Bjp Karnataka ಉತ್ತರ ಕರ್ನಾಟಕ ಭಾಗದ ಪ್ರಭಾವಿ ನಾಯಕ ಶೆಟ್ಟರ್ ಈಗ ಬಿಜೆಪಿಯಲ್ಲಿ ಉಳಿದಿಲ್ಲ. ರಾಜಿನಾಮೆ ನೀಡಿ ಆಗಿದೆ.
ಕೇಂದ್ರದಿಂದ ಹೈಕಮಾಂಡ್ ಪರವಾಗಿ ಬಂದ ಧರ್ಮೇಂದ್ರ ಪ್ರಧಾನ್
ಅವರ ರಾಯಭಾರ ಫಲಿಸಲಿಲ್ಲ. ಸಚಿವ ಪ್ರಹ್ಲಾದ್ ಜೋಷಿ ಕೂಡ ಇದ್ದರು.
ಸ್ವತಃ ಶೆಟ್ಟರ್ ನಿವಾಸಕ್ಕೇ ಬಂದು ಸಮಾಲೋಚನೆ ನಡೆಸಿದರು. ಆದರೆ ಎಲ್ಲವೂ ಹೊಳೆ ನೀರಿನಲ್ಲಿ ಹುಣಿಸೇ ಹಣ್ಣು ಕಿವುಚಿದಂತಾಯಿತು.
ಈ ಬಗ್ಗೆ ಸ್ಪಷ್ಟವಾಗಿ ಶೆಟ್ಟರ್ ನಿವಾಸದಲ್ಲಿ ಏನೇನು ಮಾತುಕತೆಯಾಯಿತು? ಎನ್ನುವುದು ತಡರಾತ್ರಿ ಸ್ಪಷ್ಟತೆ ಇರಲಿಲ್ಲ. ಈಗಷ್ಟೇ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಅವರಿಂದ ವಿಷಯ ಬಹಿರಂಗವಾಗಿದೆ.
ಆ ಅಂಶಗಳಾವುವು ಎನ್ನುವುದನ್ನ ಪರಿಶೀಲಿಸೋಣ.
Bjp Karnataka ನಿವೃತ್ತಿ ಆಗು ಅಂತ ಮುಂಚಿತವಾಗಿಯೇ ಹೇಳಿದ್ದ ಶೆಟ್ಟರ್ ಮಾತಿಗೆ ಬಿಎಸ್ ವೈ
ಪ್ರತಿಕ್ರಿಯಿಸಿದರು.
ನಿವೃತಗತಿಯಾಗಿ ಎಂಬ ಪ್ರಸ್ತಾಪ ಶೆಟ್ಟರ್ ಅವರಿಗೆ ಹೇಳುವ ಇರಾದೆ ಹೈಕಮಾಂಡ್ ಗೆ ಇರಲಿಲ್ಲ.
ಶೆಟ್ಟರ್ ಅವರಿಗೆ ಟಿಕೆಟ್ ನಿರಾಕರಣೆ ವಿಷಯ ತಿಳಿಸಲಾಯಿತು. ಅದಕ್ಕೆ ಪ್ರತಿಯಾಗಿ ಕೇಂದ್ರ ಸಚಿವ ಸ್ಥಾನ ಅಥವಾ ಉನ್ನತ ಹುದ್ದೆ ನೀಡುವ ಪ್ರಸ್ತಾಪ ತಿಳಿಸಲಾಗಿದೆ ಎಂದು ಬಿಎಸ್ ವೈ ಮಾಧ್ಯಮದವರಿಗೆ ತಿಳಿಸಿದರು.
ಪಕ್ಷ ಎಲ್ಲ ಸ್ಥಾನಮಾನಗಳನ್ನ ತಮಗೆ,ಈಶ್ವರಪ್ಪನವರಿಗೆ , ಸವದಿ ಅವರಿಗೆ
ನೀಡಿದೆ. ತಾವು ಮುಖ್ಯಮಂತ್ರಿ ಸ್ಥಾನಕ್ಕೆ ಸ್ವಪ್ರೇರಣೆಯಿಂದಲೇ
ರಾಜಿನಾಮೆ ನೀಡಿದೆ.
ಪಕ್ಷದಲ್ಲಿ ಹೊಸ ಮುಖ ,ಹೊಸ ಬೆಳವಣಿಗೆಗಳಿಗೆ ಅವಕಾಶ ಸಿಗಲಿಕ್ಕೆ ಅನುವುಮಾಡಿಕೊಟ್ಟೆವು. ಶೆಟ್ಟರ್ ಅವರು ಸ್ಪಂದಿಸಬಹುದಾಗಿತ್ತು.ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ. ತಿಳಿಸಿದರು.