ISRO ಪುನರ್ ಬಳಕೆಯ ಉಡಾವಣಾ ವಾಹನದ ಪ್ರಯೋಗ ಪರೀಕ್ಷೆಯನ್ನು (ಆರ್‌ಎಲ್‌ವಿ ಎಲ್‌ಇಎಕ್ಸ್) ಭಾರತೀಯ ಬಾಹ್ಯಾಕಾಶ ಸಂಶೋಧನಾ (ಇಸ್ರೋ) ಯಶಸ್ವಿಯಾಗಿ ಕೈಗೊಂಡಿದೆ.
ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್‌ನಿಂದ ಬೆಳಿಗ್ಗೆ 7.10ಕ್ಕೆ ‘ಆರ್‌ಎಲ್‌ವಿ’ ಟೇಕಾಫ್ ಆಗಿ 4.5 ಕಿ.ಮೀ. ಎತ್ತರದಷ್ಟು ಹಾರಾಟ ನಡೆಸಿತು. ನಂತರ, ಸ್ವಯಂಚಾಲಿತವಾಗಿ 7.40ಕ್ಕೆ ಇಳಿಯಿತು ಎನ್ನಲಾಗುತ್ತಿದೆ.
ISRO ಹೆಲಿಕಾಪ್ಟರ್ ಮೂಲಕ 4.5 ಕಿಮೀ ಎತ್ತರಕ್ಕೆ ಸಾಗಿಸಿ ಎಂದು ರನ್‌ವೇಯಲ್ಲಿ ಸ್ವಯಂ ‘ಲ್ಯಾಂಡಿಂಗ್’ ಮಾಡಿರುವುದು ವಿಶ್ವದಲ್ಲಿ ಇದೇ ಮೊದಲು ಹಾಗೂ ಇಸ್ರೋ ಅಭಿವೃದ್ಧಿಪಡಿಸಿರುವ ಹಲವು ಸ್ವದೇಶಿ ವ್ಯವಸ್ಥೆಗಳನ್ನು ಎಲ್ ಇಎಕ್ಸ್ ಬಳಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಸಮೀಪದ ವೈಮಾನಿಕ ಪರೀಕ್ಷಾ ವಲಯದಲ್ಲಿ (ಎಟಿಆರ್) “ಚಿನೂಕ್’ ಹೆಲಿಕಾಪ್ಟರ್ ಬಳಸಿ ಈ ಪರೀಕ್ಷೆ ಕೈಗೊಳ್ಳಲಾಗಿದೆ.
ಡಿಆರ್‌ಡಿಒ ಮತ್ತು ಭಾರತೀಯ ವಾಯು ಪಡೆ ಸಹಯೋಗದಲ್ಲಿ ಈ ಕಾರ್ಯ ಕೈಗೊಳ್ಳಲಾಗಿದೆ.