Protest against Rahul Gandhi’s Disqualification as MP ರಾಹುಲ್‌ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವ ಸ್ಥಾನದಿಂದ ಅನರ್ಹ ಗೊಳಿಸಿರುವುದು ಹಾಗೂ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮುಸ್ಲಿಂ ಸಮುದಾಯವನ್ನು ಆರ್ಥಿಕ ದುರ್ಬಲ ವರ್ಗಕ್ಕೆ ಸೇರಿಸಿ, ಶೇ. 4 ಮೀಸಲಾತಿ ಕಸಿದುಕೊಂಡಿರುವುದನ್ನು ಖಂಡಿಸಿ ಕಾಂಗ್ರೆಸ್ ಕಿಸಾನ್ ಸೆಲ್ ಘಟಕದ ವತಿ ಯಿಂದ ನಗರದ ಹನುಮಂತಪ್ಪ ವೃತ್ತದಲ್ಲಿ ಪಂಜಿನ ಮೂಲಕ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ ಲೋಕಸಭೆಯಲ್ಲಿ ರಾಹುಲ್‌ಅವರು ಇಲ್ಲದಿದ್ದರೆ ನಮಗೆ ನಷ್ಟ. ನಮಗೆ ಅವರು ಬೇಕು. ಅವರನ್ನು ಅನರ್ಹಗೊಳಿಸಿರುವುದು ಸರಿಯೇ ಎಂದು ಪ್ರಶ್ನಿಸಿದರು.
ರಾಜ್ಯದ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಕೇವಲ ಮುಸ್ಲಿಂ ಮೀಸಲಾತಿಯನ್ನು ಕಸಿದುಕೊಂಡು ಕೀಳುಮಟ್ಟದ ರಾಜಕೀಯ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.
Protest against Rahul Gandhi’s Disqualification as MP ಮುಖಂಡ ಕೆ.ಮಹಮದ್ ಮಾತನಾಡಿ ಅಲ್ಪಸಂಖ್ಯಾತರಿಗೆ ಶೇ.4 ಮೀಸಲಾತಿ ರದ್ದುಗೊಳಿಸಲು ಸಂಪುಟ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ. ಮತ ಬ್ಯಾಂಕ್‌ಗಾಗಿ ಬಿಜೆಪಿ ಸರ್ಕಾರ ಈ ರೀತಿ ಮಾಡಿ ದಡ್ಡತನ ಪ್ರದರ್ಶಿ ಸಿದೆ ಎಂದು ದೂರಿದರು. ಸಮುದಾಯದವರನ್ನು ಕೆರಳಿಸುವಂತಹ ಕೆಲಸಕ್ಕೆ ಕೈಹಾಕಬಾರದು. ನಮ್ಮ ಹಕ್ಕು ಪಡೆದುಕೊಳ್ಳಲು ನಾವು ಹೋರಾಟ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಿಸಾನ್ ಅಧ್ಯಕ್ಷ ರಸೂಲ್‌ಖಾನ್, ಮುಖಂಡರುಗಳಾದ ಅತೀಕ್ ಖೈಸರ್, ನೂರ್ ಅಹ್ಮದ್, ಜಂಶೀದ್, ಜೋಹರ್ ಫೈಲ್ವಾನ್, ಶಹಬುದ್ದೀನ್, ನಜೀರ್ ಅಹ್ಮದ್, ಇರ್ಫಾನ್ ಮತ್ತಿತರರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.