Padma Bhushan Award ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡಿಗರಾದ , ಸಾಹಿತಿ .ಎಸ್ಎಲ್ ಭೈರಪ್ಪ,ಹಾಗೂ ಸುಧಾಮೂರ್ತಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು.
ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಭೈರಪ್ಪನವರಿಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಲಭಿಸಿದರೆ, ಸಮಾಜಸೇವೆಗಾಗಿ ಸುಧಾಮೂರ್ತಿ ಅವರಿಗೆ ಲಭಿಸಿದೆ.
Padma Bhushan Award ಕನ್ನಡದ ಹೆಸರಾಂತ ಕಾದಂಬರಿಗಾರರಲ್ಲಿ ಒಬ್ಬರಾದ, ತಮ್ಮ ವಿಚಾರಧಾರೆಗಳನ್ನ ಬರವಣಿಗೆಯ ಮೂಲಕ ಜನರ ಮನಸ್ಸನ್ನು ತಟ್ಟುವ ಲೇಖಕರಾದ ಎಸ್ .ಎಲ್. ಭೈರಪ್ಪ ಹಾಗೂ ಸರಳತೆ, ಸಜ್ಜನಿಕೆಗೆ ಇನ್ನೊಂದು ಹೆಸರು ಎಂಬಂತೆ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಜನರ ಮನಸ್ಸಲ್ಲಿ ಅಚ್ಚಳಿಯದೇ ಉಳಿದಿರುವ ಸುಧಾ ಮೂರ್ತಿಯವರಿಗೆ ಪದ್ಮಭೂಷಣ ಪುರಸ್ಕಾರ ದೊರೆತಿರುವುದು ನಿಜಕ್ಕೂ ಹೆಮ್ಮೆಯ ವಿಷಯ.
ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುಧಾ ಮೂರ್ತಿ ಅವರ ಪತಿ ಮತ್ತು ಇನ್ಫೋಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ, ಪುತ್ರ ರೋಹನ್ ಮೂರ್ತಿ ಮತ್ತು ಅವರ ಸಹೋದರಿ ಡಾ ಸುನಂದಾ ಕುಲಕರ್ಣಿ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಸುಧಾಮೂರ್ತಿ ಅವರ ಪುತ್ರಿ, ಯುಕೆ ಪ್ರಧಾನಿ ರಿಷಿ ಸುನಕ್ ಅವರನ್ನು ವಿವಾಹವಾಗಿರುವ ಅಕ್ಷತಾ ಮೂರ್ತಿ ಕೂಡ ಉಪಸ್ಥಿತರಿದ್ದರು.