Right to Health Bill ರಾಜಸ್ಥಾನ ವಿಧಾನಸಭೆಯಲ್ಲಿ ಅಂಗೀಕರಿಸಿರುವ ಅಸಾಂವಿಧಾನಿಕ ಆರ್.ಬಿ.ಹೆಚ್. ಬಿಲ್ 2023ಅನ್ನು ಕೈಬಿಡಲು ಒತ್ತಾಯಿಸಿ ಜಿಲ್ಲಾ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮೂಲಕ ರಾಜಸ್ಥಾನ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಿ ಒತ್ತಾಯಿ ಸಿದರು.
ಈ ವೇಳೆ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಚೈತನ್ಯ ಸವೂರ್ ಕಾನೂನು ಖಾಸಗೀ ವಲಯದ ಆಸ್ಪತ್ರೆಗಳು ಸಹ ತುರ್ತು ಸಂದರ್ಭಗಳಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆಯನ್ನು ಒದಗಿಸುವುದನ್ನು ಒಳಗೊಂಡಿದೆ. ಆದರೆ ತುರ್ತು ಪರಿಸ್ಥಿತಿ ಎಂದರೆ ಏನೆಂದು ವ್ಯಾಖ್ಯಾನ ನೀಡುವಲ್ಲಿ ಈ ಪ್ರಸ್ತುತ ಕಾನೂನು ವಿಫಲವಾಗಿದೆ. ಇದರಿಂದಾಗಿ ರಾಜಸ್ಥಾನದ ವೈದ್ಯಕೀಯ ವೃತ್ತಿಯು ಮತ್ತು ಸಾರ್ವಜನಿಕ ಆರೋಗ್ಯವು ಆತಂಕಕ್ಕೊಳಗಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರ ಆರೋಗ್ಯದ ಹಕ್ಕು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಜವಾಬ್ದಾರಿಯಾಗಿದೆ. ಇದರ ಹೊಣೆ ಸರ್ಕಾರಿ ಆಸ್ಪತ್ರೆಗಳು ಮತ್ತು ಸಂಸ್ಥೆಗಳು ಹೊರಬೇಕಾಗಿದೆ. ಈ ಹೊಣೆಗಾರಿಕೆಯನ್ನು ಖಾಸಗೀಯವರಿಗೆ ವರ್ಗಾ ಯಿಸುವ ಮೂಲಕ ಸರ್ಕಾರವು ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳು ಸಾಧ್ಯವಿಲ್ಲ. ಇದೊಂದು ಕೆಟ್ಟ ಕಾನೂನಾ ಗಿದೆ ಎಂದು ಹೇಳಿದರು.
Right to Health Bill ಈಗಾಗಲೇ ದುರ್ಬಲವಾಗಿರುವ ಖಾಸಗೀ ಆರೋಗ್ಯ ವ್ಯವಸ್ಥೆಯು ಕುಸಿತ ಸೇರಿದಂತೆ ಅನೇಕ ಅನಿರೀಕ್ಷಿತ ಪರಿಣಾಮಗಳನ್ನು ಉಂಟು ಮಾಡಲಿದೆ. ಭಾರತ ಶೇ.70-80 ಆರೋಗ್ಯ ಸೇವಾಸೌಲಭ್ಯಗಳ ಹೊಣೆ ಹೊತ್ತು ರಾಷ್ಟ್ರ ನಿರ್ಮಾಣ ಮತ್ತು ಆರೋಗ್ಯ ವಿತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಖಾಸಗೀ ಕ್ಷೇತ್ರಕ್ಕೆ ಮಾರಕವಾಗಿ ರುವ ಈ ಕ್ರಮವು ರಾಷ್ಟ್ರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಿರುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಅಸೋಸಿಯೇಷನ್ ಕಾರ್ಯದರ್ಶಿ ಕಾರ್ತಿಕ್ ವಿಜಯ್, ವೈದ್ಯರಾದ ಡಾ. ಶುಭ ವಿಜಯ್, ಡಾ. ಮೀರಾಕುಚೇಂದ್ರ ಉಪಸ್ಥಿತರಿದ್ದರು.
Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.