ್ತಾತ್ರಿಯವರಿಗಿದೆ. ಈ ತೂಕದಲ್ಲಿ ಬಿಜೆಪಿ ದತ್ತಾತ್ರಿ ಯವರ ಕಡೆಗೇ
ತಕ್ಕಡಿ ವಾಲಬಹುದು ನೋಡೋಣ.

ಇನ್ನು ಮತ್ತೋರ್ವ ಹಿರಿಯರಿದ್ದಾರೆ ಅವರೇ ಚನ್ನಬಸಪ್ಪ.ಚನ್ನಿ ಎಂದು ಆಪ್ತವಲಯದಲ್ಲಿ ಪ್ರಸಿದ್ದರು. ಮಾತುಗಾರಿಕೆ ಇದೆ. ಜನಪ್ರಿಯತೆ ಸಂಪಾದಿಸಿದ್ದಾರೆ. ಆದರೆ ದೆಹಲಿಗೆ ಅವರು ಹೇಗೆ ತಲುಪಿದ್ದಾರೋ ಗೊತ್ತಿಲ್ಲ. ಇದೂ ಒಂದು ದಾಳವೆ.
ಎಸೆದು ನೋಡಬೇಕು. ಬಿಜೆಪಿ ವಲಯದಲ್ಲಿ ಚೆನ್ನಿ ಓರ್ವ Good Coordinator. ಇದೇ ಅವರ ಮೇಜರ್ ಪ್ಲಸ್ ಪಾಯಿಂಟ್. ಅ‌ನುಭವಿ ಲೋಕಲ್ ರಾಜಕಾರಣಿ.
ಇವರಿಗೂ ಹೈಕಮಾಂಡ್ ಮಣೆ ಹಾಕಬಹುದು.

ಜೆಡಿಎಸ್ ನಲ್ಲಿ
ಶ್ರೀಕಾಂತ್ ಗೆ ಒತ್ತಡ ತರಬಹದು. ಅವರೇ ಈಗಲೂ ಸೂಕ್ತ ವ್ಯಕ್ತಿ. ದುರಂತವೆಂದರೆ ಜೆಡಿಎಸ್ ಅಭ್ಯರ್ಥಿ ಬಗ್ಗೆ ಹಾಸನದ “ನರಕೇಂದ್ರ” ಗಂಭೀರವಾಗಿ ಆಲೋಚಿಸಿಲ್ಲ.
ಹೈಕಮಾಂಡ್ ಏನು ಮಾಡುತ್ತದೆ
ಗೊತ್ತಿಲ್ಲ. ಮೊದಲ ಆಯ್ಕೆ ಮತ್ತು.ಕೊನೆಯ ಆಯ್ಕೆಯೂ ಶ್ರೀಕಾಂತ್.ಅವರಿಗೆ ಅದೃಷ್ಟ ಒಲಿಯಬೇಕಷ್ಟೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Jawahar Navodaya Vidyalaya ಗಾಜನೂರಿನ ನವೋದಯ ಶಾಲಾ ಪ್ರವೇಶಾತಿ 2025-26 ಪರೀಕ್ಷೆಗೆ ಆನ್ ಲೈನ್ ಅರ್ಜಿ ಆಹ್ವಾನ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯವು 2025-26ನೇ ಸಾಲಿಗೆ 9...

Department of Parliamentary Affairs and Legislation ಅಕ್ಟೋಬರ್ 5 ರಂದು ನಡೆಯುವ “ಯುವ ಸಂಸತ್” ಸ್ಥಳ‌ ಬದಲಾವಣೆ ಗಮನಿಸಿ

Department of Parliamentary Affairs and Legislation ಸಂಸದೀಯ ಮತ್ತು ವ್ಯವಹಾರಗಳು...

MESCOM ಅ.4 ರಿಂದ7 ವರೆಗೆ ಮೆಸ್ಕಾಂ ಆನ್ ಲೈನ್ ಸೇವೆ ತಾತ್ಕಾಲಿಕ ಅಲಭ್ಯ

MESCOM ಅ.04ರಿಂದ 07 ರ ವರೆಗೆ ಮೆಸ್ಕಾಂ ಮಾಹಿತಿ ತಂತ್ರಜ್ಞಾನ...

Shivamogga Dasara ಶಿವಮೊಗ್ಗ ಚಲನಚಿತ್ರ ದಸರಾ ಚಾಲನೆಗೆ ಹಿರಿಯ ನಟಿ ಉಮಾಶ್ರೀ ಆಗಮನ

Shivamogga Dasara ಶಿವಮೊಗ್ಗ ಮಹಾ ನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿರುವ...