Karnataka Election Dates 2023 ಈಗ ಬಹಳ ದಿನಗಳಿಂದ ರಾಜ್ಯದ ಜನತೆ ಕುತೂಹಲ
ತಾಳಿದ್ದ ವಿಧಾನ ಸಭಾ ಚುನಾವಣಾ ದಿನಾಂಕ ಪ್ರಕಟಗೊಂಡಿದೆ.
ಭಾರತೀಯ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಶ್ರೀ ರಾಜೀವ್ ಕುಮಾರ್ ಈಗ ಸ್ವಲ್ಪಹೊತ್ತಿಗೆ ಮುಂಚೆ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಮೇ10 ರಂದು ಚುನಾವಣೆ ನಡೆಸಲು
ಆಯೋಗ ದಿನಾಂಕವನ್ನು ಫಿಕ್ಸ್ ಮಾಡಿದ ಸಂಗತಿಯನ್ನ ತಿಳಿಸಿದರು.
ಒಂದೇ ಹಂತದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ.
ಪ್ರಸ್ತುತ ರಾಜ್ಯ ವಿಧಾನ ಸಭೆ ಅವಧಿಯು ಏಪ್ರಿಲ್ 24 ಕ್ಕೆ ಮುಗಿಯಲಿದೆ.
Karnataka Election Dates 2023 ರಾಜ್ಯದಲ್ಲಿ 224 ವಿಧಾನಸಭಾ ಕ್ಷೇತ್ರಗಳಿವೆ .ಅವುಗಳಲ್ಲಿ 36 ಪ.ಜಾತಿ ಮತ್ತು 16 ಪ.ವರ್ಗಗಳಿಗೆ ಮೀಸಲಾಗಿವೆ.
ರಾಜ್ಯದಲ್ಲಿ ಈಗ 5.21 ಕೋಟಿ ಅರ್ಹ ಮತದಾರರಿದ್ದಾರೆ.
( ಪುರುಷರು 2.62 ಕೋಟಿ ಮತ್ತು ಮಹಿಳೆಯರು 2.59 ಕೋಟಿ)
ಮೇ10 ಚುನಾವಣೆ ಪ್ರಕ್ರಿಯೆ. ಮೇ13 ಮತಗಳ ಎಣಿಕೆ ಮತ್ತು ಫಲಿತಾಂಶ ನಡೆಯಲಿದೆ.
ಏಪ್ರಿಲ್ 13 ನಾಮ ಪತ್ರ ಸಲ್ಲಿಕೆ ಆರಂಭ.
ಏಪ್ರಿಲ್ 20 ನಾಮಪತ್ರ ಸಲ್ಲಿಕೆ ಕೊನೇದಿನ.
ಏಪ್ರಿಲ್ 21 ನಾಮಪತ್ರ ಪರಿಶೀಲನೆ. ನಾಮಪತ್ರ ವಾಪಸ್ ಏಪ್ರಿಲ್24.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಚುನಾವಣಾ ನೀತಿ ಸಂಹಿತೆ ತಮ್ಮ ಪ್ರಕಟಣೆಯ ತಕ್ಷಣ ಜಾರಿಗೆ ಬರುವುದಾಗಿ ತಿಳಿಸಿದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.