Hanuman Jayanti ಶ್ರೀಹನುಮಂತದೇವರು ಅವತರಿಸಿದ ದಿವಸ
ಚೈತ್ರಶುದ್ಧ ಪೌರ್ಣಿಮೆ
“ಬುದ್ಧಿರ್ಬಲಂ ಯಶೋಧೈರ್ಯಂ
ನಿರ್ಭಯತ್ವಮರೋಗತಾ/
ಅಜಾಡ್ಯಂ ವಾಕ್ಪಟುತ್ವಂಚ ಹನು
ಮತ್ಸ್ಮರಾಣದ್ಭವೇತ್//
ಹೊಸ ಸಂವತ್ಸರದ ಚೈತ್ರಶುಕ್ಲನವಮಿ ಹನುಮಂತನಸ್ವಾಮಿಯಾದ ರಾಮಚಂದ್ರ ಪ್ರಭುವಿನ ಅವತಾರದ ದಿನವಾದರೆ,ಚೈತ್ರ ಶುಕ್ಲ ಪೌರ್ಣಮಿಯಂದು ರಾಮನ ಸೇವಕ ಹನುಮಂತನ ಅವತಾರದ ದಿನವಾಗಿರುತ್ತೆ.
ಹನುಮಂತನು ಬುದ್ಧಿ ಮತ್ತು ಶಕ್ತಿಯ ಸಂಕೇತವೆಂದು ಹೇಳಬಹುದು.”ಹನುಮ ನಮ್ಮ
ತಾಯಿತಂದೆ,ಹನುಮ ನಮ್ಮ ಬಂಧುಬಳಗ”ಎಂದು
ಹರಿದಾಸರುಗಳು ತಮ್ಮ ಕೀರ್ತನೆಗಳಲ್ಲಿ ಕೊಂಡಾಡಿದ್ದಾರೆ.
ಶ್ರೀವ್ಯಾಸರಾಯತೀರ್ಥ ಶ್ರೀಪಾದಂಗಳವರು ಹನುಮಂತ ದೇವರ ಅನುಗ್ರಹ ಜನರಿಗೆ ದೊರಕಲಿ
ಎಂದು ಬಹಳಷ್ಟು ಕಡೆ ಹನುಮಂತದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದಾರೆ.
ಶ್ರೀರಾಮ ಮತ್ತು ಲಕ್ಷ್ಮಣರು ಸೀತಾದೇವಿಯನ್ನು
ಹುಡುಕುತ್ತಾ ಬಂದಾಗ ಮೊದಲು
ಹನುಮಂತನು ಸಿಗುತ್ತಾನೆ.ಹನುಮಂತನಿಗೆ ತನ್ನ ಆರಾಧ್ಯಮೂರುತಿ ರಾಮಚಂದ್ರದೇವರು ಸಿಕ್ಕಿದ್ದು
ಬಹಳ ಸಂತೋಷವಾಗುತ್ತದೆ.ಹನುಮಂತನ ಮೂಲಕ ಸುಗ್ರೀವನ ಪರಿಚಯವಾಗುತ್ತದೆ.
ತನ್ನಣ್ಣ ವಾಲಿಯಿಂದ ವಂಚನೆಗೊಳಗಾಗಿದ್ದ ಸುಗ್ರೀವನಿಗೆ ಶ್ರೀರಾಮಚಂದ್ರನಿಂದ ವಾಲಿಯು
ಕಸಿದುಕೊಂಡಿದ್ದ ಕಿಷ್ಕಿಂಧೆಯ ರಾಜ್ಯಭಾರವನ್ನು ಮರಳಿ ಸಿಗುವಂತೆ ಮಾಡುತ್ತಾನೆಹನುಮ.
ಸೀತೆಯನ್ನು ಹುಡುಕಲು ಹೋಗುವಾಗ ಸಮುದ್ರ
ಲಂಘನ ಮಾಡಬೇಕಾಗಿರುತ್ತೆ.ಎಲ್ಲ ವಾನರ ಕಪಿ ವೀರರು ತಮಗೆ ಅಷ್ಟು ದೀರ್ಘಕಾಲ ದೊಡ್ಡ ಸಮುದ್ರವನ್ನು ಹಾರಲಿಕ್ಕೆ ಸಾಧ್ಯವಿಲ್ಲವೆಂದು ಹೇಳಿದಾಗ ,ಹನುಮಂತನು ತಾನು ಲಂಕೆಗೆ ಹೋಗಿ ಸೀತಾಮಾತೆಯನ್ನು ಹುಡುಕುವುದಕ್ಕಾಗಿ ಸಮುದ್ರಲಂಘನ ಮಾಡುವುದಾಗಿ ಕಪಿಸೈನ್ಯದ
ತಲೆನೋವು ತಪ್ಪಿಸುತ್ತಾನೆ.ತನ್ನ ಸ್ವಾಮಿಯ ಕೆಲಸಕ್ಕೆ
ತಾನು ಸದಾ ಸಿದ್ಧ ಎಂಬುದನ್ನು ತೋರಿಸುತ್ತಾನೆ
ಹನುಮ.
Hanuman Jayanti ಲಂಕೆಯಲ್ಲಿ ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಿದಾಗಹನುಮಂತನಬಾಲಸುಡುವುದಿಲ್ಲ,ಆದರೆ ಬಾಲಕ್ಕೆ ಹಚ್ಚಿದ ಬೆಂಕಿಯಿಂದ ಲಂಕಾಪಟ್ಟಣವನ್ನೇ ಸುಡುವಂತೆಮಾಡುತ್ತಾನೆವೀರಹನುಮ.
