Lakshman Thukaram Gole ಬೆಂಗಳೂರಿನ ಸೃಷ್ಟಿ ಪಬ್ಲಿಕೇಷನ್ಸ್ ಹಾಗೂ ಬಹುಮುಖಿ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಕಮಲಾ ನೆಹರೂ ಕಾಲೇಜಿನ ಪ್ರಾಚಾರ್ಯ ಡಾ. ಎಚ್. ಎಸ್. ನಾಗಭೂಷಣರವರು ಅನುವಾದಿಸಿರುವ (ಮೂಲಃ ಬ್ಯಾಪಾರಿ ಮನೋರಂಜನ್) ಚಾಂಡಾಳನೊಬ್ಬನ ಆತ್ಮ ವಿಮರ್ಶೆ ಕೃತಿಯ ಲೋಕಾರ್ಪಣೆ ನಡೆಯಲಿದೆ.
ಏ.10ರಂದು ಕಮಲಾ ನೆಹರೂ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸಂಜೆ 06:00ಕ್ಕೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮುಂಬೈನ ಗಾಂಧಿವಾದಿ ಲಕ್ಮಣ ತುಕಾರಾಮ ಗೋಲೆ ಕೃತಿಯನ್ನು ಬಿಡುಗಡೆ ಮಾಡಲಿದ್ದು, ಪುಸ್ತಕವನ್ನು ಕುರಿತು ಹಿರಿಯ ವಿಮರ್ಶಕ ಡಾ. ರಾಜಪ್ಪ ದಳವಾಯಿ ಮಾತನಾಡಲಿದ್ದಾರೆ.
Lakshman Thukaram Gole ಮುಖ್ಯ ಅತಿಥಿಗಳಾಗಿ ಹಿರಿಯ ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ. ಎಸ್. ನಾರಾಯಣರಾವ್ ವಹಿಸಲಿದ್ದಾರೆ.
ಲಕ್ಷ್ಮಣ್ ತುಕಾರಾಂ ಗೋಲೆ
ನಾಡಿನ ಪ್ರಾಮಾಣ ಕ ಹಾಗೂ ಪ್ರಮುಖ ಗಾಂಧಿ ವಾದಿಯಾಗಿರುವ ಲಕ್ಷ್ಮಣ್ ತುಕಾರಾಂ ಗೋಲೆ ಯವರ ಪೂರ್ವಾರ್ಧ ಜೀವನ ಅಷ್ಟೇ ಭೀಕರವಾದದ್ದು. ಕಳ್ಳನಾಗಿ, ದರೋಡೆಕಾರನಾಗಿ ಬದುಕು ನಡೆಸುತ್ತಿದ್ದ ಗೋಲೆಯವರು 18 ವರ್ಷಗಳಿಗೂ ಹೆಚ್ಚು ಕಾಲ ಜೈಲುವಾಸಿಯಾಗಿದ್ದವರು.
ಗಾಂಧೀಜಿಯವರ ಆತ್ಮಕಥೆ ಓದಿದ ನಂತರ ಸಂಪೂರ್ಣ ಬದಲಾಗಿ ತಮ್ಮ ಎಲ್ಲಾ ತಪ್ಪುಗಳನ್ನು ಒಪ್ಪಿಕೊಂಡ ಕಾರಣದಿಂದ ಜೈಲಿನಿಂದ ಬಿಡುಗಡೆಯಾಗಿ ಪ್ರಸ್ತುತ ಮುಂಬೈನ ಸರ್ವೋದಯ ಮಂಡಳಿಯಲ್ಲಿ ಪೂರ್ಣಕಾಲಿಕ ಕಾರ್ಯಕರ್ತರಾಗಿ ಗಾಂಧಿ ವಿಚಾರಧಾರೆಯನ್ನು ನಾಡಿನಾದ್ಯಂತ ಉಪನ್ಯಾಸ- ಸಂವಾದದ ಮೂಲಕ ಪಸರಿಸುತ್ತಿದ್ದಾರೆ.
2022ರಲ್ಲಿ ಜಿಂದಗಿ ಲೈವ್ ನ್ಯಾಷನಲ್ ಅವಾರ್ಡ್ ಗೆ ಭಾಜನರಾಗಿರುವ ಇವರ ಜೀವನವನ್ನು ಆಧರಿಸಿದ ಹಿಂದಿ ಚಲನಚಿತ್ರ ಲಕ್ಷ್ಮಣ್ ಗೋಲೆ 2015ರಲ್ಲಿ ಬಿಡುಗಡೆಯಾಗಿದೆ.
ಡಾ. ರಾಜಪ್ಪ ದಳವಾಯಿ
ಬೆಂಗಳೂರು ವಿವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ನಾಡಿನ ಹೆಮ್ಮೆಯ ಕವಿಗಳು, ನಾಟಕಗಾರರು ಹಾಗೂ ವಿಮರ್ಶಕರು. ಚಲನಚಿತ್ರ ನಟರಾಗಿ, ಕಲಾ ನಿರ್ದೇಶಕರಾಗಿ ಹಾಗೂ ಸಂಭಾಷಣೆಗಾರರಾಗಿ ಗಮನ ಸೆಳೆದವರು.
ಮಠದೊಳಗಣ ಬೆಕ್ಕು, ಐಸಿನ, ದಾರಾಶಿಕೋ, ಒಂದು ಬೊಗಸೆ ನೀರು ರಕ್ತದ ಬಣ್ಣ ಕಪ್ಪು ಸಗಟು ಕವಿಯ ಚಿಲ್ಲರೆ ಪದ್ಯಗಳು…. ಮುಂತಾದವು ಇವರ ಪ್ರಮುಖ ಕೃತಿಗಳು.
ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ಕುವೆಂಪು ಶ್ರೀ ಪ್ರಶಸ್ತಿ, ರಂಗಜಂಗಮ ಪ್ರಶಸ್ತಿ ಇವರಿಗೆ ಲಭಿಸಿರುವ ಅನೇಕ ಪ್ರಶಸ್ತಿಗಳಲ್ಲಿ ಕೆಲವು.
ಡಾ. ರಾಜೇಂದ್ರ ಚೆನ್ನಿ
ಕುವೆಂಪು ವಿವಿಯ ನಿವೃತ್ತ ಪ್ರಾಧ್ಯಾಪಕರು ಹಾಗೂ ನಾಡಿನ ಖ್ಯಾತ ವಿಮರ್ಶಕರು. ಕನ್ನಡ, ಇಂಗ್ಲಿಷ್ ಎರಡು ಭಾಷೆಗಳಲ್ಲಿ ಲೇಖನ, ವಿಮರ್ಶೆ,ಕಥೆಗಳನ್ನು ಬರೆಯುತ್ತಲೇ ಜನಪರ ಚಳುವಳಿ ಹಾಗೂ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಿಎಸ್‌ಎಸ್