Summer Camps In Shimoga ಶಿವಮೊಗ್ಗ ನಗರದ ಸ್ಟೈಲ್ ಡಾನ್ಸ್ ಕ್ರಿವ್ ಶಿವಮೊಗ್ಗ ಸಂಸ್ಥೆಯ “ಮಜಾ ವಿತ್ ರಜಾ” ಎಂಬ ಹೆಸರಿನಡಿ 15ನೇ ವರ್ಷದ ರಾಜ್ಯಮಟ್ಟದ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಸಂಸ್ಥೆಯ ಅಧ್ಯಕ್ಷ ಕೆ.ಈ. ಕಾಂತೇಶ್ ಉದ್ಘಾಟಿಸಿ ಮಾತನಾಡುತ್ತಾ, ಮಕ್ಕಳಿಗೆ ಒಳ್ಳೆಯ ವಿಷಯಗಳನ್ನು ಕಲಿಸಿಕೊಡಲು ಇಂತಹ ಶಿಬಿರಗಳು ಸಹಕಾರಿಯಾಗಲಿವೆ. ಹಿಂದಿನ ದಿನಗಳಲ್ಲಿ ಇಂತಹ ಶಿಬಿರಗಳು ನಡೆಯುತ್ತಿರಲಿಲ್ಲ. ನಮಗೆ ಅವಕಾಶಗಳು ಸಿಗುತ್ತಿರಲಿಲ್ಲ. ಇಂದು ಹಲವಾರು ಅವಕಾಶಗಳು ದೊರೆಯುತ್ತಿದ್ದು, ಮಕ್ಕಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಶಿಬಿರದಲ್ಲಿ ಅನೇಕ ಮಾದರಿಯ ನೃತ್ಯ, ಸಂಗೀತ,ಕರಾಟೆ,ಯೋಗ, ಚಿತ್ರಕಲೆ, ಸಿನಿಮಾ, ನಾಟಕ,ನಿರೂಪಣೆ, ಆಡಿಷನ್,ಫ್ಯಾಷನ್ ಷೋ, ಜಿಮ್ನಾಸ್ಟಿಕ್ಸ್, ದೇಸಿ ಆಟ, ಪರೀಕ್ಷಾ ಸಿದ್ದತೆ, ತಂದೆ ತಾಯಿ ಗುರು ಹಿರಿಯರ ಸಂಸ್ಕೃತಿ, ಇತ್ಯಾದಿ ಒಂದೇ ಸೂರಿನಡಿ ಹೇಳಿಕೊಡಲಾಗುವುದು ಎಂದರು.
Summer Camps In Shimoga ಸಂಸ್ಥೆಯ ಸಂಸ್ಥಾಪಕರಾದ ಶಶಿಕುಮಾರ್ ಅವರು ಮಾತನಾಡಿ, ಮಕ್ಕಳು ಸಮಾಜದ ಭವಿಷ್ಯ. ಅವರಲ್ಲಿ ಉನ್ನತ ವ್ಯಕ್ತಿತ್ವವನ್ನು ರೂಪುಗೊಳಿಸುವುದು ಇಂದಿನ ಅವಶ್ಯಕತೆಯಾಗಿದೆ. ಅದರಲ್ಲೂ ಕೊಳಗೇರಿಗಳ ಮಕ್ಕಳಿಗೆ ಹೆಚ್ಚಿನ ಗಮನ ಕೊಡುವ ಅಗತ್ಯವಿದೆ. ಇಂದಿನ ಟಿವಿ ಮಾದ್ಯಮ, ಮೊಬೈಲ್‌ಗಳ ಅತಿಯಾದ ಬಳಕೆಯಿಂದ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತಿದ್ದು, ಉನ್ನತ ಭಾವನೆಗಳು, ಮೌಲ್ಯಗಳು ನಶಿಸಿಹೋಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಏಪ್ರಿಲ್ 10ರ ಒಳಗೆ ನಮ್ಮ ಶಿಬಿರಕ್ಕೆ ಸೇರಿದ ಪುಟಾಣಿ ಮಕ್ಕಳಿಗೆ ಶುಲ್ಕದಲ್ಲಿ 50% ರಿಯಾಯಿತಿಯನ್ನು ನೀಡಲಿದ್ದೇವೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಶಶಿಕುಮಾರ್ ಎನ್ ಅವರು ತಿಳಿಸಿದ್ದಾರೆ.
ಶಿಬಿರದ ನೊಂದಣಿಗಾಗಿ ಕೂಡಲೇ ಕರೆ ಮಾಡಿ : 98453 – 88028ಗೆ ಸಂಪರ್ಕಿಸಿ ಎಂದರು.