MESCOM ಚಿಕ್ಕಮಗಳೂರು ತಾಲ್ಲೂಕಿನ ಬಸರವಳ್ಳಿ ಹಾಗೂ ಕೆಳಗಣೆ ಗ್ರಾಮಗಳಿಗೆ ಕೃಷಿ ಚಟುವಟಿಕೆ ಹಾಗೂ ಇನ್ನಿತರೆ ಕೆಲಸಗಳಿಗೆ ಸ್ಥಳೀಯ ಮೆಸ್ಕಾಂ ಅಧಿಕಾರಿಗಳು ಸೂಕ್ತ ವಿದ್ಯುತ್ ವ್ಯವಸ್ಥೆ ಕಲ್ಪಿಸುತ್ತಿಲ್ಲ ಎಂದು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ತಾಲ್ಲೂಕು ಘಟಕ ನಗರದ ಮೆಸ್ಕಾಂ ಕಚೇರಿಗೆ ಮನವಿ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದೆ.
ಈ ಸಂಬಂಧ ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಜಿ. ಮಾರುತಿ ಅವರಿಗೆ ಮನವಿ ಸಲ್ಲಿಸಿದ ತಾಲ್ಲೂಕು ಘಟಕದ ಕಾರ್ಯದರ್ಶಿ ಕೆ.ಇ.ಪೂಣೇಶ್ ಸ್ಥಳೀಯ ಕೆಇಬಿ ಅಧಿಕಾರಿಗಳು ಇವೆರಡು ಗ್ರಾಮಗಳಲ್ಲಿ ವಿದ್ಯುತ್ ಸಮರ್ಪಕವಾಗಿ ವ್ಯವಸ್ಥೆ ಕಲ್ಪಿಸದೇ ಅಕ್ರಮವೆಸಗುತ್ತಿದೆ ಎಂದು ದೂರಿದರು.
MESCOM ಬಸರವಳ್ಳಿ ಗ್ರಾ.ಪಂ. ಸಮೀಪ ಟಿಸಿ ಇದೆ. ಇದರಲ್ಲಿ 08 ಹೆಚ್.ಪಿ.ಯಿಂದ ಸುಮಾರು 30 ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಹೊಸ ಕಲೆಕ್ಷನ್ 03 ಹೆಚ್.ಪಿ. ಕೇಳಿದರೆ ಓವರ್‌ಲೋಡ್ ಎಂದು ಹೇಳಿ ಆ ಟಿಸಿಗೆ 04 ಹೆಚ್‌ಪಿ ಹೆಚ್ಚಾಗಿದೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದರು.
ಮೆಸ್ಕಾಂ ಅಧಿಕಾರಿಗಳು ಈ ಭಾಗದಲ್ಲಿ ಕಂಬಗಳಿಲ್ಲದೇ ಕೇಬಲ್‌ಗಳ ಮೂಲಕ ಸಂಪರ್ಕವನ್ನು ನೀಡಿರುತ್ತಾರೆ. ಬೇರೆ ಕಡೆಗಳಲ್ಲಿ 25 ಟಿಸಿಯಲ್ಲಿ ಸುಮಾರು 05 ರಿಂದ 10 ಪಂಪ್‌ಸೆಟ್ ಮೂಲಕ 50 ಮನೆಗೆ ಸಂಪರ್ಕ ಕಲ್ಪಿಸಲಾಗಿದೆ ಎಂದರು.
ಅದೇ ರೀತಿ ಕೆಳಗಣೆ ಬಾರಮನೆಯಲ್ಲಿ 25 ಕೆವಿ ಟಿಸಿಯಲ್ಲಿ 10 ರಿಂದ 15 ಬೋರ್‌ವೆಲ್ ಮತ್ತು 40 ಮನೆಗಳಿಗೆ ಸಂಪರ್ಕ ಕಲ್ಪಿಸಿರುವ ಪರಿಣಾಮ ತೋಟದ ಒಳಗಿನ ಲೈನ್‌ನಲ್ಲಿ ಕೆಲಸಗಾರರಿಗೆ, ರೈತರಿಗೆ ಸಣ್ಣಪುಟ್ಟ ಅನಾಹುತಗಳಾಗಿದ್ದು ಲೈನ್ ರಸ್ತೆ ಪಕ್ಕದಲ್ಲಿ ಅಳವಡಿಸಿ ಹೆಚ್ಚುವರಿ ಟಿಸಿ ತುರ್ತಾಗಿ ಹಾಕಿಕೊಡಬೇಕು. ಮುಂದಿನ ದಿನಗಳಲ್ಲಿ ಯಾವುದೇ ಅನಾಹುತಗಳಾಗದಂತೆ ತಪ್ಪಿಸಬೇಕು ಎಂದು ಒತ್ತಾಯಿಸಿದರು.