Indian Space Research Organisation ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಬೃಹತ್ ಎಲ್ ವಿ ಎಂ3- ಎಂ3 ರಾಕೆಟ್ ಬ್ರಿಟನ್ ಮೂಲದ ಒನ್ ವೆಬ್ ಗ್ರೂಪ್ ಸಂಸ್ಥೆಯ 36 ಉಪಗ್ರಹಗಳನ್ನು ಮಾರ್ಚ್ 26ರಂದು ಯಶಸ್ವಿಯಾಗಿ ಕಕ್ಷೆಗೆ ತಲುಪಿಸಲಾಯಿತು.
ಎಲ್ ವಿ ಎಂ3- ಎಂ3 / ಒನ್ ವೆಬ್ ಇಂಡಿಯ -2 ಎಂದು ಈ ಯೋಜನೆಯನ್ನು ಕರೆಯಲಾಗಿದೆ. ಉಪಗ್ರಹಗಳನ್ನು ಹೊತ್ತ ರಾಕೆಟ್ ಇಲ್ಲಿನ ಕೇಂದ್ರದಿಂದ ಬೆಳಗ್ಗೆ 9 ಗಂಟೆಗೆ ಉಡಾವಣೆ ಮಾಡಲಾಯಿತು.
ಸಿಬ್ಬಂದಿ ಸಹಿತ ಗಗನಯನ ಯೋಜನೆಗೆ ಬಳಸಿರುವ ತಾಂತ್ರಿಕ ಸಂಯೋಜನೆಯನ್ನೇ ಈ ರಾಕೆಟ್ ನಲ್ಲಿಯೂ ಬಳಸಲಾಗಿದೆ. ಈ ರಾಕೆಟ್ ಅತ್ಯುತ್ತಮ ರೀತಿಯಲ್ಲಿ ಕಾರ್ಯಚರಣೆ ಮಾಡಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರು ತಿಳಿಸಿದ್ದಾರೆ.
Indian Space Research Organisation ರಾಕೆಟ್ ಉಡಾವಣೆಯಾದ 20 ನಿಮಿಷಗಳಲ್ಲಿ ಒಟ್ಟು 16 ಉಪಗ್ರಹಗಳನ್ನು ನಿಗದಿತ ಪಕ್ಷಿಗಳಿಗೆ ಸೇರಿಸಲಾಯಿತು. ನಂತರ ಬಾಕಿ ಉಪಗ್ರಹಗಳನ್ನ ಪಕ್ಷಿಗಳಿಗೆ ಸೇರಿಸಲಾಯಿತು. ಒಟ್ಟು 5,805 ಕೆ.ಜಿ ತೂಕವಿದ್ದ ಉಪಗ್ರಹಗಳನ್ನು ಸುಮಾರು 9 ನಿಮಿಷಗಳಲ್ಲಿ 450ಕಿ. ಮೀ ಎತ್ತರಕ್ಕೆ ಈ ರಾಕೆಟ್ ಹೊತ್ತೊಯ್ದಿದೆ ಎಂದು ಇಸ್ರೋ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಲಾಗಿದೆ.
ಎಲ್ಲಾ 36 ಉಪಗ್ರಹಗಳು ನಿಗದಿತ ಕಕ್ಷೆಗಳಿಗೆ ಎಂದು ತಲುಪಿವೆ ಎಂದು ಒನ್ ವೆಬ್ ಮಾಹಿತಿ ನೀಡಿದೆ ಎಂದು ಇಸ್ರೋ ತನ್ನ ವರದಿಯಲ್ಲಿ ತಿಳಿಸಿದೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.