ಲಂಕೆಯಲ್ಲಿ ಸೀತೆಯಿದ್ದ ಅಶೋಕವನ ಮತ್ತು ರಾಮ ಭಕ್ತ ವಿಭೀಷಣನ ಮನೆ ಇವೆರಡಕ್ಕೂ ಬೆಂಕಿ ತಾಗಿರುವುದಿಲ್ಲ.
ಹನುಮಂತನು ಮೊದಲು ಸೀತಾಮಾತೆಯನ್ನು
ನೋಡಿರುವುದಿಲ್ಲ.ಶ್ರೀರಾಮಚಂದ್ರನು ಕೊಟ್ಟ ಮುದ್ರೆಯುಂಗರವನ್ನು ಜೊತೆಯಲ್ಲಿ ತಂದಿರುತ್ತಾನೆ.
ಮೊದಲು ಲಂಕಾಧೀಶ ರಾವಣನ ಅರಮನೆಗೆ ಬಂದು ಅಲ್ಲಿ ಮಲಗಿದ್ದ ಮಂಡೋದರಿಯನ್ನು ನೋಡಿ ಸೀತೆ ಇವಳಲ್ಲವೆಂದು ಯೋಚಿಸಿ ಸೀದಾ ಅಶೋಕವನಕ್ಕೆ ಬಂದು ಅಲ್ಲಿ ರಾಕ್ಷಸಿಯರ ಮಧ್ಯೆ
ಬಂಧನದಲ್ಲಿದ್ದ ಸೀತೆಯನ್ನು ನೋಡಿ ತಾನು ಶ್ರೀರಾಮನ ಕಡೆಯಿಂದ ಬಂದಿರುವನೆಂಬುದನ್ನು
ತಿಳಿಸಲು ರಾಮನ ಮುದ್ರೆಯುಂಗುರವನ್ನು ಕೊಡುತ್ತಾನೆ.ಸೀತೆಗೆ ಇವನ ಹಾವಭಾವಗಳನ್ನು ನೋಡಿ ಇವನು ತನ್ನ ಸ್ವಾಮಿಯ ಕಡೆಯವನೆಂದು
ನಂಬಿಕೆ ಬರುತ್ತದೆ.ತಾನೂ ತನ್ನ ಬಳಿಯಿದ್ದ ಚೂಡಾ
ಮಣಿಯನ್ನು ಹನುಮನಿಗೆ ಕೊಟ್ಟು ತನ್ನ ಸ್ವಾಮಿಗೆ
ಕೊಡುವಂತೆ ತಿಳಿಸಿ ಕಳಿಸುತ್ತಾಳೆ.
ಭಕ್ತಿಯ ದ್ಯೋತಕ ಹನುಮಂತದೇವರು “ಅಜಪದವಿಯನೆ ರಾಮ ಕೊಡಬರಲು ಹನುಮಂತ ನಿಜ ಭಕುತಿಯನೆ ಬೇಡ್ಯಾವ ವರವ
ಪಡೆದ”.ಹನುಮಂತ ದೇವರಿಗೆ ಶ್ರೀರಾಮನಲ್ಲಿಯ ಭಕುತಿಯ ಎದುರು ಸಂಪತ್ತು ತುಂಬಿದ ಜಗತ್ತು ಅವರಿಗೆ ಏನೂ ಅಲ್ಲ.ಹನುಮಂತದೇವರಿಗೆ ತಮ್ಮ ಪ್ರಾಣಕ್ಕಿಂತಲೂ ಪ್ರಿಯವಾದದ್ದು ಶ್ರೀರಾಮ ಸೇವೆ.
ಹನುಮನ ಭಕ್ತಿಯ,ಶಕ್ತಿಯ ಸಂಪೂರ್ಣ ಪರಿಚಯವಿರುವುದರಿಂದಲೇನೇ ಸರ್ವಜ್ಞನಾದ ಶ್ರೀರಾಮ ಸೀತೆಗೆ ಉಂಗುರ ಅವನ ಮೂಲಕ ಕಳಿಸಿದ್ದು .
ರಾವಣನು ನೆರೆದ ರಾಜ ಸಭೆಯಲ್ಲಿ ಹನುಮಂತನಿಗೆ”ಕಪಿಯೇ ನೀನು ಯಾರು? ಎಂದು
ಕೇಳಿದಾಗ ತನ್ನ ಬಗ್ಗೆ ಏನನ್ನೂ ಹೇಳಿಕೊಳ್ಳದೇ
“ದಾಸೋಹಂ ಕೋಸಲೇಂದ್ರಸ್ಯ”ಶ್ರೀರಾಮನ ನಿಜವಾದ ದಾಸ ತಾನು ಎಂದು ಹೇಳಿ ಕೊಳ್ಳುತ್ತಾನೆ.ಹನುಮಂತದೇವರಿಗೆ ತಮಗಿಂತಲೂ ಪ್ರಿಯವಾದದ್ದು,ಶ್ರೀರಾಮನ ಪಾದಕಮಲಗಳಲ್ಲಿ
ನಿಜ ಭಕುತಿ ಎಂಬುದು ವಿದಿತವಾಗುತ್ತದೆ.
ಇಂತಹ ಶುದ್ಧ ಭಕ್ತಿಯೇ ಮೂರ್ತಿವೆತ್ತ ಶ್ರೀಹನುಮಂತ ದೇವರಲ್ಲಿ ಭಕ್ತಿಯ ನಮನಗಳನ್ನು ಸಲ್ಲಿಸಿ ಅವರ ಅನುಗ್ರಹ ಪಡೆಯೋಣ.
ಲೇ: ಎನ್.ಜಯಭೀಮ ಜೊಯಿಸ್.ಶಿವಮೊಗ್ಗ