Tourism Shivamogga ಪ್ರವಾಸ ಕೈಗೊಳ್ಳುವುದರಿಂದ ರಾಜ್ಯಗಳ ವೈವಿಧ್ಯಮಯ ಸಂಸ್ಕೃತಿಯ ಪರಿಚಯ ಹಾಗೂ ತಿಳವಳಿಕೆ ಮೂಡುತ್ತದೆ. ವಿವಿಧ ರಾಜ್ಯಗಳ ಜನರ ಜೀವನಶೈಲಿ ತಿಳಿಯುತ್ತದೆ ಎಂದು ಶಿವಮೊಗ್ಗ ಬೈಕ್ ಕ್ಲಬ್ ಅಧ್ಯಕ್ಷ ಸಚ್ಚಿದಾನಂದ ಹೇಳಿದರು.
ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯ ತರುಣೋದಯ ಘಟಕದ ವತಿಯಿಂದ “ನೇಪಾಳ ದಿಂದ ಶಿವಮೊಗ್ಗದ ಗೋಪಾಳ” ದ ವರೆಗೆ ಆಯೋಜಿಸಿರುವ ಬೈಕ್ ರ‍್ಯಾಲಿ ನಡೆಸುತ್ತಿರುವ ಸಾಹಸಿಗರಿಗೆ ಬೀಳ್ಕೋಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈಗಾಗಲೇ ಬೈಕ್ ಮೂಲಕ ಶಿವಮೊಗ್ಗದಿಂದ ಜಮ್ಮು ಕಾಶ್ಮೀರ, ಕನ್ಯಾಕುಮಾರಿ, ಅಸ್ಸಾಂನಿಂದ ಗುಜರಾತ್ ಹೀಗೆ ದೇಶಾದ್ಯಂತ ಸಂಚರಿಸಿದ್ದೇವೆ.
ಇದೀಗ ನೇಪಾಳದಿಂದ ಶಿವಮೊಗ್ಗದವರೆಗೂ ಬೈಕ್ ರ‍್ಯಾಲಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
Tourism Shivamogga ಪ್ರಥಮವಾಗಿ ಅಂತರರಾಷ್ಟ್ರೀಯ ಬೈಕ್ ಸವಾರಿಯ ಮುಂದಾಳತ್ವ ವಹಿಸಿರುವ ಅ.ನಾ.ವಿಜಯೇಂದ್ರ ಮಾತನಾಡಿ, ಅಂತರಾಷ್ಟ್ರೀಯ ರೋಟರಿ ಕ್ಲಬ್, ವಾಣಿಜ್ಯ ಸಂಘ, ಯೂತ್ ಹಾಸ್ಟೆಲ್ಸ್ ಸಹಕಾರ ನೀಡುತ್ತಿದೆ.
ಪ್ರವಾಸೋದ್ಯಮ ಉನ್ನತೀಕರಣಕ್ಕಾಗಿ ಶಿವಮೊಗ್ಗಕ್ಕೆ ಬನ್ನಿ, ಸೇಫ್ ಡ್ರೈವಿಂಗ್, ಮಹಿಳಾ ಸಬಲೀಕರಣ ವಿಚಾರದ ಜಾಗೃತಿ ರ‍್ಯಾಲಿಯಲ್ಲಿ ಮಾಡಲಾಗುತ್ತದೆ ಎಂದು ಹೇಳಿದರು.
ಯೂತ್ ಹಾಸ್ಟೆಲ್ಸ್ ಚರ‍್ಮನ್ ಎಸ್.ಎಸ್.ವಾಗೇಶ್ ಮಾತನಾಡಿ, ಎಲ್ಲ ಹನ್ನೊಂದು ಸವಾರರು ನಮ್ಮ ತರುಣೋದಯ ಘಟಕದ ಅಜೀವ ಸದಸ್ಯರು. ನಮಗೆ ಹೆಮ್ಮೆ ತರುವ ವಿಚಾರ ಎಲ್ಲರ ಪ್ರಯಾಣ ಸುಖಕರವಾಗಿರಲಿ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸದಸ್ಯರು ಎನ್.ಗೋಪಿನಾಥ್ ಮಾತನಾಡಿ, ಉದ್ದಿಮೆ ದಾರರಿಗೆ ಧೈರ್ಯ ಅತೀ ಮುಖ್ಯ. ಈ ರೀತಿಯ ಸಾಹಸ ಮಾಡುವ ಪ್ರವೃತಿಯವರು ಎಲ್ಲಾ ಸಂದರ್ಭದಲ್ಲಿಯೂ ಎದೆಗುಂದದೆ ಮುನ್ನಡೆಯುತ್ತಾರೆ.
ನಮ್ಮ ವಾಣಿಜ್ಯ ಸಂಘದ 60ನೇ ವರ್ಷದ ಸಂಭ್ರಮ ಆಚರಣೆಯ ಪ್ರಥಮ ಕಾರ್ಯಕ್ರಮವಾಗಿ ಅಂತರರಾಷ್ಟ್ರೀಯ ಸಾಹಸ ಕಾರ್ಯಕ್ರಮಕ್ಕೆ ಉತ್ತೇಜನ ನೀಡುವ ಮೂಲಕ, ಉದ್ದಿಮೆದಾರರು ಸಾಹಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರ ನೀಡುವುದಾಗಿ ತಿಳಿಸಿದರು.
ಪ್ರಮುಖರಾದ ನಾಗರಾಜ್, ಜಿ.ವಿಜಯಕುಮಾರ್, ರಮೇಶ್ ಬಾಬು, ಶ್ರೀಕಾಂತ್, ಗಿಡ್ಡಪ್ಪ, ಮಂಜುನಾಥ್, ಗಿರೀಶ್ ಕಾಮತ್, ವಿಜಯೇಂದ್ರ, ರವೀಂದ್ರ, ವಿನಾಯಕ್ ಬಾಯರಿ, ಮಮತಾ, ಭಾರತಿ, ಪ್ರಕೃತಿ, ನಾಗರಾಜ್ ಮುಂತಾದವರಿದ್ದರು.